ಮಡಿಕೇರಿ, ಏ. ೧೬ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಗುರಿಯ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ್ದು ವಿವರ ಈ ಕೆಳಗಿನಂತಿದೆ.

ಐಎಎಸ್ ಮಾಡುವೆ - ಹೇಮಾವತಿ

ಪೋಷಕರ ಹಾಗೂ ಉಪನ್ಯಾಸಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ. ಭವಿಷ್ಯದಲ್ಲಿ ಐಎಎಸ್ ಮಾಡುವ ಗುರಿ ಹೊಂದಿದ್ದೇನೆ ಎಂದು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ೫೭೪ ಅಂಕಗಳೊAದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಮಡಿಕೇರಿ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿ ಎಸ್. ಹೇಮಾವತಿ ಹೇಳಿದರು. ಬಾಲ್ಯದಲ್ಲಿದ್ದಾಗ ಆಕಸ್ಮಿಕವಾಗಿ ಬಸ್‌ನ ಮೆಟ್ಟಿಲಿನಿಂದ ಬಿದ್ದು ಎಡ ಕಣ್ಣಿಗೆ ಪೆಟ್ಟಾದ ಹಿನ್ನೆಲೆಯಲ್ಲಿ ಇವರಿಗೆ ಎಡ ಕಣ್ಣು ಕಾಣಿಸುವುದಿಲ್ಲ. ಆದರೂ ಒಂದೇ ಕಣ್ಣಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಹೇಮಾವತಿ ಈ ಸಾಧನೆ ಮಾಡಿದ್ದಾರೆ. ಈಕೆ ಮಡಿಕೇರಿ ಮಹದೇವಪೇಟೆಯ ಡಿಶ್ ಮೆಕ್ಯಾನಿಕ್ ಸೆಲ್ವಕುಮಾರ್ - ರಾಜೇಶ್ವರಿ ದಂಪತಿಯ ಪುತ್ರಿಯಾಗಿದ್ದಾರೆ.

ಇಂಜಿನಿಯರಿAಗ್ ಮಾಡುವಾಸೆ - ಡಿಯಾನ

ಮುಂದೆ ಇಂಜಿನಿಯರಿAಗ್ ವಿಭಾಗದಲ್ಲಿ ಸಿಎಸ್ ಅಥವಾ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಕೋರ್ಸ್ ಮಾಡುವ ಇರಾದೆ ಹೊಂದಿದ್ದೇನೆ ಎಂದು ವಿಜ್ಞಾನ ವಿಭಾಗದಲ್ಲಿ ೫೯೨ ಅಂಕಗಳೊAದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಡಿಕೇರಿ ಸಂತಮೈಕಲರ ಕಾಲೇಜಿನ ವಿದ್ಯಾರ್ಥಿನಿ ಡಿಯಾನ ತಿಳಿಸಿದ್ದಾರೆ. ಪೋಷಕರ ಹಾಗೂ ಕಾಲೇಜಿನ ಸಿಬ್ಬಂದಿ, ಆಡಳಿತ ಮಂಡಳಿಯ ಸರ್ವರ ಬೆಂಬಲದಿAದ ತಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಡಿಯಾನ ಹೇಳಿದ್ದಾರೆ. ಈಕೆ ಮಡಿಕೇರಿಯ ಕನ್ನಿಕಾ ಲೇಔಟ್ ನಿವಾಸಿ ಕಾನೂನು ಮಾಪನ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾದ ಎ.ಜಿ. ನವೀನ್ ಕುಮಾರ್ - ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸಬಿತಾ ರಾಣಿ ದಂಪತಿಯ ಪುತ್ರಿಯಾಗಿದ್ದಾರೆ.

ಸಿ.ಎ. ಮಾಡುವ ಗುರಿ ಚರಿಷ್ಮಾ

ವಾಣಿಜ್ಯ ವಿಭಾಗದಲ್ಲಿ ೫೯೧ ಅಂಕಗಳೊAದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಚರಿಷ್ಮಾ ಸಿಎ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಉಪನ್ಯಾಸಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ ಚರಿಷ್ಮಾ ನೆಲ್ಲಿಹುದಿಕೇರಿ ನಿವಾಸಿ ಕರಡಿಗೋಡು ಇವಾಲ್ವ್ ಬ್ಯಾಕ್ ರೆಸಾರ್ಟ್ನ ಉದ್ಯೋಗಿ ಎಂ.ಜೆ. ಜಾನ್ಸನ್ - ರೀನಾ ಪಿ.ಜೆ ದಂಪತಿಯ ಪುತ್ರಿಯಾಗಿದ್ದಾರೆ.