ಮಡಿಕೇರಿ, ಏ. ೨೧: ದುಂದುವೆಚ್ಚ ಕಡಿಮೆ ಮಾಡಿ. ಅದೇ ಹಣವನ್ನು ರಾಜ್ಯದ ಸಾಮಾನ್ಯ ಜನತೆಯ ಬರ ಪರಿಹಾರಕ್ಕೆ ವಿನಿಯೋಗಿಸಿ ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ರಾಜ್ಯ ಸರಕಾರಕ್ಕೆ ಸಲಹೆಯಿತ್ತಿದ್ದಾರೆ.

“ಶಕ್ತಿ” ಯೊಂದಿಗೆ ಮಾತನಾಡುತ್ತಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ೧೫ ಬಾರಿ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ, ಆದರೆ, ಇದೀಗ ರಾಜ್ಯದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಒಂದೂವರೆ ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಂತಹ ಬರಗಾಲ ಸ್ಥಿತಿಯಲ್ಲಿಯೂ ಕಾರ್ಪೋರೇಷನ್, ಮಂತ್ರಿ ಮಂಡಲ ಸೇರಿ ೮೫-೯೦ ಮಂದಿಗೆ ಕ್ಯಾಬಿನೆಟ್ ದರ್ಜೆ ಸೌಲಭ್ಯವಿದೆ. ಇವರಿಗೆಲ್ಲ ಪಿಎ ಗಳು ಕಚೇರಿ ವ್ಯವಸ್ಥೆ ಎಂದು ಲೆಕ್ಕವಿಲ್ಲದಷ್ಟು ಖರ್ಚಾಗುತ್ತದೆ. ಜೊತೆಗೆ ಇದೀಗ ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆಂದು ೧ ಕ್ಯಾಬಿನೆಟ್ ದರ್ಜೆಯ ಹುದ್ದೆಯೊಂದಿಗೆ ೪ ಸ್ಟೇಟ್ ರ‍್ಯಾಂಕ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಪ್ರತಿ ಜಿಲ್ಲೆಗೂ ತಲಾ ರೂ. ೫೦ ಸಾವಿರ ವೇತನ ನೀಡಿ ಉಸ್ತುವಾರಿಗೆಂದು ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ. ಈ ರೀತಿ ಸರಕಾರದ ಅರ್ಥವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವಷ್ಟು ದುಂದು ವ್ಯಯವಾಗುತ್ತಿದೆ. ಸಿದ್ದರಾಮಯ್ಯ ಸರಕಾರ ಆಮಿಷ ತೋರಿಸುತ್ತಿದೆ ಹೊರತು ಜನತೆಯ ಭವಿಷ್ಯಕ್ಕೆ ಅಗತ್ಯವಾದ ಆಶಯಗಳನ್ನು ಚುನಾವಣಾ ಪ್ರಣಾಳಿಕೆÀಯಲ್ಲಿ ಘೋಷಿಸಿಲ್ಲ. ಮುಖ್ಯಮಂತ್ರಿ ಮಾಡಿದ ಸಾಲವನ್ನು ವೇತನಗಳಿಗೆ ವ್ಯಯ ಮಾಡಲಾಗುತ್ತ್ತಿದೆ ಹೊರತು ಜನತೆಯ ಬರಗಾಲ ನೀಗಲು ಬಳಕೆಯಾಗುತ್ತಿಲ್ಲ

ಈ ಹಿಂದೆ ಎಸ್. ಎಂ. ಕೃಷ್ಣ ಅವರ ಕಾಲದಲ್ಲ ಬರಗಾಲ ಬಂದಾಗ ರಾಜ್ಯ ಸರಕಾರವೇ ಸಾಮಾನ್ಯ ಜನರ ಒಳಿತಿಗಾಗಿ ರೂ. ೫ ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಆಗ ನಾನೂ ಸಚಿವ ಸಂಪುಟದಲ್ಲಿದ್ದು ಅದರ ಮುಖ್ಯ ಜವಾಬ್ದಾರಿಕೆಯನ್ನು ನನಗೆ ವಹಿಸಿದಾಗ ಹೀಗೆ ಬರಗಾಲ ಪರಿಹಾರಕ್ಕೆ ಖರ್ಚಾಗುವ ಹಣವನ್ನು ಹೊಂದಾಣಿಸಲು ನಾನೊಂದು ಸಲಹೆ ನೀಡಿದ್ದು ಅದು ಯಶಸ್ವಿಯಾಗಿತ್ತು. ಮಂತ್ರಿಗಳಿಗೆ ಪ್ರತಿ ತಿಂಗಳು ಕನಿಷ್ಟ ಪಕ್ಷ ಕಚೇರಿ ವ್ಯವಸ್ಥೆ, ಪಿಎ ಗಳು, ಟಿಎ ಡಿಎ ಎಂದು ತಲಾ ರೂ. ೬ ಲಕ್ಷ ಖರ್ಚಾಗುತ್ತಿತ್ತು. ಆ ಸಂದರ್ಭ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿ, ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ ಸುಮಾರು ರೂ. ೭ ಸಾವಿರ ಕೋಟಿ ಹಣ ಉಳಿತಾಯವಾಗಿತ್ತು. ಹೀಗಾಗಿ ಸರಕಾರ ಬರಗಾಲಕ್ಕೆ ಘೋಷಿಸಿದ್ದ ಪ್ಯಾಕೇಜ್‌ನ ಹಣಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಹಣ ವಾಪಸಾಯಿತು. ಆದರೆ, ಈಗ ಮುಖ್ಯಮಂತ್ರ‍್ರಿಯವರು ಹಿಂದೆ ಇದ್ದುದಕ್ಕಿಂತ ಅಧಿಕ ಹುದ್ದೆ ಸೃಷ್ಟಿಸಿ ಹದಗೆಟ್ಟ ಅರ್ಥವ್ಯವಸ್ಥೆಗೆ ಕಾರಣರಾಗಿದ್ದಾರೆ ಎಂದು ವಿಶ್ವನಾಥ್ ಗಂಭೀರ ಆರೋಪ ಹೊರಿಸಿದರು.

ಮುಖ್ಯಮಂತ್ರ‍್ರಿಯವರು ಮೋದಿ ಸರಕಾರ ಸಾಲ ಮಾಡಿದೆ ಎಂದು ಆರೋಪಿ ಸುತ್ತಾರೆ. ಹೌದು ಮೋದಿ ಸರಕಾರ ಸಾಲ ಮಾಡಿದ್ದು ನಿಜ. ಆದರೆÀ, ಈ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ? ಎಂಬುದನ್ನು ಗಮನಿಸಬೇಕಾಗಿದೆ. ಮುಖ್ಯವಾಗಿ ಈ ಹಣವು ಮೂಲಭೂತ ಸೌಲಭ್ಯಗಳಿಗೆ ಬಳಕೆಯಾಗುತ್ತಿದೆ. ರಸ್ತೆÀ್ತ- ಸೇತುವೆ ನಿರ್ಮಾಣ, ಸಂಪರ್ಕ ವಿಭಾಗಗಳಾದ ರೈಲು ಮಾರ್ಗ, ವಿಮಾನ ಮಾರ್ಗ- ಮೊದಲಾಗಿ ಜನತೆಗೆ ಬೇಕಾದ ಕಾರ್ಯಗಳಿಗಾಗಿಯೇ ಬಳಕೆಯಾಗುತ್ತ್ತಿದೆ. ಇದಲ್ಲದೆ. ಮೋದಿ ಅವರು ಉದ್ದೇಶಿಸಿರುವ “ಒನ್ ನೇಷನ್ ಒನ್ ಎಲೆಕ್ಷನ್” ಯೋಜನೆ ಜಾರಿ ಯಾದರೆ ಆಗಿಂದಾಗ ನಡೆಯುವ ಉಪ ಚುನಾವಣೆಗಳು, ಅನವಶ್ಯಕ ಹಣ ವ್ಯಯವಾಗುವಿಕೆ ಸ್ಥಗಿತವಾಗುತ್ತದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.