ಚೆಯ್ಯಂಡಾಣೆ, ಏ. ೧೮: ಸ್ಥಳೀಯ ನರಿಯಂದಡ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ವಾರ್ಷಿಕ ಉತ್ಸವವು ತಾ. ೧೭ ರಿಂದ ಪ್ರಾರಂಭವಾಗಿದ್ದು, ತಾ. ೨೧ ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ತಾ. ೧೭ ರ ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಬರಲಾಯಿತು. ಕೊಡಿ ಮರ ನಿಲ್ಲುವುದು, ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು, ಅಂದಿ ಬೆಳಕು, ನಂತರ ಮಹಾಪೂಜೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಇರು ಬೆಳಕು (ದೇವರು ಹೊರಗೆ ಬರುವುದು,) ೧೦ ಗಂಟೆಗೆ ಚಂಡಿಕಾ ಹೋಮ, ೧೨ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನೆರಪು ಬಲಿ, ದೇವರ ನೃತ್ಯ, ಮಹಾಪೂಜೆ ಜರುಗಿತು.

ತಾ. ೧೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯ ನಂತರ ಅಲಂಕಾರ ಪೂಜೆ, ಮಧ್ಯಾಹ್ನನದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ಭಗವತಿ ದೇವರ ಅವಭ್ರತ ಸ್ನಾನ (ಹೊಳೆಗೆ ಹೋಗುವುದು), ಸಂಜೆ ೬ ಗಂಟೆಗೆ ದೇವರ ನೃತ್ಯ, ವಸಂತ ಪೂಜೆ, ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೨೦ ರಂದು ೧೦ ಗಂಟೆಯ ನಂತರ ವಿಷ್ಣುಮೂರ್ತಿ ಮೇಲೆರಿಗೆ ಸೌದೆ ಕಡಿಯುವುದು, ಭಗವತಿ ದೇವರ ಸನ್ನಿಧಿಯಲ್ಲಿ ಕಲಶ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ಕ್ಕೆ ಕ್ಷೇತ್ರಪಾಲ ಕೋಲವು ಕ್ಷೇತ್ರಪಾಲ ಸನ್ನಿಧಿಯಲ್ಲಿ ನಡೆಯಲಿದೆ, ರಾತ್ರಿ ೯ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲವು ನಡೆಯಲಿದೆ.

ತಾ. ೨೧ ರಂದು ೧೦ ಗಂಟೆಗೆ ವಿಷ್ಣು ಮೂರ್ತಿ ಕೋಲವು ನಡೆಯಲಿದೆ, ಮಧ್ಯಾಹ್ನನ ಅನ್ನಸಂತರ್ಪಣೆ, ಸಂಜೆ ೭ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ) ವಿತರಣೆ ನಡೆಯಲಿದೆ.