ಮಡಿಕೇರಿ, ಏ. ೧೮: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಒಟ್ಟು ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಡಗು-ಕೇರಳ ಗಡಿಯಾದ ಪೆರುಂಬಾಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಎಡಪಾಲ ಗ್ರಾಮದ ನಿವಾಸಿಗಳಾದ ಸಿ.ವೈ. ಇಸಾಕ್ (೩೪), ಎಂ.ಜಿ. ನಂದಕುಮಾರ್ (೪೫) ಬಂಧಿತ ಆರೋಪಿಗಳು. ಇವರಿಂದ ೨ ಕೆಜಿ ೩೭೮ ಗ್ರಾಂ ಗಾಂಜಾ ಸೇರಿದಂತೆ, ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೀರಾಜಪೇಟೆಯ ಮೀನುಪೇಟೆಯಲ್ಲಿ ಗಾಂಜಾ

ಗಾಂಜಾ ಮಾರಾಟ ಯತ್ನ- ಮೂವರ ಬಂಧನ

(ಮೊದಲ ಪುಟದಿಂದ) ಮಾರಾಟಕ್ಕೆ ಯತ್ನಿಸಿದ ಕೇರಳ ಮೂಲದ, ಪ್ರಸ್ತುತ ಮೀನುಪೇಟೆಯಲ್ಲಿ ನೆಲೆಸಿರುವ ಷಂಶುದ್ದೀನ್ (೩೬) ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ೫೮೨ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ತಾ. ೧೭ ರಂದು ಮೀನುಪೇಟೆಯಲ್ಲಿ ಗಾಂಜಾ ಮಾರಾಟ ಸಂದರ್ಭ ಷಂಶುದ್ದೀನ್ ನನ್ನು, ತಾ. ೧೮ ರಂದು ಪೆರುಂಬಾಡಿಯಲ್ಲಿ ಇಸಾಕ್ ಮತ್ತು ನಂದಕುಮಾರ್‌ನನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ಉಪನಿರೀಕ್ಷಕ ರವೀಂದ್ರ, ಸಹಾಯಕ ಉಪನಿರೀಕ್ಷಕ ಮಂಜುನಾಥ್, ಸಿಬ್ಬಂದಿ ಮೋಹನ್, ಧರ್ಮ, ಸತೀಶ್, ಮಧು, ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.