ಮಡಿಕೇರಿ, ಏ. ೧೭: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರದರ್ಶನ ಪಂದ್ಯದಲ್ಲಿ ಯುವ ವೇದಿಕೆಯ ಉದಯೋನ್ಮುಖ ಆಟಗಾರರನ್ನೊಳ ಗೊಂಡ ರೈಸಿಂಗ್ ಸ್ಟರ‍್ಸ್ ತಂಡ ಜಯಗಳಿಸಿತು. ಕೊಡಗು ಪತ್ರಕರ್ತರ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೈಸಿಂಗ್ ಸ್ಟರ‍್ಸ್ ತಂಡ ಪತ್ರಕರ್ತರ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಮೊದಲು ಬ್ಯಾಟ್ ಮಾಡಿದ ಪತ್ರಕರ್ತರ ತಂಡ ನಿಗದಿತ ಐದು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ೨೯ ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ರೈಸಿಂಗ್ ಸ್ಟರ‍್ಸ್ ತಂಡ ೪.೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.

ಕುಡೆಕಲ್ ಸಂತೋಷ್ ನಾಯಕತ್ವದ ಪತ್ರಕರ್ತರ ತಂಡದಲ್ಲಿ ಉಪ ನಾಯಕ ವಿನೋದ್ ಮೂಡಗದ್ದೆ, ಕಲೀಲ್, ಜಿ.ವಿ. ರವಿಕುಮಾರ್, ಪಿ.ಎಂ.ರವಿ, ಅಶೋಕ್, ದಿನೇಶ್, ವಿವೇಕ್ ಮೊಗೇರ, ಹನೀಫ್, ನಿಹಾಲ್, ವಿಶ್ವಾಸ್, ಮನ್ಸೂರ್ ಆಡಿದರು. ಕಟ್ಟೆಮನೆ ಜಾಹ್ನವಿ ನಾಯಕತ್ವದ ತಂಡದಲ್ಲಿ ಕೊಂಬಾರನ ರಂಜು, ಎಡಿಕೇರಿ ರೋಶನ್, ಬಾಡನ ತಪಶ, ಪರಿಚನ ಹಿತಪ್ರಿಯ, ಕುಕ್ಕೇರ ಬೆಳಕು ಬೊಳ್ಳಮ್ಮ, ಕೃತಾರ್ಥ್, ವಿಪುಲ್, ಕೌಶಲ್, ಕಟ್ಟೆಮನೆ ಪಿಯೂಶ್, ಪರಿಚನ ಪುಲಿನ್, ಚೆರಿಯಮನೆ ಖ್ಯಾತಿ ಆಡಿದರು.