ಗೋಣಿಕೊಪ್ಪಲು, ಏ. ೧೭: ಈ ಹಿಂದೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನ ನಿರ್ಮಾಣಕ್ಕೆ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.

ಪೊನ್ನಂಪೇಟೆ ನಗರದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನವನ್ನು ಈ ಹಿಂದೆಯೇ ಸರ್ಕಾರ ನಿಗದಿಪಡಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ತಿಳಿಸಿದರು.

ಪೊನ್ನಂಪೇಟೆಯ ಕೊಡವ ಕೂಟದ ಸಭಾಂಗಣದಲ್ಲಿ ಪೊನ್ನಂಪೇಟೆ ಎಸ್‌ಎನ್‌ಡಿಪಿ ಮಲಯಾಳಿ ಸಮಾಜ ಬಾಂಧವರು ಹಮ್ಮಿಕೊಂಡಿದ್ದ

(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಈ ಹಿಂದೆ ನಡೆದ ಚುನಾವಣೆಯಲ್ಲಿ ಸಮಾಜ ಬಾಂಧವರು ಸಹಕರಿಸಿದ್ದೀರಿ. ಕ್ಷೇತ್ರದಲ್ಲಿ ಈಗಾಗಲೇ ೨೫೦ ಕೋಟಿಗೂ ಅಧಿಕ ಅನುದಾನವನ್ನು ವಿನಿಯೋಗಿಸುವ ಮೂಲಕ ಹಲವು ಕಾಮಗಾರಿಗಳು ಮುಕ್ತಾಯಗೊಂಡಿವೆ. ಇನ್ನಷ್ಟು ಪ್ರಗತಿಯಲ್ಲಿದೆ. ನಾರಾಯಣಗುರು ಸಮುದಾಯ ಭವನ ಪೊನ್ನಂಪೇಟೆಯಲ್ಲಿ ನಿರ್ಮಾಣವಾಗಬೇಕಾಗಿದೆ. ಎಲ್ಲರು ಒಟ್ಟಾಗಿ ಸೇರಿ ಉತ್ತಮ ಭವನ ನಿರ್ಮಾಣ ಮಾಡಬೇಕು. ಕೊಟ್ಟ ಮಾತಿನಂತೆ ೧ ಕೋಟಿ ಅನುದಾನವನ್ನು ಭವನ ನಿರ್ಮಾಣಕ್ಕೆ ವಿನಿಯೋಗಿಸುವ ಮೂಲಕ ಎಲ್ಲರಿಗೂ ಭವನದ ಪ್ರಯೋಜನ ದೊರಕುವಂತಾಗಲಿ, ತಮ್ಮ ಸಹಕಾರದಿಂದ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬಿದಲ್ಲಿ ಹೆಚ್ಚಿನ ಅನುದಾನ ತರಲು ಸಹಕಾರವಾಗಿದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರ ಸಹಕಾರ ಕೋರಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೊಡಗು ಜಿಲ್ಲಾ ಎಸ್‌ಎನ್‌ಡಿಪಿ ಕಾರ್ಯದರ್ಶಿ ಪ್ರೇಮಾನಂದ್, ಮಲೆಯಾಳಿ ಸಮಾಜ ಬಾಂಧವರು ಒಂದು ಪಕ್ಷದ ಪರವಾಗಿ ಇರುವವರಲ್ಲ. ಕೊಡಗಿನಲ್ಲಿ ಎರಡು ಶಾಸಕರು ಉತ್ತಮ ರೀತಿಯಲ್ಲಿ ಸಮಾಜ ಬಾಂಧವರಿಗೆ ಸ್ಪಂಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಅನುದಾನವನ್ನು ಶಾಸಕರು ಬಿಡುಗಡೆ ಮಾಡಿದ್ದಾರೆ. ಇದನ್ನು ನಾವುಗಳು ಸದಾ ಸ್ಮರಿಸುತ್ತೇವೆ ಎಂದರು. ಸಮಾಜ ಬಾಂಧವರ ಸಹಕಾರ ಇರಲಿದೆ ಎಂದರು.

ಪೊನ್ನAಪೇಟೆ ಎಸ್‌ಎನ್‌ಡಿಪಿ ಅಧ್ಯಕ್ಷ ರುದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ದಿಲೀಪ್, ಹಿರಿಯರಾದ ಪದ್ಮನಾಭ, ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್