ಚೆಯ್ಯಂಡಾಣೆ, ಏ. ೧೯: ನಾಪೋಕ್ಲು ಬಳಿಯ ಕೊಟ್ಟಮುಡಿಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ನಾಪೋಕ್ಲು - ಮಡಿಕೇರಿಗೆ ತೆರಳುವ ಮಾರ್ಗದ ಕೊಟ್ಟಮುಡಿ ಮುಖ್ಯರಸ್ತೆಯಿಂದ ಬೈಕ್ ಅನ್ನು ಬಲಗಡೆಗೆ ತಿರುಗಿಸುವ ಸಂದರ್ಭ ಇದೇ ಮಾರ್ಗವಾಗಿ ಹಿಂಬದಿಯಿAದ ಬಂದ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಅನತಿ ದೂರಕ್ಕೆ ಎಸೆಯಲ್ಪಡುವ ದೃಶ್ಯ ರಸ್ತೆ ಬದಿಯಲ್ಲಿದ್ದ ಅಂಗಡಿಯವೊAದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅಪಘಾತದಿಂದ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ದ್ವಿಚಕ್ರವಾಹನಕ್ಕೆ ಹಾಗೂ ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ. -ಅಶ್ರಫ್