ಕೂಡಿಗೆ, ಏ. ೧೫: ಮತದಾನ ಕೇಂದ್ರಕ್ಕೆ ಆಗಮಿಸಲಾಗದ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗಾಗಿ ಕೂಡಿಗೆಯಲ್ಲಿ ಮನೆಯಿಂದಲೇ ಮತದಾನ (ಹೋಂ ವೋಟಿಂಗ್) ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಕೇಂದ್ರದ ಚುನಾವಣಾ ಆಯೋಗದ ಸೂಚನೆಯಂತೆ ೧೧ ಹಿರಿಯ ನಾಗರಿಕರು, ೩ ಮಂದಿ ವಿಶೇಷಚೇತನರು ಮನೆಯಿಂದ ಮತದಾನ ಮಾಡಿದರು.

(ಮೊದಲ ಪುಟದಿಂದ) ಚುನಾವಣಾ ನಿಯಮಾನುಸಾರವಾಗಿ ಮತದಾನದ ಕೇಂದ್ರ ವ್ಯಾಪ್ತಿಗೆ ನೇಮಕಗೊಂಡ ಅಧಿಕಾರಿಗಳ ತಂಡವು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇರುವವರ ಪಟ್ಟಿಯ ಆಧಾರದ ಮೇಲೆ ಮನೆಗಳಿಗೆ ತೆರಳಿ ಮತದಾನ ಮಾಡಿಸಿಕೊಂಡು ಕೊಂಡೊಯ್ದರು. ಈ ಸಂದರ್ಭದಲ್ಲಿ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೆಕ್ಟರ್ ಅಧಿಕಾರಿ ಇ. ಪುಟ್ಟಸ್ವಾಮಿ ಸೇರಿದಂತೆ ಚುನಾವಣಾ ವಿಭಾಗದ ಅಧಿಕಾರಿ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.