ಕುಶಾಲನಗರ, ಏ. ೧೭: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು ನೇತೃತ್ವದಲ್ಲಿ ದಲಿತರು, ಕಾರ್ಮಿಕರಿಗೆ ಭೂರಹಿತ ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟು ಜನಾಂಗದ ಬಡವರಿಗೆ ಹಕ್ಕುಪತ್ರ ನೀಡಬೇಕೆಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೀಮಾವಾದ ಹಾಗೂ ಪ್ರಕಾಶ್ ವೈ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಅವರ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಲಾಯಿತು.

ಪ್ರಮುಖರಾದ ಎಸ್.ಕೆ. ಸ್ವಾಮಿ, ಡಿ.ಟಿ. ಸುರೇಶ್ ಕುಮಾರ್, ಮಂಜುನಾಥ್ ಆರ್, ಬಿ.ಆರ್. ರಾಜು, ಅನಿತಾ, ಮೋಹನ್ ಮತ್ತಿತರರು ಇದ್ದರು.