ಸಿದ್ದಾಪುರ, ಏ. ೧೬: ಕೊಂಡAಗೇರಿ ದರ್ಗಾ ಶರೀಫಿನಲ್ಲಿ ನಡೆಯುವ ಉರೂಸ್ ಸಮಾರಂಭವು ತಾ. ೧೯ರಿಂದ ೨೩ ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೯ ರಂದು ೨ ಗಂಟೆಗೆ ಮಖಾಂ ಅಲಂಕಾರ ಹಾಗೂ ದುಆಃ ನಂತರ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಸರಫುಸ್ಸಾದಾತ್ ಅಸಯ್ಯದ್ ಮೊಹಮ್ಮದ್ ಅಶ್ರಫ್ ಸಖಾಫಿ ತಂಙಳ್ ಆದೂರು ನೇತೃತ್ವ ವಹಿಸಲಿದ್ದು ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ. ಕುಂಇ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ ಯಹ್ಯಾ ಹಾಜಿ, ಎಂ.ಐ. ಇಕ್ಬಾಲ್, ಕೊಟ್ಟಿಯಾಟ್ ಎಂ ಶಾದುಲಿ ಭಾಗವಹಿಸಲಿದ್ದಾರೆ.
ಅಪರಾಹ್ನ ೨.೩೦ ಕ್ಕೆ ಧ್ವಜಾರೋಹಣ ನಡೆದು ರಾತ್ರಿ ೭ಕ್ಕೆ ಜಾಲಾಲಿಯಾ ರಾತಿಬ್ ಆರಂಭಗೊಳ್ಳಲಿದೆ. ಇದಕ್ಕೆ ಜಹಫರ್ ಸಾಧಿಖ್ ತಂಙಲ್ ಕೊಂಬೋಳ್ ನೇತೃತ್ವ ವಹಿಸಲಿದ್ದಾರೆ. ತಾ ೨೦ ರಂದು ರಾತ್ರಿ ಧಾರ್ಮಿಕ ಪಂಡಿತ ಜಸೀಲ್ ಅಹ್ಸನಿ ಪಾಕಣ ಹಾಗೂ ತಾ. ೨೧ ರಂದು ಅಲವಿ ಕುಟ್ಟಿ ಸಖಾಫಿ ನಿಲಂಬೂರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ತಾ. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಸಾರ್ವಜನಿಕ ಸಮ್ಮೇಳನವನ್ನ ದಾರ್ಮಿಕ ಪಂಡಿತ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಉದ್ಘಾಟಿಸಲಿದ್ದು, ಅಸ್ಸಯ್ಯದ್ ಆಟಕೋಯ ಅಸ್ಸಖಾಫ್ ತಂಙಳ್ ಆದೂರು ದುಆಃ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಯ್ಯದ್ ಎಸ್ ಹಕೀಂ ತಂಙಳ್ ಅಸ್ಪಖಾಫ್ ಆದೂರು ಸೇರಿದಂತೆ ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು, ಸಮಾಜಸೇವಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೆಸರಾಂತ ಧಾರ್ಮಿಕ ಭಾಷಣಗಾರ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ತಾ. ೨೩ ರಂದು ರಾತ್ರಿ ೭ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಹಾಫಿಳ್ ಮಶ್ಹೂದ್ ಸಖಾಫಿ ಗೂಡ್ಲೂರು ಸಮರೋಪ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಪುಡಿಯಂಡ ಈ ಶಾದುಲಿ, ಕಾರ್ಯದರ್ಶಿ ಪೇರಿಯಂಡ ಎಂ ಹಂಸ, ಖಜಾಂಜಿ ಅಲಿ ಮಜೀದ್ ಸೇರಿದಂತೆ ತಕ್ಕ ಮುಖ್ಯಸ್ಥರು ಹಾಗೂ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. -ಎಸ್.ಎಂ ಮುಬಾರಕ್