ಮಡಿಕೇರಿ, ಏ. ೧೫: ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ನಡೆಯುವ ಗೌಡ ಪ್ರೀಮಿಯರ್ ಲೀಗ್ (ಜಿಪಿಎಲ್) ಸೀಸನ್ ೨ ಲೆದರ್ ಬಾಲ್ ಕ್ರಿಕೆಟ್ ಕ್ರೀಡಾಕೂಟದ ಅಂಗವಾಗಿ ಟ್ರೋಫಿ ಮತ್ತು ಬಾಲ್ ಅನಾವರಣ ಕಾರ್ಯಕ್ರಮ ಮಡಿಕೇರಿಯ ಕೊಡಗು ಗೌಡ ವಿದ್ಯಾಸಂಘ ಸಭಾಭವನದಲ್ಲಿ ನಡೆಯಿತು. ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಮಡಿಕೇರಿ ಶಾಸಕರಾದ ಮಂಥರ್ ಗೌಡ ಅವರು ಟ್ರೋಫಿ ಮತ್ತು ಬಾಲ್ ಅನಾವರಣಗೊಳಿಸಿ ಶುಭ ಹಾರೈಸಿದರು. ಕೊಡಗು ಗೌಡ ಯುವವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಕೊಡಗು ಗೌಡ ಒಕ್ಕೂಟದ ಪ್ರಮುಖರು ಹಾಜರಿದ್ದು ಶುಭ ಹಾರೈಸಿದರು. ತಾ.೧೭ ರಿಂದ ೨೮ ರವರೆಗೆ ಕ್ರೀಡಾಕೂಟ ನಡೆಯಲಿದೆ. ೧೦ ಫ್ರಾಂಚೈಸಿಗಳ ಮೂಲಕ ೧೮೦ ಆಟಗಾರರು ಆಡಲಿದ್ದಾರೆ.