ಮಡಿಕೇರಿ, ಏ. ೧೭: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಬಫರ್ ಝೋನ್ ಪ್ರದೇಶಕ್ಕೆ ಸೇರಿರುವ ವನ್ಯಜೀವಿ ಚನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಬ್ಬೂರು ಗಸ್ತಿನ ಕೆಸುವಿನಕೆರೆ ಹಾಡಿಯ ಪಿ.ಆರ್ ಮುತ್ತ ಅವರಿಗೆ ಸೇರಿದ ಜಾಗದಲ್ಲಿ ಯಾರೋ ದುಷ್ಕರ್ಮಿಗಳು ಗುಂಡುಹಾರಿಸಿ ಅಂದಾಜು ೯ ವರ್ಷ ಪ್ರಾಯದ ಗಂಡು ಕಾಡು ಕೋಣವನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ದಯಾನಂದ್ ಡಿ.ಎಸ್., ಸಹಾಯಕ ಅರಣ್ಯ ಸಂಕರಕ್ಷಣಾಧಿಕಾರಿಗಳು, ವನ್ಯಜೀವಿ ಉಪ ವಿಭಾಗ ಹುಣಸೂರು, ರಮೇಶ, ಮುಖ್ಯ ಪಶುವೈದ್ಯಾಧಿಕಾರಿಗಳು ಹಾಗೂ ಆನೆಗಳ ಪ್ರಭಾರಕರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹುಣಸೂರು, ದೇವರಾಜು ಡಿ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ ಆನೆಚೌಕೂರು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ಅಪರಿಚಿತ ದುಷ್ಕರ್ಮಿಗಳ ಮೇಲೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ ೧೯೭೨ರ ಕಲಂ ೨(೧೬), ೯.೨೭, ೨೯, ೩೧, ೩೨, ಖ/W, ೩೯, ೫೦, ೫೧ರ ಅಡಿಯಲ್ಲಿ Wಐಔಖ-೦೧/೨೦೨೪-೨೫ ದಿನಾಂಕ ೧೭-೦೪-೨೦೨೪ ಪ್ರಕರಣ ದಾಖಲಿಸಿದ್ದಾರೆ.