ಮಡಿಕೇರಿ, ಏ. ೧೬ : ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಹೇಳಿದೆ. ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಬಿಜೆಪಿ ದೇಶದ ಅಭಿವೃದ್ಧಿ ಹಾಗೂ ಭದ್ರತೆ ವಿಚಾರ ಮುಂದಿಟ್ಟುಕೊAಡು ಪ್ರಚಾರ ನಡೆಸುತ್ತಿದೆ. ಈ ನಡುವೆ ಕೆಲವರು ಜಾತಿಯನ್ನು ಮುಂದಿಟ್ಟು ಕೊಂಡು ಪ್ರಚಾರಕ್ಕೆ ಕೈಹಾಕಿದ್ದಾರೆ. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಗೌಡ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆAದು ಕರೆ ನೀಡಿದ್ದಾರೆ. ಅಲ್ಲದೆ ಒಕ್ಕಲಿಗ ಸಮುದಾಯಕ್ಕೂ ಸಮುದಾಯದ ಮುಖಂಡರುಗಳು ಇದೇ ರೀತಿಯ ಕರೆ ಕೊಟ್ಟಿದ್ದಾರೆ. ಈ ರೀತಿಯ ರಾಜಕೀಯ ಕೊಡಗಿನಲ್ಲಿ ನಡೆಯುವುದಿಲ್ಲ. ಜಾತಿ ಜನಾಂಗದ ಪ್ರಮುಖರೆನಿಸಿಕೊಂಡವರು ಜನಾಂಗದ ಅಭಿವೃದ್ಧಿಗೆ ಒತ್ತು ನೀಡಬೇಕೆ ಹೊರತು ರಾಜಕೀಯ ಪಕ್ಷದ ವಕ್ತಾರರಂತೆ ಕೆಲಸ ಮಾಡಬಾರದು ಎಂದು ಮಹೇಶ್ ಜೈನಿ ಹೇಳಿದರು. ಕೊಡಗಿನ ಮತದಾರರು ಪ್ರಬುದ್ಧರಾಗಿದ್ದು, ಪ್ರಧಾನಿ ಮೋದಿಯವರನ್ನು ಬೆಂಬಲಿಸಲಿದ್ದಾರೆ

(ಮೊದಲ ಪುಟದಿಂದ) ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹ ಅವರು ಅಭ್ಯರ್ಥಿಯಾಗಿದ್ದ ಸಂದರ್ಭ ಸಮುದಾಯಗಳ ಮುಖಂಡರ ಜಾತಿ ಪ್ರೇಮ ಎಲ್ಲಿ ಹೋಗಿತ್ತು ಎಂದು ಮಹೇಶ್ ಜೈನಿ ಪ್ರಶ್ನಿಸಿದರು.

ಪಕ್ಷದ ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ಬಿಜೆಪಿ ಈ ದೇಶದ ಒಳತಿಗಾಗಿ ಶ್ರಮಿಸುತ್ತಿದ್ದು, ಎಲ್ಲಾ ಜನಾಂಗದವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಅರೆಭಾಷೆ ಹಾಗೂ ಒಕ್ಕಲಿಗ ಸಮುದಾಯದ ಹಲವಾರು ಮಂದಿಗೆ ಬಿಜೆಪಿ ಉನ್ನತ ಸ್ಥಾನಮಾನ ನೀಡಿದೆ ಎಂದು ಹೇಳಿದರು.

ತಾ. ೧೮ರಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ತಾ. ೧೯ರಂದು ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ರೋಡ್ ಶೋ ನಡೆಸಲಿದ್ದಾರೆ. ತಾ. ೧೭ರಂದು (ಇಂದು) ರಾಮನವಮಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಭ್ಯರ್ಥಿ ಯದುವೀರ್ ಹೆಸರಿನಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಪೂಜೆ ನೆರವೇರಿಸಲಿದ್ದಾರೆ ಎಂದು ಮಹೇಶ್ ಜೈನಿ, ತಳೂರು ಕಿಶೋರ್ ಕುಮಾರ್ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾಂಗೀರ್ ಸತೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ, ಆರ್‌ಎಂಸಿ ಮಾಜಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಬೆಟ್ಟಗೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಕಡ್ಯದ ವಿಜಯ ಉಪಸ್ಥಿತರಿದ್ದರು.