ಮಡಿಕೇರಿ, ಏ. ೧೭: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಅರಿತು ಜನಸಾಮಾನ್ಯ ರೀತಿಯಲ್ಲಿ ತಮ್ಮದೇ ಪರಿಕಲ್ಪನೆಯನ್ನೂ ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಾರ್ಯನಿರ್ವಹಣೆಯ ಮೂಲಕ ಮತದಾರರಿಗೆ ತಾವು ಇವರಿಗೆ ಮತ ನೀಡಿ ತಪ್ಪು ಮಾಡಿಲ್ಲ ಎಂಬ ಸಾರ್ಥ್ಯಕ್ಯ ಭಾವನೆ ಬರುವ ರೀತಿಯಲ್ಲಿ ತಾವು ನಡೆದುಕೊಳ್ಳಲಿರುವುದಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷö್ಮಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು ಮತದಾರರು ತಮಗೆ ಒಂದು ಅವಕಾಶ ನೀಡಿದಲ್ಲಿ ಜನರ ನಂಬಿಕೆಯAತೆ ಮುಂದಡಿಯಿಡುವುದಾಗಿ ಅವರು ಭರವಸೆಯಿತ್ತರು. ಕ್ಷೇತ್ರ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಚಿತ್ತಹರಿಸಲಾಗುವುದು ಅಲ್ಲದೆ ತಾವು ಇಂಜಿನಿಯರಿAಗ್ ಮೂಲದಿಂದ ಬಂದವರಾಗಿ ತಮ್ಮದೇ ಹಲವು ಪರಿಕಲ್ಪನೆಗಳಿವೆ. ಕೊಡಗಿಗೆ ಸಂಬAಧಿಸಿದAತೆ ಕಾಫಿ ಸೇರಿದಂತೆ ವಿವಿಧ ಕೃಷಿಕರ ಸಮಸ್ಯೆ ಜಿಲ್ಲೆಗೆ ಪೂರಕವಾಗುವ ರೀತಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ, ಪರಿಸರ ಸಂರಕ್ಷಣೆ, ವೈಜ್ಞಾನಿಕ ಕಸ ವಿಲೇವಾರಿ, ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಸುವುದು ಸೇರಿದಂತೆ ಹಲವು ವಿಚಾರಗಳಿಗೆ ಆದ್ಯತೆ ನೀಡಲಾಗುವುದು. ಬಹು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ತನಕದ ರೈಲ್ವೆ ಯೋಜನೆಯ ಅನುಷ್ಠಾನ, ರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದು ಲಕ್ಷö್ಮಣ್ ಹೇಳಿದರು. ಕಾವೇರಿ ಈ ನಾಡಿನ ದೇವತೆಯಾಗಿದ್ದು, ಕಾವೇರಿಯ ವಿಚಾರಕ್ಕೂ ಜನರ ಭಾವನೆಯಂತೆ ಒತ್ತು ನೀಡಲಾಗುವುದು, ಕಾವೇರಿ ನದಿಯ ಸದ್ಬಳಕೆಯೊಂದಿಗೆ ಮೇಕೆದಾಟು ಯೋಜನೆಯ ಕಾರ್ಯಗತದ ಚಿಂತನೆಯೂ ಇದ್ದು, ಪ್ರಾಮಾಣಿಕ ಪ್ರಯತ್ನ ನಡೆಸಲಿರುವುದಾಗಿ ತಿಳಿಸಿದ ಅವರು, ಈ ಹಿಂದೆ ತಾವು ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ ಮತದಾರರು ಪದೇ ಪದೇ ಕೈಬಿಡುವುದಿಲ್ಲ. ಈ ಬಾರಿ ಖಚಿತವಾಗಿಯೂ ತಮಗೆ ಅವಕಾಶ ನೀಡಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲೂ ಪೂರಕ ವಾತಾವರಣವಿದೆ. ಮುಖ್ಯಮಂತ್ರಿಯಾಗಿ ಪಕ್ಷದ ಎಲ್ಲಾ ಪ್ರಮುಖರು, ಶಾಸಕರು, ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ಇದ್ದಾರೆ.
(ಮೊದಲ ಪುಟದಿಂದ) ರಾಜ್ಯ ಸರಕಾರದ ಐದು ಗ್ಯಾರಂಟಿಗಳು ಒಂದಲ್ಲಾ ಒಂದು ರೀತಿಯಲ್ಲಿ ರಾಜ್ಯದ ಪ್ರತಿ ಕುಟುಂಬಕ್ಕೂ ತಲುಪುತ್ತಿದೆ. ಕೇವಲ ೮ ತಿಂಗಳಲ್ಲಿ ಸರಕಾರ ನುಡಿದಂತೆ ನಡೆದಿರುವುದು ಜನರು ಪಕ್ಷದ ಪರ ಒಲವು ತೋರಲೂ ಕಾರಣವಾಗಿದೆ ಎಂದು ಲಕ್ಷö್ಮಣ್ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಪ್ರಭಾವ ಇಲ್ಲ : ಮೈಸೂರು ಕ್ಷೇತ್ರದಲ್ಲಿ ಮೋದಿ ಪ್ರಭಾವ ಇಲ್ಲ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರೂ ಅದು ಒಕ್ಕಲಿಗರ ಪ್ರಾಬಲ್ಯದಿಂದ ಎಂದು ಹೇಳಿದ ಲಕ್ಷö್ಮಣ್ ೧೯೭೭ರ ಬಳಿಕ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ತಮ್ಮ ಗೆಲುವಿಗೆ ಪೂರಕವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದಿನ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಬಗ್ಗೆ ಜನರು ಭ್ರಮನಿರಸನರಾಗಿದ್ದು, ೧೫ ದಿನ ಮೈಸೂರು, ೧೫ ದಿನ ಕೊಡಗಿನಲ್ಲಿದ್ದು, ಜನರಿಗೆ ಸನಿಹವಾಗಿ ಕೆಲಸ ನಿರ್ವಹಿಸುವುದು ತಮ್ಮ ಅಭಿಲಾಷೆಯಾಗಿದೆ. ಎದುರಾಳಿ ಅಭ್ಯರ್ಥಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಹಾಗೂ ಪಕ್ಷದ ನಿಲುವಿನಂತೆ ಚುನಾವಣೆ ಎದುರಿಸುತ್ತಿರುವುದಾಗಿ ಹೇಳಿದ ಲಕ್ಷö್ಮಣ್ ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಏನೂ ಪ್ರಯೋಜನವಾಗದು. ೨೦೧೯ರ ಚುನಾವಣೆಯಲ್ಲಿ ಜೆ.ಡಿ.ಎಸ್-ಕಾಂಗ್ರೆಸ್ ಮೈತ್ರಿಯಿತ್ತಾದರೂ ಇದು ಕಾಂಗ್ರೆಸ್ಗೂ ನೆರವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.