ಕಣಿವೆ, ಏ. ೧೫: ಇಲ್ಲಿನ ರಾಮಲಿಂಗೇಶ್ವರ ದೇವಾಲಯದ ಬ್ರಹ್ಮ ರಥೋತ್ಸವದ ಅಂಗವಾಗಿ ತಾ. ೧೭ ರಿಂದ ಐದು ದಿನಗಳ ಕಾಲ ನಡೆಯುವ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಬೆಂಗಳೂರಿನ ವೇದ ಬ್ರಹ್ಮ ನರಹರಿ ಶರ್ಮಾ ನೇತೃತ್ವದ ವಟುಗಳಿಂದ ಧಾರ್ಮಿಕ ವಿಧಿಗಳು ಆರಂಭವಾದವು. ದೇವಾಲಯದ ಅರ್ಚಕ ರಾಘವೇಂದ್ರ ಆಚಾರ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ ಇದ್ದರು.