ಕುಶಾಲನಗರ, ಏ.೧೬: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ೨೪ನೇ ವರ್ಷದ ವೈಭವದ ಶ್ರೀ ರಾಮೋತ್ಸವ ಕಾರ್ಯಕ್ರಮ ತಾ. ೧೭ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ.

ಕುಶಾಲನಗರ ರಥ ಬೀದಿಯ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ತಾ. ೧೭ ರಿಂದ (ಇಂದಿನಿAದ ಏಪ್ರಿಲ್ ೨೬ ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಮೋತ್ಸವ ಅಂಗವಾಗಿ ಪ್ರತಿದಿನ ಬೆಳಗ್ಗೆ ಗಣಪತಿ ಪೂಜೆ, ನವಗ್ರಹ ಮೃತ್ಯುಂಜಯ ಪೂಜೆ ಮತ್ತು ಶ್ರೀರಾಮ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಕಾರ್ಯಕ್ರಮಗಳು, ಸೇವೆಗಳು ನಡೆಯಲಿವೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಪೂಜಾ ಕಾರ್ಯಕ್ರಮಗಳು ಕೆ.ಕೆ. ಸುಬ್ಬರಾಮ ಪುರೋಹಿತರ ನೇತೃತ್ವದಲ್ಲಿ ನಡೆಯಲಿವೆ. ಕುಶಾಲನಗರ ರಥ ಬೀದಿಯಲ್ಲಿರುವ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ೧೭ ರಂದು ಸಂಜೆ ವಿಪ್ರ ಮಹಿಳೆಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ, ೧೮ರಂದು ವಿಪ್ರ ಬಾಲಕ, ಬಾಲಕಿಯರಿಂದ ಕಾರ್ಯಕ್ರಮ, ೧೯ರಂದು ಮಾತು ಮಂಥನ, ೨೦ರಂದು ವಿಭಿನ್ನ ನೃತ್ಯ ಸಮುಚ್ಚಯ ಕಾರ್ಯಕ್ರಮ, ೨೧ರಂದು ಸೀತಾ ಕಲ್ಯಾಣ, ಸಂಜೆ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

೨೨ರಂದು ಸ್ಥಳೀಯ ಕಲಾವಿದೆಯರಿಂದ ಭರತನಾಟ್ಯ ಹಾಗೂ ಮಕ್ಕಳಿಂದ ರೂಪಕ, ೨೩ರಂದು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ, ಸಂಜೆ ಸುಬ್ರಾಯ ಸಂಪಾಜೆ ಅವರ ಸಾರಥ್ಯದಲ್ಲಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿAದ ಯಕ್ಷಗಾನ ತಾಳಮದ್ದಳೆ ಪಾದುಕಾ ಪ್ರದಾನ ಪ್ರಸಂಗ ನಡೆಯಲಿದೆ. ೨೪ರಂದು ಸಂಜೆ ವಿಪ್ರ ಮಹನೀಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ. ೨೫ರ ಗುರುವಾರ ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುವುದು ಸಂಜೆ ಮಾಲಿನಿ ಅಯ್ಯರ್ ಅವರಿಂದ ಹರಿಕಥೆ ಕಾರ್ಯಕ್ರಮ ಜರುಗಲಿದೆ. ೨೬ರಂದು ಹನುಮಂತೋತ್ಸವ ಕಾರ್ಯಕ್ರಮ, ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶ್ರೀ ರಾಮ ಸೇವಾ ಸಮಿತಿ ಮತ್ತು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪ್ರಕಟಣೆ ತಿಳಿಸಿದೆ.