ಸೋಮವಾರಪೇಟೆ: ಅಂಬೇಡ್ಕರ್ ಸೇನೆ ಮತ್ತು ದೊಡ್ಡಮಾರಿಯಮ್ಮ ದೇವಾಲಯ ಸಮಿತಿ ಗಾಂಧಿನಗರ, ಮಾನವತ ಯುವಕ ಸಂಘ ಬೆಟ್ಟದಳ್ಳಿ, ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಮಿತಿ ಶಾಂತಳ್ಳಿ, ವೆಂಕಟೇಶ್ವರ ಬ್ಲಾಕ್‌ನ ಆದಿಕರ್ನಾಟಕ ಸಮಾಜ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಅದ್ಧೂರಿಯಿಂದ ಪಟ್ಟಣದಲ್ಲಿ ಆಚರಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಲಂಕೃತ ವಾಹನದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಿ, ವಾದ್ಯವೃಂದ ಮತ್ತು ಡಿಜೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರಮುಖರಾದ ಹಾನಗಲ್ ಜಯಪ್ಪ, ಪ್ರತಾಪ್ ಶಾಂತಳ್ಳಿ, ಜಗದೀಶ್ ಬೆಟ್ಟದಳ್ಳಿ, ಹೆಚ್.ಜೆ. ಜವರಪ್ಪ, ಪ್ರವೀಣ್, ಎಂ.ಪಿ. ಹೊನ್ನಪ್ಪ ಇದ್ದರು.

ಕೂಡಿಗೆ ಗ್ರಾಮ ಪಂಚಾಯಿತಿ ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಜಯಂತಿಯ ಅಂಗವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರು ಅಂಬೇಡ್ಕರ್ ಅವರ ಕುರಿತು ಮಾತನಾಡಿದರು. ಈ ಸಂದರ್ಭ ಕಾರ್ಯದರ್ಶಿ ಪುನೀತ್, ಕರ ವಸೂಲಿಗಾರ ಅನಿಲ್ ಕುಮಾರ್, ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.

ಗರಗಂದೂರು ಅಂಬೇಡ್ಕರ್ ಕಾಲೋನಿ

ಸುಂಟಿಕೊಪ್ಪ: ಗರಗಂದೂರು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಯನ್ನು ಆಚರಿಸ ಲಾಯಿತು.

ದಿನದ ಮಹತ್ವತೆ ಕುರಿತು ಮಾತನಾಡಿದ ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶಾ, ದೇಶದಲ್ಲಿ ಐಕ್ಯತೆ, ಸಾಮಾಜಿಕತೆ, ರಾಜಕೀಯ, ಆರ್ಥಿಕವಾಗಿ ದೇಶವು ಬಲಿಷ್ಠಗೊಳ್ಳಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜೆಯು ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.ಸಿದ್ದಾಪುರ: ಸಿದ್ದಾಪುರದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.

ಬೆಳಿಗ್ಗೆ ೧೦.೩೦ಕ್ಕೆ ಸಿದ್ದಾಪುರ ಶ್ರೀ ಅಯ್ಯಪ್ಪ ದೇವಾಲಯದ ಬಳಿಯಿಂದ ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಇರಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಬಸ್ ನಿಲ್ದಾಣಕ್ಕೆ ತರಲಾಯಿತು. ಸಿದ್ದಾಪುರದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಯಲ್ಲಿ ಅಂಬೇಡ್ಕರ್ ಅವರ ಪರ ಘೋಷಣೆಯನ್ನು ಕೂಗಿದರು.

ಮೆರವಣಿಗೆಗೆ ಚಂಡೆವಾದ್ಯ ಮೆರಗು ತಂದಿತು. ಮೆರವಣಿಗೆಯ ಉದ್ದಕ್ಕೂ ಸಂಘಟಕರು ಮತ್ತು ಮಹಿಳೆಯರು ಉರಿಬಿಸಿಲಿನ ನಡುವೆ ಸಾಗಿದರು. ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಡಾ. ಅಂಬೇಡ್ಕರ್ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಪ್ರಥಮ ಕಾನೂನು ಸಚಿವರಾಗಿ ಕಾರ್ಯ ಮಾಡಿ ಅಸಮಾನತೆಯಿಂದ ಸಮಾನತೆಯಡೆ ಸಮಾಜವನ್ನು ಸಾಗಿಸಲು ಶ್ರಮಿಸಿದ್ದಾರೆ ಎಂದರು. ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದು ಎಂದು ದೇಶಕ್ಕೆ ತೋರಿಸಿಕೊಟ್ಟವರು ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಾಗೋಪಾಲ್, ಸದಸ್ಯರಾದ ಜಾಫರ್, ಶುಕೂರ್, ದೇವಜಾನು, ಅಭಿಷಾ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಬಿಜೋಯ್, ವಿ.ಕೆ. ಬಷೀರ್, ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ ಸರ್ವೋದಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ

ವೀರಾಜಪೇಟೆ: ವೀರಾಜಪೇಟೆ ಸರ್ವೋದಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು. ಅಂಬೇಡ್ಕರ್ ಅವರ ತತ್ವ-ಆದರ್ಶಗಳ ಸ್ಮರಣೆ ಕೇವಲ ಜನ್ಮದಿನಾಚರಣೆಗೆ ಸೀಮಿತಗೊಳಿಸಬಾರದು. ಭಾರತೀಯ ಪ್ರಜೆಗಳಾದ ನಮಗೆ ವಿಶ್ವದ ಮುಂದೆ ತಲೆಯೆತ್ತಿ ನಿಲ್ಲಲು ನಮ್ಮ ಸಂವಿಧಾನ ನಮಗೆ ಶಕ್ತಿ ನೀಡಿತು. ಸಂವಿಧಾನವು ಭಾರತೀಯರಾದ ನಮ್ಮ ಘನತೆಯ ಬದುಕಿಗೆ ಭದ್ರ ಬುನಾದಿ ಹಾಕಿ ಕೊಟ್ಟಿತು. ಸಂವಿಧಾನವು ಭಾರತೀಯರ ಬದುಕಿಗೆ ಬೆಳಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಸಿಂಧೂರ ಎನ್. ಸ್ವಾಮಿ ಹೇಳಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ವಾಣಿ ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯೆ ಕೆ. ವಸಂತಿ ಹಾಜರಿದ್ದರು. ವಿದ್ಯಾರ್ಥಿ ಗಳಿಂದ ಅಂಬೇಡ್ಕರ್ ಅವರ ಕುರಿತ ಗೀತೆಗಳ ವಾಚನ ನಡೆದವು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.