ಕಣಿವೆ, ಏ. ೧೪: ಉತ್ತರ ಕೊಡಗಿನ ಕುಶಾಲನಗರ ತಾಲೂಕಿನ ಬಹು ದೊಡ್ಡ ಗ್ರಾಮ ಖ್ಯಾತಿಯ ಹೆಬ್ಬಾಲೆ ಗ್ರಾಮದ ರೈತರು ಹೊನ್ನಾರು ಉತ್ಸವವನ್ನು ಶುಕ್ರವಾರ ಶ್ರದ್ಧೆಯಿಂದ ಆಚರಿಸಿದರು. ಗ್ರಾಮದ ೩೫ಕ್ಕೂ ಹೆಚ್ಚಿನ ಕೃಷಿಕರು ತಾವು ಸಾಕಿರುವ ರಾಸುಗಳೊಂದಿಗೆ ಗ್ರಾಮದ ದೇವಾಲಯದ ಬಳಿ ಧಾವಿಸಿ ಬಂದು ದೇವರಿಗೆ ನಮಿಸಿ ದೇವತಾ ಭೂಮಿಯಲ್ಲಿ ಒಂದು ಸುತ್ತು ಸಾಂಪ್ರದಾಯಿಕವಾದ ಉಳುಮೆ ಮಾಡಿದರು. ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎನ್. ಬಸವರಾಜು ನೇತೃತ್ವದಲ್ಲಿ ಹೊನ್ನಾರು ಉತ್ಸವ ಆಚರಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಯುಗಾದಿ ಬಳಿಕ ಹೊಸ ಪಂಚಾAಗ ನೋಡಿ ಶಾಸ್ತೊçÃಕ್ತವಾಗಿ ಹೊನ್ನಾರು ಆಚರಿಸಲಾಗುತ್ತ ಬರಲಾಗುತ್ತಿದೆ. ನಾಡಿಗೆ ವರುಣ ಕೃಪೆ ಮಾಡಿ ಮಳೆ ಸುರಿಸಿ ಜೀವ ರಾಶಿಗಳನ್ನು ಉಳಿಸಬೇಕಿದೆ. ಹಾಗೆಯೇ ಕೃಷಿಕರ ಬದುಕನ್ನು ಹಸನಾಗಿಸಬೇಕಿದೆ ಎಂದು ಗ್ರಾಮ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಈ ಸಂದರ್ಭ ಖಜಾಂಚಿ ನಾರಾಯಣ, ಕಾರ್ಯದರ್ಶಿ ರಾಜು ಸೇರಿದಂತೆ ಗ್ರಾಮಸ್ಥರಿದ್ದರು.