(ಕಳೆದ ವಾರದಿಂದ) ಕೆಲವೇ ವರ್ಷಗಳಲ್ಲಿ ಅಪ್ಪಚ್ಚ ಕಲಿತ ವಿದ್ಯೆಯನ್ನು ಕಂಡು ಗುರುವಿಗೆ ಆಶ್ಚರ್ಯವಾಯಿತು. ಇಲ್ಲಿಯ ತನಕ ತನ್ನಲ್ಲಿ ಕಲಿತ ಯಾವ ಶಿಷ್ಯನೂ ಇಷ್ಟೊಂದು ಶಕ್ತಿ ಹೊಂದಲಿಲ್ಲ. ಆತ ಹೇಳುತ್ತಿದ್ದಂತೆ ತನ್ನ ಕತ್ತಿಯನ್ನು ಎಸೆದು ಪಕ್ಷಿಗಳ ಕಾಲು ಕತ್ತರಿಸಿರುವುದು ಸಾಮಾನ್ಯವಾದ ವಿದ್ಯೆ ಆಗಿರಲಿಲ್ಲ. ಕತ್ತಿ ಹಿಂತಿರುಗಿ ಬರುವಾಗ ಮತ್ತೊಂದು ಕಾಲು ಕತ್ತರಿಸಿರು ವುದು ಸಾಮಾನ್ಯವಾಗಿ ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲದ ವಿದ್ಯೆ ಯಾಗಿತ್ತು. ಗುರುವಿಗೆ ತನ್ನ ಶಿಷ್ಯನ ಶಕ್ತಿಯನ್ನು ಕಂಡು ಒಂದೆಡೆ ಖುಷಿಯಾ ದರೂ, ಮತ್ತೊಂದೆಡೆ ಆತ ಮುಂದೆ ಯಾವ ರೀತಿ ಕಲಿತ ವಿದ್ಯೆಯನ್ನು ಬಳಸಿಕೊಳ್ಳಬಹುದು ಎನ್ನುವ ಚಿಂತೆ ಕಾಡಿ, ಅಲ್ಲಿಗೆ ಕಲಿಸುವುದನ್ನು ನಿಲ್ಲಿಸಿ ಆತನ ನಾಡಿಗೆ ಹೊರಡುವಂತೆ ಸೂಚಿಸಿದ.

ತನ್ನ ಗುರುವಿನಿಂದ ಬೀಳ್ಕೊಂಡು ಅಪ್ಪಚ್ಚ ತನ್ನ ನಾಡಿನತ್ತ ಒಬ್ಬನೇ ಹೊರಟ. ಸಾಕಷ್ಟು ದೂರ ನಡೆದು ಬಂದ ಸಂದರ್ಭ ದಾರಿ ಮಧ್ಯೆ ಹುಡುಗಿಯೊಬ್ಬಳು ಅಳುತ್ತಾ ಕುಳಿತ್ತಿದ್ದಳು. ಆಕೆಯನ್ನು ತನ್ನೊಂದಿಗೆ ಬರುತ್ತೀಯಾ ಎಂದು ಕೇಳಿದಾಗ ಬರುತ್ತೇನೆ ಎಂದಳು. ಅವಳು ಹುಡುಗಿಯಾಗಿರದೆ, ಮಿನ್ನಿಮಲೆ ಕರಿಚೌಂಡಿಯಾಗಿದ್ದಳAತೆ. ಮುಂದೆ ನಡೆಯುತ್ತಾ ಬಂದAತೆ ಅವರೊಂದಿಗೆ ಅಂಜಿಕೂಟ್ ಮೂರ್ತಿಯರೂ ಸೇರಿಕೊಂಡರು. ತನ್ನ ನಾಡಿಗೆ ಬಂದ ಅಪ್ಪಚ್ಚ ತಾನು ಕಲಿತ ವಿದ್ಯೆಯನ್ನು ಒಳಿತಿಗಾಗಿ ಬಳಸದೆ ಬೇಡದ ವಿಷಯಗಳಿಗೆ ಬಳಸತೊಡಗಿದ. ಆತ ಆರು ಪತ್ನಿಯರನ್ನು ಹೊಂದಿದ್ದ. ಏಳನೇ ಮದುವೆಯಾಗಲು ಕಕ್ಕಬ್ಬೆಯ ಕೋಲಿಂದೆ ಒಕ್ಕ ಇರುವಲ್ಲಿಗೆ ಬಂದ. ಅಲ್ಲಿ ಯುವತಿಯೊಬ್ಬಳನ್ನು ಏಳನೇ ವಿವಾಹವಾಗಿ ಅಲ್ಲಿಯೇ ಮಣ್ಣು ಮನೆಸ್ಥಾನಕ್ಕೆ ನಿಂತ. ಅಲ್ಲಿ ಕೂಡ ಆತ ತನ್ನ ವಿದ್ಯೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ. ಸದಾ ಮೋಜು ಮುಂತಾದ ಚಟುವಟಿಕೆಯಲ್ಲಿಯೇ ಇರುತ್ತಿದ್ದ. ಆತನ ಕಿರುಕುಳವನ್ನು ಜನರು ಸಹಿಸದಾದರು. ಇಗ್ಗುತ್ತಪ್ಪ ಹಾಗೂ ಕಲ್ಯಾಟಜ್ಜಪ್ಪನ ಬೆಳ್ಳಿಕೊಡೆಯ ನಾಡಿನಲ್ಲಿ ಅಪ್ಪಚ್ಚ ನೆಲೆ ನಿಂತರೂ ಅಲ್ಲಿನ ಮಣ್ಣಿನ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಲಿಲ್ಲ.

ಇದರಿಂದ ಅಲ್ಲಿನ ನಿವಾಸಿಗಳು ಅಪ್ಪಚ್ಚನ ಉಳಟಳವನ್ನು ಹೇಗಾದರೂ ಮಾಡಿ ನಿವಾರಿಸಬೇಕು ಎಂದುಕೊAಡರು. ಆದರೆ, ಆತ ತಂತ್ರ ಮಂತ್ರ ಕಲಿತ ಹಿನ್ನೆಲೆಯಲ್ಲಿ ಏನು ಮಾಡುವುದು ಎನ್ನುವುದು ತಿಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಊರಿನವರು ಕಲ್ಯಾಟಜ್ಜಪ್ಪನ ಮೊರೆ ಹೋದರು. ತಮ್ಮ ಸಂಕಷ್ಟವನ್ನು ಹೇಳಿಕೊಂಡರು. ಯೋಚನೆ ಮಾಡಿದ ಅಜ್ಜಪ್ಪ, ಆತನನ್ನು ಸುಲಭವಾಗಿ ನಿಯಂತ್ರಿಸಲಾಗದು. ಆತ ಸಾಕಷ್ಟು ವಿದ್ಯೆಯನ್ನು ಕಲಿತ್ತಿದ್ದಾನೆ. ಆತನನ್ನು ಅಡಗಿಸಲು ಸಾಧ್ಯವಾಗುವುದು. ಆತ ಚಳ್ಳೆಯಲ್ಲಿ ಬೊಳ್ಳೆಕಳ್ಳ್ ಕುಡಿಯುವ ಸಂದರ್ಭ ಮಾತ್ರ ಎಂದು ಹೇಳಿ, ಏನು ಮಾಡಬೇಕು ಎಂದು ತಿಳಿಸಿದರು. ಅದರಂತೆ ಊರಿನವರು ಬೊಳ್ಳೆಕಳ್ಳ್ ಕುಡಿಯಲು ಎಂದು ಅಪ್ಪಚ್ಚನನ್ನು ತಡಿಯಂಡಮೋಳು ಬೆಟ್ಟದ ಮತ್ತೊಂದು ಬದಿಯಲ್ಲಿರುವ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿನ ದೊಡ್ಡ ಕಲ್ಲಿನ ಮೇಲೆ ಕುಳ್ಳಿರಿಸಿ ಬೊಳ್ಳ್ಕಳ್ಳ್ ತರುವುದಾಗಿ ಹೇಳಿದರು. ಅದನ್ನು ಕುಡಿಯಲು ದೊಡ್ಡದಾದ ಎಲೆಯಲ್ಲಿ `ಚಳ್ಳೆ’ ಮಾಡಿದರು. ಅದಕ್ಕೆ ಬೊಳ್ಳೆಕಳ್ಳ್ ಸುರಿದರು. ಎಂದಿನAತೆ ಅಪ್ಪಚ್ಚ ಕುಡಿಯುವ ಮುನ್ನ ಚಳ್ಳೆ ಯಿಂದ ಮೂರು ಹನಿ ಬೊಳ್ಳೆಕಳ್ಳ್ ಅನ್ನು ತೆಗೆದು ಕಲ್ಲಿನ ಮೇಲಿಟ್ಟ. ಅದನ್ನು ತೆಗೆದುಕೊಳ್ಳಲು ಆತನ ದೇಹದಲ್ಲಿದ್ದ ಕೂಟ್ ಮೂರ್ತಿಯ ಶಕ್ತಿ ಹೊರಗೆ ಬಂತು. ಅದು ಅಪ್ಪಚ್ಚನ ದೇಹದಲ್ಲಿ ಇರುವ ತನಕ ಏನೂ ಮಾಡಲು ಸಾಧ್ಯ ಇರಲಿಲ್ಲ. ಬಲ್ಯ ಚಳ್ಳೆಯನ್ನು ಎತ್ತಿ ಕುಡಿಯಲು ಆತ ಬಗ್ಗುತ್ತಿದ್ದಂತೆ ಆತನ ಮುಖ ಪೂರ್ತಿ ಮುಚ್ಚಿತು. ಎದುರಿಗೆ ಏನೂ ಕಾಣುತ್ತಿ ರಲಿಲ್ಲ. ಇದೇ ಸರಿಯಾದ ಸಮಯ ಎಂದು ಊರಿನವರು ಒಡಿಕತ್ತಿಯನ್ನು ಎತ್ತಿ ಬಲವಾಗಿ ಬೀಸಿದರು. ಆತನ ತಲೆ ಬೇರೆಯಾಗಿ ಬಂಡೆ ಕಲ್ಲಿನಿಂದ ಉರುಳಿತು. ಆತನ ದೇಹದಲ್ಲಿ ಶಕ್ತಿ ಇದ್ದ ಹಿನ್ನೆಲೆಯಲ್ಲಿ ಆತನ ಪ್ರಾಣ ಅಲ್ಲಿ ಹೋಗದೆ ರುಂಡವಿಲ್ಲದ ತಲೆಯಲ್ಲಿಯೇ ಅಲ್ಲಿಂದ ತನ್ನ ಮೂಲ ಜಾಗ ಕಬ್ಬೆಗೆ ಓಡಿ ಹೋಗಿ ಅಲ್ಲಿ ಪ್ರಾಣ ಬಿಟ್ಟನಂತೆ.

ಈ ಹಿನ್ನೆಲೆಯಲ್ಲಿ ಅಂದು ಕರಿಂಗಣ್ಣನಿಗೆ ದೇವರು ನೀಡಿದ ಶಾಪ ಪರಿಹಾರವಾಯಿತು ಎನ್ನುತ್ತಾರೆ. ಇದರ ಸಂಕೇತವಾಗಿ ಇಂದಿಗೂ ಪ್ರತಿವರ್ಷ ಅಪ್ಪಚ್ಚನನ್ನು ಬಲಿ ತೆಗೆದುಕೊಂಡ ಜಾಗದಲ್ಲಿ ಬಲಿ ನೀಡುತ್ತಾರೆ. ಕುಟುಂಬದವರು ಸೇರಿ ಅಲ್ಲಿ ನಮಿಸುತ್ತಾರೆ. ಕಬ್ಬೆಯ ವ್ಯಕ್ತಿಯೊಬ್ಬರ ಮೈಯಲ್ಲಿ ದರ್ಶನ ಬರುತ್ತದೆ. ನಾವು ಕೂಡ ಅಲ್ಲಿನ ಪೂಜೆಯ ಸಂದರ್ಭ ತಡಿಯಂಡಮೋಳ್ ಬೆಟ್ಟ ಹತ್ತಿ ಅವರ ಮೂಲ ನೆಲೆಗೆ ತೆರಳಿದ್ದೆವು. ಅದು ಕೊಡಗು ಅಥವಾ ಕೇರಳಕ್ಕೆ ಸೇರಿದ ಜಾಗವೇ ಎನ್ನುವುದು ತಿಳಿಯಲಿಲ್ಲ. ತಡಿಯಂಡಮೋಳು ಬೆಟ್ಟವನ್ನು ಹತ್ತಿ ಇಳಿದು ಮತ್ತೊಂದು ಬೆಟ್ಟ ಏರಿ ಹೋಗಬೇಕು. ಅಲ್ಲಿ ಯಾರೂ ವಾಸ ಮಾಡಲು ಸಾಧ್ಯ ಇರಲಿಲ್ಲ. ವರ್ಷಕ್ಕೆ ಒಮ್ಮೆ ಕುಡಿಯರು ಮಾತ್ರ ತೆರಳುತ್ತಿದ್ದರು. ಅಂದು ರಾತ್ರಿ ಅಲ್ಲಿಯೇ ಪೂಜೆ ನಡೆಯಿತು. ಕಬ್ಬೆಯ ವ್ಯಕ್ತಿಯೊಬ್ಬರಿಗೆ ಅಪ್ಪಚ್ಚನ ದರ್ಶನ ಬರುತ್ತಿತ್ತು. ಅಪ್ಪಚ್ಚನ ಕಥೆಯನ್ನು ಅಧ್ಯಯನದ ಸಂದರ್ಭ ಹೇಳಲು ಅನುಮತಿಯನ್ನು ದರ್ಶನ ಬರುವ ಸಂದರ್ಭ ಕೇಳಿದರು. ಸಾಕಷ್ಟು ಹೊತ್ತು ತನ್ನದೇ ಯೋಚನೆಯಲ್ಲಿದ್ದ ಅವರು, ಅಪ್ಪಚ್ಚನ ಕಥೆ ಮಾತ್ರವಲ್ಲದೆ ಕುಡಿಯರ ಮೂಲ ಹಾಗೂ ಅವರ ಬದುಕಿನ ಚಿತ್ರಣವನ್ನು ಹೊರ ಜಗತ್ತಿಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಹೇಳಿ ಶುಭವಾಗಲಿ ಎಂದರು. ಅಲ್ಲದೆ, ಅಪ್ಪಚ್ಚನ ಕಥೆಯನ್ನು ದರ್ಶನದ ಸಮಯದಲ್ಲಿಯೇ ಹೇಳಿಕೊಡಲಾಯಿತು. ನಾವು ದಾಖಲಿಸಿಕೊಂಡೆವು. ಇದೊಂದು ಅದ್ಭುತ ಅನುಭವವಾಗಿತ್ತು.

ಸುತ್ತಮುತ್ತಲು ಮನುಷ್ಯರ ಸುಳಿವು ಇರಲಿಲ್ಲ. ಪೂಜೆಗೆ ಆಗಮಿಸಿದವರು ಹಾಗೂ ಅವರ ಜೊತೆಯಲ್ಲಿ ಅಧ್ಯಯನಕ್ಕೆ ಬಂದ ನಾವು ಹೊರತುಪಡಿಸಿದರೆ ಎಷ್ಟೋ ಕಿ.ಮೀ ದೂರ ಯಾರೂ ಇರಲಿಲ್ಲ. ಬೃಹತ್ ಮರಗಳು, ಅದರ ಗಾಳಿ ಹಾಗೂ ಪ್ರಾಣಿಗಳ ಸದ್ದು, ಅಕ್ಕಪಕ್ಕದಲ್ಲಿ ಹುಲಿ, ಕಾಡಾನೆಗಳಿದ್ದವು. ಅಲ್ಲಿಯೇ ಅವರ ಕಥೆಯನ್ನು ಕೇಳಿಕೊಂಡು ಅಲ್ಲಿಯೇ ಮಲಗಿದೆವು. ಮಾರನೆಯ ದಿನವೂ ಪೂಜಾ ಕಾರ್ಯಗಳು ನಡೆದವು. ನಾವು ಅದರ ಫೋಟೊ ತೆಗೆದು ವಿವರವನ್ನು ದಾಖಲಿಸಿಕೊಂಡು ಬಂದೆವು.. ಪಕೃತಿಯ ಮಕ್ಕಳು ಪ್ರಕೃತಿಯ ಮಡಿಲಿನಲ್ಲಿಯೇ ನಡೆಸಿದ ಪೂಜೆ ವಿಶೇಷವಾಗಿತ್ತು. ಇಂದಿಗೂ ಕೂಡ ಪ್ರತಿ ವರ್ಷ ತಪ್ಪದೆ ಈ ಪೂಜಾ ಕಾರ್ಯಗಳು ನಡೆಯುತ್ತವೆ. ಎಷ್ಟೋ ಕಿ.ಮೀ. ಕುಟುಂಬದವರು, ಬಂಧು ಬಳಗದವರು ನಡೆದುಕೊಂಡು ಹೋಗುತ್ತಾರೆ. ಭಕ್ತಿಯಿಂದ ಮೀದಿ ಇಟ್ಟು, ಒಂದು ದಿನ ಅಲ್ಲಿಯೇ ಕಳೆದು ಬರುತ್ತಾರೆ.

- ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು.

iu.ಡಿಚಿmesh@gmಚಿiಟ.ಛಿom