ಮಡಿಕೇರಿ, ಏ. ೧೭: ಕಾಂತೂರಿನ ಐಕಾನಿಕ್ ಬ್ರದರ್ಸ್ ವತಿಯಿಂದ ಮೂರ್ನಾಡು-ಕಾಂತೂರು ಗ್ರಾಮದ ಉಳುವಾರನ ಆಟದ ಮೈದಾನದಲ್ಲಿ ಮೂರನೇ ವರ್ಷದ ಗೌಡ ವಾಲಿಬಾಲ್ ಹಾಗೂ ದ್ವಿತೀಯ ವರ್ಷದ ಮುಕ್ತ ಮಹಿಳೆಯರ ಥ್ರೋಬಾಲ್ ಪಂದ್ಯಾಟ ನಡೆಯಿತು.
ವಾಲಿಬಾಲ್ನಲ್ಲಿ ಪಡ್ಡಂಬೈಲು ತಂಡ ಪ್ರಥಮ, ಕಳಂಜನ ದ್ವಿತೀಯ, ಕಡ್ಲೇರ ತೃತೀಯ ಹಾಗೂ ಉಳುವಾರನ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. ಮಹಿಳೆಯರ ಮುಕ್ತ ಥ್ರೋಬಾಲ್ ಪಂದ್ಯಾಟದಲ್ಲಿ ಪ್ಯಾಂಥರ್ಸ್ - ಎ ಪ್ರಥಮ ಹಾಗೂ ಪ್ಯಾಂಥರ್ಸ್ -ಬಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.