ಮಡಿಕೇರಿ, ಏ. ೨೦: ಬಾವಲಿ ಗ್ರಾಮದ ಶ್ರೀ ಪುತ್ತುಮಾಡು ಅಯ್ಯಪ್ಪ-ಚಾಮುಂಡಿ ವಾರ್ಷಿಕೋತ್ಸವ ತಾ. ೨೨ ರಂದು ನಡೆಯಲಿದೆ.
ಅಂದು ಬೆಳಿಗ್ಗೆ ೯ ಗಂಟೆಗೆ ತಿರುಮೂರ್ತಿ ಕಲಶ ಪೂಜೆ ಆದನಂತರ ದೇವರ ಉತ್ಸವ ಮೂರ್ತಿಯನ್ನು ಪುತ್ತುಮಾಡು ಆಧಿ ಸ್ಥಾನಕ್ಕೆ ದರ್ಶನ ಸಮೇತ ಕಾಲ್ನಡಿಗೆಯಲ್ಲಿ ಹೋಗುವುದು ನಂತರ ಎತ್ತು ಪೋರಾಟ ಆದಮೇಲೆ ಧಾರೆ ಆದನಂತರ ತಿರುಮೂರ್ತಿ ಯನ್ನು ಮತ್ತೆ ದರ್ಶನಕ್ಕೆ ತರಲಾಗುವುದು. ನಂತರ ದೇವರಿಗೆ ಹರಕೆ ಒಪ್ಪಿಸಲಾಗುವುದು. ಹರಕೆ ಒಪ್ಪಿಸಿದ ನಂತರ ಪೂಧಾ (ಕುರುಂದ)ಕಳಿ ಆದ ನಂತರ ತೆಂಗಿನ ಸ್ಥಾನಕ್ಕೆ ದರ್ಶನ ಸಮೇತ ಕಾಲ್ನಡಿಗೆಯಲ್ಲಿ ಹೋಗುವುದು ನಂತರ ಎತ್ತು ಪೋರಾಟ ಆದಮೇಲೆ ಧಾರೆ ಆದನಂತರ ತಿರುಮೂರ್ತಿ ಯನ್ನು ಮತ್ತೆ ದರ್ಶನಕ್ಕೆ ತರಲಾಗುವುದು. ನಂತರ ದೇವರಿಗೆ ಹರಕೆ ಒಪ್ಪಿಸಲಾಗುವುದು. ಹರಕೆ ಒಪ್ಪಿಸಿದ ನಂತರ ಪೂಧಾ (ಕುರುಂದ)ಕಳಿ ಆದ ನಂತರ ತೆಂಗಿನ ಕೊಡೆ ಸಮೇತ ಪಾರಾಣೆ ಸ್ಥಾನಕ್ಕೆ ಆಗಮಿಸಿ ಅಲ್ಲಿಗೂ ಬಂದಿರುವ ಭಕ್ತಾದಿಗಳಿಗೂ ಅನುಗ್ರಹ ನುಡಿ ಕೊಟ್ಟು ನಂತರ ಬಾವಲಿ ಚಿಕ್ಕ ದೇವಸ್ಥಾನಕ್ಕೆ ಬರಲಾಗುವುದು. ಅಲ್ಲಿಂದ ದೇವರ ಕುರುಂದ ಕಳಿ, ರಾತ್ರಿ ದೇವರ ಜಳಕ ನಡೆಯಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.