ಚಿತ್ರ, ವರದಿ : ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಏ. ೧೮ : ಶ್ರೀಮಂಗಲ ಬಳಿಯ ಬೀರುಗ ಬಳಿ ಕಳೆದ ಮೂರು ದಿನಗಳ ಹಿಂದೆ ಕಾಡಾನೆ ದಾಳಿಗೆ ಅಮಾಯಕ ರೈತ ಬಲಿಯಾದ ಬೆನ್ನಹಿಂದೆಯೇ, ಇದೀಗ ದ.ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಲೆ ಎಂಬ ಗ್ರಾಮದಲ್ಲಿ ಅಮಾಯಕ ಕಾರ್ಮಿಕ ಹುಲಿಯ ಬಾಯಿಗೆ ಆಹಾರವಾದ ವಿದ್ರಾವಕÀ ಘಟನೆ ನಡೆದಿದೆ.

ಹುಲಿಯ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ ಮೊಹಿಸುರ್ ರೆಹಮಾನ್ (೫೦) ಎಂದು ಗೊತ್ತಾಗಿದೆ. ಮೂಲತಃ ಅಸ್ಸಾಂ ರಾಜ್ಯದವನಾಗಿದ್ದು ಕಳೆದ ಒಂದು ವರ್ಷದ ಹಿಂದೆ ನಿಟ್ಟೂರು ಭಾಗಕ್ಕೆ ಆಗಮಿಸಿ ಕಾರ್ಮಿಕನಾಗಿ ದುಡಿಯುತ್ತಿದ್ದ.

ಗುರುವಾರ ಮುಂಜಾನೆಯ ವೇಳೆ ಎಂದಿನAತೆ ತೋಟದ ಮಾಲೀಕರ ಹಸುಗಳನ್ನು ಸಮೀಪದ ಭತ್ತದ ಗದ್ದೆಯಲ್ಲಿ ಮೇಯಿಸಲು ತೆರಳಿದ್ದ. ಈ ವೇಳೆ ಹುಲಿಯೊಂದು ಆತನ ಮೇಲೆರಗಿ, ಅನತಿ ದೂರದಲ್ಲಿ ಎಳೆದೊಯ್ದು ಪೊದೆಯಲ್ಲಿ ತಲೆಯ ಭಾಗವನ್ನು ತಿಂದು ಅಲ್ಲಿಂದ ತೆರಳಿದೆ.

ಸಂಜೆಯಾದರೂ ಕಾರ್ಮಿಕ ಇನ್ನೂ ಕೂಡ ಹಸುವಿನೊಂದಿಗೆ ವಾಪಾಸು ಬಾರದೇ ಇರುವುದನ್ನು ಗಮನಿಸಿ ಪರಿಶೀಲನೆ ನಡೆಸಿದ ವೇಳೆ ಆತ ಹುಲಿಯ ಬಾಯಿಗೆ ಆಹಾರ ವಾಗಿರುವುದು ತಿಳಿದು ಬಂದಿದೆ.

ಸಮೀಪದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಿಂದ ಹುಲಿಯು ಈ ಭಾಗದ ರೈತರ ಕಾಫಿ ತೋಟಗಳÀಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದೆ. ಈ ರೀತಿಯಲ್ಲಿ ಬಂದ ಹುಲಿಯು ಭತ್ತದ ಗದ್ದೆಯಲ್ಲಿ ಹಸುವನ್ನು ಕಂಡು ಇತ್ತ ಕಡೆ ಆಗಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ಕಾರ್ಮಿಕನ ಮೇಲೆರಗಿ ಆತನನ್ನು ಕೊಂದುಹಾಕಿದೆ. ಮೃತಪಟ್ಟ ವ್ಯಕ್ತಿ ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.

ಆರಂಭದಲ್ಲಿ ಘಟನಾ ಸ್ಥಳಕ್ಕೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿದ ನಂತರ ಎಲ್ಲರೂ ತೆರಳಿ ಪರಿಶೀಲನೆ ನಡೆಸಿದರು.

(ಮೊದಲ ಪುಟದಿಂದ) ರೈತ ಸಂಘದ ಬಾಳೆಲೆ ಭಾಗದ ಹಿರಿಯ ಮುಖಂಡ ಲೇಹರ್ ಬಿದ್ದಪ್ಪ ಸೇರಿದಂತೆ ಪ್ರಮುಖರು ತೆರಳಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಸೂರ್ಯ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಗ್ರಾಮದ ಅವಿನಾಶ್ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕಳೆದ ಒಂದು ವರ್ಷದ ಹಿಂದೆ ಸಂಸಾರ ಸಹಿತವಾಗಿ ಸೇರಿಕೊಂಡಿದ್ದ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊನ್ನಂಪೇಟೆ ಅರಣ್ಯ ವಲಯದ ಆರ್.ಎಫ್.ಓ. ಶಂಕರ್, ದಿವಾಕರ್ ಸೇರಿದಂತೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಸಹಜವಾಗಿಯೇ ಗ್ರಾಮಸ್ಥರು ತಮ್ಮ ಅಸಮಾಧಾನ ಹೊರ ಹಾಕಿದರು. ಹುಲಿಯ ಸೆರೆಗೆ ಅಗತ್ಯ ಕ್ರಮ ಜರುಗಿಸಲು ಆಗ್ರಹಿಸಿದರು. ಮೃತ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು. ಕೆಲಸಕ್ಕಾಗಿ ದೂರದ ಅಸ್ಸಾಂನಿAದ ಆಗಮಿಸಿದ ಕಾರ್ಮಿಕ ಇದೀಗ ಹುಲಿಯ ಬಾಯಿಗೆ ಆಹಾರವಾಗಿದ್ದಾನೆ.

ಪೊನ್ನಂಪೇಟೆ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿ ಪತ್ನಿ ಹಮೀದ ಸೇರಿದಂತೆ ಇಮ್ರಾನ್, ಸೋಮೆಲಾ, ರಹಲಬೇಗಂ ಹಾಗೂ ಹಮೀದ ಅಲಿ ಎಂಬ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.