ವೀರಾಜಪೇಟೆ, ಏ. ೧೮: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೀರಾಜಪೇಟೆ ಪುರಸಭೆಯ ವತಿಯಿಂದ ವೀರಾಜಪೇಟೆ ನಗರದಲ್ಲಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿಯ ಕುರಿತು ಜಾಥಾ ನಡೆಯಿತು. ವೀರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಂಟ್ ಆನ್ಸ್ ಪದವಿ ಕಾಲೇಜು ಮತ್ತು ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ವೀರಾಜಪೇಟೆ ಪುರಸಭೆಯ ಬಳಿಯಿಂದ ಆರಂಭಗೊAಡ ಜಾಥಾವು ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ನಿಲ್ದಾಣ ಮತ್ತು ದೊಡ್ಡಟ್ಟಿ ಚೌಕಿ ಮೂಲಕ ಸಾಗಿ ವೀರಾಜಪೇಟೆ ಪುರಸಭೆಯ ಬಳಿ ಕೊನೆಗೊಂಡಿತು. ಘೋಷಣಾ ಫಲಕಗಳನ್ನು ಜಾಥಾದಲ್ಲಿ ಹಿಡಿದು ಸಾಗಿದ ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ಘೋಷಣೆಗಳನ್ನು ಕೂಗುವುದರ ಮೂಲಕ ತಿಳಿಸಿದರು. ಈ ಸಂದರ್ಭ ನಗರಾಭಿವೃದ್ಧಿ ಇಲಾಖೆ ಕೊಡಗು ಜಿಲ್ಲೆಯ ಯೋಜನಾ ನಿರ್ದೇಶಕ ಬಸಪ್ಪ, ವೀರಾಜಪೇಟೆ ಪುರಸಭಾ ಆರೋಗ್ಯಾಧಿಕಾರಿ ರಫೀಕ್ ಅಹಮದ್, ಕಂದಾಯ ನಿರೀಕ್ಷಕರಾದ ಸುಲೇಖ, ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಕಾವೇರಿ ಪದವಿ ಕಾಲೇಜು ಎನ್.ಎಸ್.ಎಸ್. ಅಧಿಕಾರಿ ಸುನಿಲ್, ಸ.ಪ್ರ.ದ. ಕಾಲೇಜು ಎನ್.ಎಸ್.ಎಸ್. ಅಧಿಕಾರಿಗಳಾದ ವೇಣುಗೋಪಾಲ್, ದಿವ್ಯ, ಮತ್ತಿತರರು ಇದ್ದರು.