ಚೆಯ್ಯಂಡಾಣೆ, ಏ. ೨೧: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ ೧೪ನೇ ವಾರ್ಷಿ ಕೋತ್ಸವವು ತಾ.೨೭ ರಿಂದ ವಿವಿಧ ಕಾರ್ಯಕ್ರಮಗಳ ಮೂಲಕ ೩೦ರವರೆಗೆ ನಡೆಯಲಿದೆ.
ತಾ.೨೭ ರಂದು ಬೆಳಿಗ್ಗೆ ೯ ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ, ಸಂಜೆ ೫ಕ್ಕೆ ಬಾಚಮಂಡ ತಕ್ಕರ ಮನೆಯಿಂದ ಭಂಡಾರ ಆಗಮಿಸುವುದು, ರಾತ್ರಿ ೭ ಕ್ಕೆ ಅಂದಿ ಬೊಳಕ್, ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾಪೂಜೆ ನಡೆಯಲಿದೆ.
ತಾ.೨೮ ರಂದು ಬೆಳಿಗ್ಗೆ ೫.೩೦ ಗಂಟೆಗೆ ದೇವರ ನೃತ್ಯ ೯.೩೦ಕ್ಕೆ ವಿಶೇಷ ಪೂಜೆ, ೧೧ಕ್ಕೆ ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಹಾಪೂಜೆ ನಂತರ ಅನ್ನದಾನ, ಅಪರಾಹ್ನ ೨ ಗಂಟೆಗೆ ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ, ೩ ಗಂಟೆಗೆ ದೇವರು ಪೊನ್ನೋಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು, ಪೊನ್ನೋಲ ದೇವಸ್ಥಾನದಲ್ಲಿ ಪೂಜೆ ಸಂಜೆ ೭ಕ್ಕೆ ಮಂಟಪದಲ್ಲಿ ವಸಂತ ಪೂಜೆ ರಾತ್ರಿ ೮ಕ್ಕೆ ಮಹಾಪೂಜೆ ಮತ್ತು ಅನ್ನದಾನ ನಡೆಯಲಿದೆ.
ತಾ.೨೯ ರಂದು ಬೆಳಿಗ್ಗೆ ೯ ಗಂಟೆಯಿAದ ವಿಶೇಷ ಪೂಜೆ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ೧.೩೦ಕ್ಕೆ ವಾರ್ಷಿಕ ಮಹಾಸಭೆ, ೩.೩೦ಕ್ಕೆ ದೇವರು ಅವಬೃತ ಸ್ನಾನಕ್ಕೆ ಹೊರಡುವುದು ನಂತರ ದೇವರ ನೃತ್ಯ, ಮಹಾಪೂಜೆ, ಅನ್ನದಾನ ನಡೆಯಲಿದೆ.
ತಾ.೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಭಂಡಾರ ಲೆಕ್ಕ ಮಾಡುವುದು, ಶುದ್ಧ ಕಲಶ ಸಮಾರಾಧನೆ ಪೂಜೆ, ಮಂತ್ರಾಕ್ಷತೆ, ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದೆ.