ಮತದಾನ- ನಿಮ್ಮ ಹಕ್ಕು- ನಿಮ್ಮ ಕರ್ತವ್ಯ

ನೀವು ವಿದ್ಯಾವಂತರು, ಪ್ರಜ್ಞಾಶೀಲ ನಾಗರಿಕರು, ಚುನಾವಣೆಯ ಮತದಾನ ಮಾಡುವುದು ಹಕ್ಕು ಮಾತ್ರವಲ್ಲ; ಅದಕ್ಕೂ ಮೇಲಾಗಿ ನಿಮ್ಮ ಪವಿತ್ರ ಕರ್ತವ್ಯವೂ ಆಗಿರುತ್ತದೆ.

ಸುಸಂಸ್ಕೃತ ವಿದ್ಯಾವಂತರಾಗಿ ಉತ್ತಮ ಪ್ರತಿನಿಧಿಯನ್ನು ಆರಿಸಿ ಲೋಕಸಭೆಗೆ ಕಳುಹಿಸುವಿರಿ ಎಂಬ ಭರವಸೆ ನನಗೆ ಇದೆ. ನೀವು ಒಂದು ವೇಳೆ ಮತದಾನ ಮಾಡದೇ ಇದ್ದಲ್ಲಿ ನೀವು ಬಯಸಿದ ಅಭ್ಯರ್ಥಿ ಆಯ್ಕೆ ಆಗದೇ ಇದ್ದಲ್ಲಿ ಅವರ ಸೋಲಿಗೆ ನೀವೇ ಹೊಣೆಯಾಗುವಿರಿ.

ನಿಮ್ಮ ಒಂದು ಮತ ಅವರ ಸೋಲು ಗೆಲುವಿಗೆ ಕಾರಣವಾಗುತ್ತದೆ.

-ಕರ್ನಲ್ ಪಿ.ಎಸ್. ಗಣಪತಿ,

ಮಹಾವೀರ ಚಕ್ರ ಪುರಸ್ಕೃತ

ಪ್ರಜ್ಞಾವಂತಿಕೆಯಿAದ ಮತದಾನ ಮಾಡಿ

ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸದವಕಾಶ ಇದು. ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ. ಮತದಾನವು ರಾಜಕಾರಣಿಗಳನ್ನು ಅವರ ಕಾರ್ಯಗಳಿಗೆ ಜವಾಬ್ದಾರರಾಗಿರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವದ ಚೌಕಟ್ಟನ್ನು ಸೃಷ್ಪಿಸುತ್ತದೆ. ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಎಷ್ಟರಮಟ್ಟಿಗೆ ಜನಪರ ಕಾಳಜಿ ಹೊಂದಿದ್ದಾರೆ ಎಂಬುದನ್ನು ವಿಶ್ಲೇಷಿಸಿ ಪ್ರಜ್ಞಾವಂತಿಕೆಯಿAದ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ನಮ್ಮ ಆಯ್ಕೆಯನ್ನು ಸ್ವಇಚ್ಚೆ ಮತ್ತು ಸ್ವಪ್ರೇರಣೆಯಿಂದ ಮಾಡಿ ಸೂಕ್ತ ವ್ಯಕ್ತಿಯನ್ನು ಚುನಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭದ್ರಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ.

-ಎಂ.ಎ. ನಿರಂಜನ್, ಅಧ್ಯಕ್ಷರು, ವಕೀಲರ ಸಂಘ, ಮಡಿಕೇರಿ