ಸೋಮವಾರಪೇಟೆ, ಏ. ೨೨: ಇಲ್ಲಿನ ಮಹದೇಶ್ವರ ಬ್ಲಾಕ್ನ ಶ್ರೀ ಮಹದೇಶ್ವರ ಭಕ್ತವೃಂದದ ವತಿಯಿಂದ ಶನಿವಾರ ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ೭ನೇ ವಾರ್ಷಿಕ ಮಹಾಪೂಜೆ ನಡೆಯಿತು. ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆ ೮ಕ್ಕೆ ಮಹಾಗಣಪತಿ ಹೋಮ, ೧೦ಕ್ಕೆ ದುರ್ಗಾಹೋಮ ಹಾಗೂ ಕಳಸ ಪ್ರತಿಷ್ಠಾಪನೆ, ೧೧-೩೦ಕ್ಕೆ ನವಕ ಕಳಸ ಪ್ರತಿಷ್ಠಾಪನೆ, ಕಲಶಾಭಿಷೇಕ, ಸಂಜೆ ೫ಕ್ಕೆ ಪಂಚ ದುರ್ಗಾದೀಪ ನಮಸ್ಕಾರ, ೭-೩೦ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಸಂದರ್ಭ ಸಮಿತಿ ಅಧ್ಯಕ್ಷ ಸುರೇಶ್ ಬಾಬು, ಗೌರವಾಧ್ಯಕ್ಷ ಡಿ.ಕೆ. ದೊರೆ, ಕಾರ್ಯದರ್ಶಿ ವಿ.ಸಿ. ಲೋಕೇಶ್, ಪ್ರಮುಖರಾದ ಬಿ.ಬಿ. ಮೋಹನ್, ಎನ್.ಪಿ. ಗೋವಿಂದ, ಆರ್.ಸಿ. ಅಣ್ಣಪ್ಪ, ತಿಮ್ಮಶೆಟ್ಟಿ ಇದ್ದರು.