ಸಿದ್ದಾಪುರ, ಏ. ೨೧: ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭ ಬ್ಯಾಂಕ್ ಒಂದರ ಚೆಕ್ ಬಿದ್ದಿರುವುದನ್ನು ಕಂಡ ಆಟೋ ಚಾಲಕಿ ಸುಜಾತ ತಕ್ಷಣ ಸಿದ್ದಾಪುರ ಠಾಣೆಗೆ ಒಪ್ಪಿಸಿ ಮಾನವೀಯತೆ ತೋರಿದ್ದಾರೆ.
ಸುಜಾತ ಕೆಲಸದ ನಿಮಿತ್ತ ತೆರಳಿದ ಸಂದರ್ಭ ಮುಖ್ಯರಸ್ತೆ ಬದಿಯಲ್ಲಿ ಬ್ಯಾಂಕ್ ಆಫ್ ಬರೋಡ ಸಿದ್ದಾಪುರ ಶಾಖೆಗೆ ಸೇರಿದ ಸುಮಾರು ೬೧,೮೦೦ ರೂ.ಗಳ ಬರಹದ ಚೆಕ್ ಬಿದ್ದು ಸಿಕ್ಕಿದ್ದು, ತಕ್ಷಣ ಸಿದ್ದಾಪುರ ಪೊಲೀಸ್ ಠಾಣೆ ಸಹಾಯಕ ನಿರೀಕ್ಷಕ ಉತ್ತಯ್ಯ ಅವರ ಬಳಿ ಒಪ್ಪಿಸಿದ್ದಾರೆ.
ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ಸೂಕ್ತ ಮಾಹಿತಿ ನೀಡಿ ಪಡೆದುಕೊಳ್ಳಬೇಕೆಂದು ಸುಜಾತ ಮನವಿ ಮಾಡಿದ್ದಾರೆ.
ಜಿಲ್ಲೆಯ ಮೊದಲ ಮಹಿಳಾ ಆಟೋ ಚಾಲಕಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆ ಯುತ್ತಿದ್ದು ಚಾಲಕಿಯ ಮಾನವೀಯ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. -ಮುಬಾರಕ್