ಹುದಿಕೇರಿ, ಏ. ೨೦: ಹುದಿಕೇರಿ ಮಹಾದೇವರ ವಾರ್ಷಿಕ ಉತ್ಸವ ತಾ.೨೧ ಹಾಗೂ ೨೨ರಂದು ನಡೆಯಲಿದೆ. ತಾ.೧೪ರಂದು ಕೊಡಿಮರ ನಿಲ್ಲಿಸುವ ಮೂಲಕ ಈ ಬಾರಿ ೯ ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗಿದೆ ಎಂದು ಅಂಜಿಕೇರಿ ನಾಡಿನ ಜೋಡಿ ತಕ್ಕರಾದ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಹಾಗೂ ಚಕ್ಕೇರ ರಾಜೇಶ್ ತಿಳಿಸಿದ್ದಾರೆ.ತಾ.೨೧ರಂದು ನೆರ್ಪು ಹಾಗೂ ೨೨ ರಂದು ಸಂಜೆ ೭-೩೦ ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದೆ. ಈ ಬಾರಿ ಕುತ್ತ್ನಾಡ್ ಹೊಳೆಯಲ್ಲಿ ಎರಡು ಊರಿನ ದೇವರುಗಳ ಅವಭೃತ ಸ್ನಾನದ ಬಳಿಕ ವಿವಿಧ ಆಚರಣೆಗಳು ಎಂದಿನAತೆ ನಡೆಯಲಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಊರು ತಕ್ಕರಾದ ಬೊಳ್ಳಜ್ಜೀರ ಮಣಿ ನಂಜಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.