ವೀರಾಜಪೇಟೆ, ಏ. ೧೮: ಭಾರತದ ತೈಲ ಕಂಪೆನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಗ್ರಾಮೀಣ ಭಾಗದಲ್ಲಿ ಉತ್ತಮ ಗ್ರಾಹಕ ಸೇವೆ ನೀಡುವ ವಿತರಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯನ್ನು ವೀರಾಜಪೇಟೆ ಗ್ರಾಮೀಣ ಭಾಗದ ಬಾಳುಗೋಡು ಶ್ರೀ ಮಾತಾ ಪೆಟ್ರೋಲಿಯಂ ಇಂಧನ ವಿತರಕರು ಪಡೆದುಕೊಂಡಿದ್ದಾರೆ.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಪಂಚ ರಾಜ್ಯಗಳ ಇಂದನ ವಿತರಕರ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಇತ್ತೇಚೆಗೆ ನಡೆಯಿತು. ಗ್ರಾಮೀಣ ಭಾಗದಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ವಿತರಕ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡುವುದು ಕಂಪೆನಿಯ ವಾಡಿಕೆಯಾಗಿದೆ. ವೀರಾಜಪೇಟೆ ಬಾಳುಗೋಡು ಗ್ರಾಮದಲ್ಲಿ ಸೇವೆಯನ್ನು ಒದಗಿಸುತ್ತಿರುವ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ ವಿತರಕ ಸಂಸ್ಥೆಯ ಶ್ರೀ ಮಾತಾ ಪೆಟ್ರೋಲಿಯಂ ವಿತರಕ ಸಂಸ್ಥೆಯ ಅತ್ಯುನ್ನತ್ತ ಸೇವೆಯನ್ನು ಪರಿಗಣಿಸಿ, ಅತ್ಯುನ್ನತ್ತ ವಿತರಕ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಮಾತಾ ಪೆಟ್ರೋಲಿಯಂ ವಿತರಕ ಸಂಸ್ಥೆಯ ಮಾಲೀಕರಾಗಿರುವ ಉಲ್ಲಾಸ್ ಸಿ. ಶೇಟ್ ಅವರು ಕಂಪೆನಿಯ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ವ್ಯವಸ್ಥಾಪಕರಿಂದ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ ನ ದಕ್ಷಿಣ ಭಾರತ ವಲಯದ ವ್ಯವಸ್ಥಾಪಕರಾದ ವಿಕ್ರಾಂತ್ ಹಾಟ್ ಮತ್ತು ಅಧಿಕಾರಿಗಳು, ಕರ್ನಾಟಕ ವಲಯದ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ ನ ವಿತರಕರು ಹಾಜರಿದ್ದರು.