ಕೂಡಿಗೆ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ತೊರೆನೂರು ಸಹಕಾರ ಸಂಘದ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಕೆ.ಎಸ್ ಕೃಷ್ಣ ಗೌಡ, ಎಸ್ಟಿ ಘಟಕದ ಅಧ್ಯಕ್ಷ ವಸಂತ ನೇತೃತ್ವದಲ್ಲಿ ಕಾರ್ಯಕರ್ತರು, ತೊರೆನೂರು, ಅಳುವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಿಜೆಪಿ ಪರ ಮತಯಾಚನೆ
ಕೂಡಿಗೆ: ಕೂಡುಮಂಗಳೂರು ವಾರ್ಡ್ ನಂಬರ್ ೧೫೭ ರಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್, ಸದಸ್ಯರಾದ ಮಂಜುನಾಥ್ ಮತ್ತು ಮಾಜಿ ಸದಸ್ಯೆಪಾರ್ವತಮ್ಮ, ಮಂಜುನಾಯಕ್, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್, ಮಂಜು, ಸದಾಶಿವು ಸೇರಿದಂತೆ ಕಾರ್ಯಕರ್ತರು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರ ನಡೆಸಿದರು.