ನಾಪೋಕ್ಲು, ಏ. ೨೦: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೨೨ ನೇ ದಿನದ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಕುಪ್ಪಂಡ(ಕೈಕೇರಿ) ತಂಡ ಭರ್ಜರಿ ಜಯ ಗಳಿಸಿದ್ದು, ತಂಡದ ಪರ ಸೋಮಯ್ಯ ನಾಲ್ಕು ಗೋಲು ದಾಖಲಿಸಿದರು. ಉಳಿದಂತೆ ಮೇಚಿಯಂಡ, ಮಾಜಿ ಚಾಂಪಿಯನ್ ಕಲಿಯಂಡ, ಮತ್ರಂಡ, ಮಾಜಿ ಚಾಂಪಿಯನ್ ಚೇಂದAಡ, ಕರಿನೆರವಂಡ, ನಾಪಂಡ, ಬೊವ್ವೇರಿಯಂಡ, ಚೇಂದಿರ, ಐಚೆಟ್ಟಿರ, ಕೇಲೇಟಿರ, ಚೋಯಮಾಡಂಡ, ನೆರವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಕುಲ್ಲಚಂಡ ಮತ್ತು ಮೇಚಿಯಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮೇಚಿಯಂಡ ತಂಡವು ಕುಲ್ಲಚಂಡ ತಂಡವನ್ನು ೨-೧ ಗೋಲಿನ ಅಂತರದಿAದ ಪರಾಭವಗೊಳಿಸಿತು. ಮೇಚಿಯಂಡ ತಂಡದ ಪರ ಕೃತನ್ ಉತ್ತಯ್ಯ, ವಿನೀತ್ ನಾಣಯ್ಯ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಕನ್ನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಕನ್ನಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿತು. ಕಲಿಯಂಡ ತಂಡದ ಪರ ಭರತ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಮತ್ರಂಡ ತಂಡವು ಕೊಟ್ಟಂಗಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಮತ್ರಂಡ ತಂಡದ ಪರ ಪ್ರಜ್ವಲ್ ಎರಡು, ಶ್ರವಣ್ ಕುಶಾಲಪ್ಪ, ಪರ್ವಿನ್ ತಲಾ ಒಂದು ಗೋಲು ದಾಖಲಿಸಿದರು. ಮಾಜಿ ಚಾಂಪಿಯನ್ ಚೇಂದAಡ ಮತ್ತು ಚೀಯಕಪೂವಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೇಂದAಡ ತಂಡವು ೪-೦ ಗೋಲುಗಳಿಂದ ಚೀಯಕಪೂವಂಡ ತಂಡವನ್ನು ಸೋಲಿಸಿತು. ಚೇಂದAಡ ತಂಡದ ಪರ ನಿಖಿನ್ ತಮ್ಮಯ್ಯ, ಅಮೋಘ್, ಸೋನು ಪೊನ್ನಣ್ಣ, ಚಿರಾಗ್ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಹಾಲಿ ಚಾಂಪಿಯನ್ ಕುಪ್ಪಂಡ(ಕೈಕೇರಿ) ಮತ್ತು ಮೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡವು ಮೇರಿಯಂಡ ತಂಡವನ್ನು ೭-೩ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕುಪ್ಪಂಡ ಸೋಮಯ್ಯ ನಾಲ್ಕು, ದ್ಯಾನ್ ಎರಡು, ಚಂಗಪ್ಪ ಒಂದು ಗೋಲು ದಾಖಲಿಸಿದರೆ, ಮೇರಿಯಂಡ ತಂಡದ ಪರ ಪವನ್, ಕರುಣ್, ನಿಖಿಲ್ ತಲಾ ಒಂದು ಗೋಲು ದಾಖಲಿಸಿದರು.
ಕರಿನೆರವಂಡ ತಂಡವು ಪಾಡೆಯಂಡ ತಂಡವನ್ನು ೬-೧ ಗೋಲುಗಳಿಂದ ಮಣಿಸಿತು. ಕರಿನೆರವಂಡ ತಂಡದ ಪರ ವಸಂತ್ ಎರಡು, ಲತೇಶ್ ಎರಡು, ದಿವೀನ್, ಪ್ರಫುಲ್ ತಲಾ ಒಂದು ಗೋಲುಗಳಿಸಿದರು. ಪಾಡೆಯಂಡ ತಂಡದ ಪರ ಕಟ್ಟಿ ಒಂದು ಗೋಲು ದಾಖಲಿಸಿದರು. ಪಂದ್ಯದಲ್ಲಿ ನಾಪಂಡ ತಂಡವು ೩-೦ ಗೋಲುಗಳ ಅಂತರದಿAದ ನಂಬುಡುಮಾಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇ ಶಿಸಿತು. ನಾಪಂಡ ತಂಡದ ಪರ ಸೌಮ್ಯ, ಸೋಮಯ್ಯ, ನಾಚಪ್ಪ ತಲಾ ಒಂದೊAದು ಗೋಲು ದಾಖಲಿಸಿದರು.
ಮೈದಾನ ೨ರಲ್ಲಿ ನಡೆದ ಬೊವ್ವೇ ರಿಯಂಡ ಮತ್ತು ಅಪ್ಪನೆರವಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಅಪ್ಪನೆರವಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿತು. ಬೊವ್ವೇರಿಯಂಡ ತಂಡದ ಪರ ಜೀತನ್ ಕಾಳಪ್ಪ ಎರಡು, ಅಪ್ಪಯ್ಯ, ಆಯುಶ್ ಉತ್ತಯ್ಯ ತಲಾ ಒಂದು ಗೋಲು ದಾಖಲಿಸಿದರೆ, ಅಪ್ಪನೆರವಂಡ ತಂಡದ ಪರ ಯಶ್ವಿನ್ ನಾಚಪ್ಪ ಒಂದು ಗೋಲು ದಾಖಲಿಸಿದರು. ಸಣ್ಣುವಂಡ ಮತ್ತು ಚೇಂದಿರ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಿರ ತಂಡವು ೩-೧ ಗೋಲುಗಳ ಅಂತರದಿAದ ಸಣ್ಣುವಂಡ ತಂಡವನ್ನು ಪರಾಭವಗೊಳಿಸಿತು. ಚೇಂದಿರ ತಂಡದ ಪರ ಚೇತನ್ ಚಿಣ್ಣಪ್ಪ, ವಿನು ಬೋಪಯ್ಯ, ಪುನೀತ್ ಪೊನ್ನಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಸಣ್ಣುವಂಡ ತಂಡದ ಪರ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. ಐಚೆಟ್ಟಿರ ತಂಡವು ಕೊಲ್ಲಿರ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟಿರ ತಂಡದ ಪರ ಪ್ರತೀಕ್ ದೇವಯ್ಯ ಎರಡು, ಆಕಾಶ್ ಅಯ್ಯಣ್ಣ ಒಂದು ಗೋಲು ದಾಖಲಿಸಿದರು. ಕೊಲ್ಲಿರ ತಂಡದ ಪರ ಲೇಖನ್ ಅಪ್ಪಚ್ಚು, ಸೋಮಣ್ಣ ತಲಾ ಒಂದು ಗೋಲು ದಾಖಲಿಸಿದರು. ಕೇಲೇಟಿರ ಮತ್ತು ಕಡೇಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ಕೇಲೇಟಿರ ತಂಡವು ಕಡೇಮಾಡ ತಂಡವನ್ನು ೪-೨ ಗೋಲುಗಳಿಂದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೋಯಮಾಡಂಡ ಮತ್ತು ಚೆರುಮಂದAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ಚೋಯಮಾಡಂಡ ತಂಡವು ಚೆರುಮಂದAಡ ತಂಡವನ್ನು ೨-೦ ಗೋಲುಗಳಿಂದ ಪರಾಭವಗೊಳಿಸಿ ಮನ್ನಡೆ ಸಾಧಿಸಿತು. ಬೊಟ್ಟೋಳಂಡ ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆರವಂಡ ತಂಡವು ೩-೧ ಗೋಲುಗಳ ಅಂತರದಿAದ ಬೊಟ್ಟೋಳಂಡ ತಂಡವನ್ನು ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ನೆರವಂಡ ತಂಡದ ಪರ ನಾಚಪ್ಪ, ಕವನ್, ಅಪ್ಪಣ್ಣ ತಲಾ ಒಂದು ಗೋಲು ದಾಖಲಿಸಿದರೆ, ಬೊಟ್ಟೋಳಂಡ ತಂಡದ ಪರ ಚೇತನ್ ಒಂದು ಗೋಲು ದಾಖಲಿಸಿದರು. -ಪಿ.ವಿ.ಪ್ರಭಾಕರ್