ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಏ. ೧೪: ಅರೇಬಿಕಾವನ್ನು ಬಾಧಿಸುವ ಬಿಳಿಕಾಂಡಕೊರಕ ಕೀಟ ನಿಯಂತ್ರಣಕ್ಕೆ ಏಪ್ರಿಲ್ ತಿಂಗಳೇ ಸೂಕ್ತ ಸಮಯವಾಗಿದ್ದು ಅರೇಬಿಕಾ ತೋಟಗಳಲ್ಲಿ ಸಂಪೂರ್ಣ ಕೀಟಬಾಧಿತ ಗಿಡಗಳನ್ನು ಗುರುತಿಸಿ ಕಿತ್ತುಹಾಕಿ ಸುಡುವ ಕಾರ್ಯದಲ್ಲಿ ಮುಂದಾಗಿದ್ದಾರೆ. ವ್ಯವಸ್ಥಿತ ರೀತಿಯ ಹತೋಟಿ ಕ್ರಮವನ್ನು ಅನುಸರಿಸಬೇಕೆಂದು ಕಾಫಿ ಮಂಡಳಿಯ ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದೆ.

ಸೆರಾಂಬಿಸಿಡ್‌ಬೋಟರ್ ಕುಟುಂಬಕ್ಕೆ ಸೇರುವ ಈ ಬಿಳಿಕಾಂಡಕೊರಕ ಕೀಟ ಬರೀ ಕಾಫಿಯ ಇಳುವರಿಯನ್ನು ಕಡಿಮೆಗೊಳಿಸುವುದಲ್ಲದೆ ಹಲವು ವರ್ಷಗಳಿಂದ ಬೆಳೆದು ನಿಂತ ಕಾಫಿ ಗಿಡಗಳನ್ನೇ ನಾಶಪಡಿಸುತ್ತದೆ. ಬಿಳಿಕಾಂಡಕೊರಕ ಕೀಟಗಳು ಹೊರಬರುವ ಎರಡು ಪ್ರಮುಖ ಕಾಲವೆಂದರೆ ಏಪ್ರಿಲ್-ಮೇ ತಿಂಗಳು ಹಾಗೂ ನಂತರದ ಅಕ್ಟೋಬರ್, ಡಿಸೆಂಬರ್ ತಿಂಗಳಾಗಿದ್ದು ಹಲವು ಕೀಟಗಳು ಪ್ರೌಢಾವಸ್ಥೆಗೆ ಬಂದು ಹಾರುವ ಮೊದಲೇ ಹತೋಟಿ ಕ್ರಮಗಳನ್ನು ಅನುಸರಿಸಬೇಕಿದೆ.

ಕೀಟ ವಿಜ್ಞಾನ ವಿಭಾಗದಲ್ಲಿ ಮಾಹಿತಿ

ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದ ಕೀಟ ವಿಜ್ಞಾನ ವಿಭಾಗದಲ್ಲಿ ಕಾಫಿ ಗಿಡಗಳನ್ನು ಬಾಧಿಸುವÀ ವಿವಿಧ ಕೀಟಗಳ ಬಗ್ಗೆ ಸಂಶೋಧನೆಗಳು ನಡೆಯುತಿದ್ದು ಹಲವು ನಿಯಂತ್ರಣ ಕ್ರಮಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ.

ಬಿಳಿ ಕಾಂಡಕೊರಕವು ಭಾರತದಲ್ಲಿ ಅರೇಬಿಕಾ ಗಿಡಗಳನ್ನು ಪೀಡಿಸುವ ಮುಖ್ಯ ಕೀಟವಾಗಿದೆ. ದುಂಬಿಗಳ ಜಾತಿಗೆ ಸೇರಿದ ಕೀಟವಾಗಿದ್ದು, ವೈಜ್ಞಾನಿಕವಾಗಿ ಕೀಟಗಳನ್ನು ಕ್ಸೆö್ಯಲೋಟ್ರಿಕಸ್ ಕ್ವಾಡ್ರಿಪಸ್ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಬರ‍್ಲುಹುಳ, ಬಿಳಿ ಕಾಂಡಕೊರಕನೆAದು ಕರೆದರೆ, ಸ್ಟೆೆ್ಟಂಬೋರರ್ ಎಂದು ಆಂಗ್ಲಭಾಷೆಯಲ್ಲಿ ಕರೆಯಲಾಗುತ್ತದೆ.

ಬಲಿತ ಕೀಟವು ತೆಳುವಾದ ಜೀರುಂಡೆಯAತಿದ್ದು ಮುಂಭಾಗದಲ್ಲಿ ಉದ್ದನೆಯ ಒಂದು ಜೊತೆ ಕುಡಿಮೀಸೆ ಹೊಂದಿರುತ್ತದೆ. ಮುಂಭಾಗ ರೆಕ್ಕೆಗಳು ಕಪ್ಪು ಬಣ್ಣದ್ದಾಗಿದ್ದು, ಅದರಲ್ಲಿ ಬಿಳಿ ಪಟ್ಟೆಗಳಿರುತ್ತದೆ. ಸಾಮಾನ್ಯವಾಗಿ ಗಂಡು ಹುಳುಗಳು ಹೆಣ್ಣು ಹುಳುಗಳಿಗಿಂತ ಗ್ರಾತ್ರದಲ್ಲಿ ಚಿಕ್ಕದಾಗಿರುತ್ತದೆ. ಪ್ರಕರವಾದ ಬೆಳಕು ಮತ್ತು ಉಷ್ಣತೆಯ ಹವಾಮಾನವಿದ್ದಾಗ ಕೀಟಗಳು ಚುರುಕಾಗುತ್ತವೆ. ಹೆಣ್ಣು ಹುಳಗಳು ಗಿಡದ ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದು ಗೊಂದುಗಳಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದ ಮರಿ ಹುಳಗಳು ೨ ತಿಂಗಳ ಕಾಲ ತೊಗಟೆಯಲ್ಲಿನ ತಿರುಳನ್ನು ತಿಂದು ನಂತರ ಗಟ್ಟಿ ಭಾಗವನ್ನು ಕೊರೆದು ಒಳಪ್ರವೇಶಿಸಿ ಗಿಡದೊಳಗೆ ಸುರಂಗವನ್ನುAಟು ಮಾಡಿ (ಕೆಲವು ಸಂದರ್ಭಗಳಲ್ಲಿ ಸುರಂಗಗಳು ಬೇರಿನವರೆಗೂ ವ್ಯಾಪಿಸುತ್ತದೆ.) ಕೀಟಪೀಡಿತ ಗಿಡದ ಕಾಂಡಗಳಲ್ಲಿ ಉಂಗುರಾಕಾರದ ಸುತ್ತುಗಳು ಕಂಡುಬರುತ್ತದೆ. ಎಲೆಗಳು ಮಂಕಾಗಿ ಫಸಲು ಕಡಿಮೆಯಾಗಿ ಜೊಳ್ಳು ಜಾಸ್ತಿಯಾಗುತ್ತದೆ.

ಸಮಗ್ರ ನಿಯಂತ್ರಣ ಕ್ರಮಗಳು:

ಕಾಂಡಕೊರಕ ಕೀಟ ನಿಯಂತ್ರಣಕ್ಕೆ ಮುಖ್ಯವಾಗಿ ನೆರಳು ಅವಶ್ಯಕವಾಗಿದೆ. ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ನೆರಳನ್ನು ತೆಗೆಯಬಾರದು. ಎರಡು ಹಂತದ ನೆರಳನ್ನು ಕಾಯ್ದುಕೊಳ್ಳುವುದು ಹಾಗೂ ಮಿಶ್ರಜಾತಿಯ ನೆರಳಿನ ಮರಗಳು ಮೇಲ್ಭಾಗದಲ್ಲಿ ಶಾಶ್ವತ ನೆರಳಾದರೆ ಕೀಟಗಳು ಹಾರಾಡುವ ಕಾಲದಲ್ಲಿ ಕಾಫಿ ಗಿಡಗಳಿಗೆ ಪ್ರಕಾಶಮಾನವಾದ ಬೆಳಕು ಬೀಳದಂತೆ ನಿರ್ವಹಿಸುವುದು. ಕಾಫಿಗಿಡಗಳಲ್ಲಿ ಉಂಗುರಾಕಾರದ ಗುರುತಿರುವ ಗಿಡಗಳನ್ನು ಗುರುತಿಸಿ ರೋಗ ಲಕ್ಷಣಗಳಿಂದ ಸೊರಗಿರುವ ಗಿಡಗಳನ್ನು ಕಂಡುಹಿಡಿದು ತಕ್ಷಣವೇ ಬೇರುಸಹಿತ ಕಿತ್ತುಹಾಕಿ ಸುಟ್ಟುಹಾಕಿ ನಾಶಪಡಿಸುವುದು. ಇಲ್ಲವೇ ಹತ್ತು ದಿನಗಳು ನೀರಿನಲ್ಲಿ ಮುಳುಗಿಸಿಡುವುದು. ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದು ಗೊಂದುಗಳಲ್ಲಿ ಮೊಟ್ಟೆ ಇಡುವುದನ್ನು ತಪ್ಪಿಸಲು ಗಿಡಗಳ ಕಾಂಡ ಮತ್ತು ದಪ್ಪ ರೆಂಬೆಗಳ ತೊಗಟೆಯನ್ನು ಕೈಗವಚ ಹಾಗೂ ತೆಂಗಿನಕಾಯಿ ಸಿಪ್ಪೆ/ನಾರಿ ಸಹಾಯದಿಂದ ಉಜ್ಜಿ ತೆಗೆಯಬೇಕು. ಕೀಟಭಾಧಿತ ಗಿಡಗಳನ್ನು ಹುಡುಕುವಾಗ ಕಡಿಮೆ ಭಾದಿತಗಿಡಗಳು ಕಂಡುಬAದಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿದ ವಿಧಾನವಾದ ಮುಖ್ಯಕಾಂಡ ಹಾಗೂ ದಪ್ಪಗಿನ ರೆಂಬೆಗಳಿಗೆ ಅಂತರ ಬಿಡದಂತೆ ನಾನ್‌ಓವನ್‌ಫ್ಯಾಬ್ರಿಕ್ ಪಟ್ಟಿಯಿಂದ ಸುತ್ತಬೇಕು. ನಂತರ ಪೆಂತೊಏಟ್ ೫೦ ಈಸಿ ಕೀಟನಾಶಕ ದ್ರಾವಣವನ್ನು ೨೦೦ ಲೀಟರ್ ನೀರಿಗೆ ೪೦೦ ಮೀ. ಲೀಟರ್ ಹಾಗೂ ೨೦೦ ಲೀಟರ್ ಅಂಟುದ್ರಾವಣವನ್ನು ಬೆರೆಸಿ ಪಟ್ಟಿಗೆ ಸಿಂಪಡಿಸಬೇಕು. ಈ ಕ್ರಮಗಳಿಂದ ಪ್ರೌಢಕೀಟಗಳು ಮೊಟ್ಟೆ ಇಡಲು ಹಾಗೂ ಕೀಟಗಳು ಹೊರಬರಲು ಅವಕಾಶ ತಪ್ಪುತದೆ.

ಆರೋಗ್ಯಕರ ಗಿಡಗಳನ್ನು ಕಾಪಾಡಲು ಮುಖ್ಯ ಕಾಂಡಗಳಿಗೂ ಹಾಗೂ ರೆಂಬೆಗಳಿಗೆ ಸಿಂಪಡಿಸಬೇಕು. ಕಾಂಡಕೊರಕದ ತೀವ್ರತೆ ಹೆಚ್ಚಿರುವ ತೋಟಗಳಲ್ಲಿ ಹಾಗೂ ಕಲ್ಲುಪ್ರದೇಶ ಹಾಗೂ ನಿರ್ಲಕ್ಷಿತ ತೋಟಗಳಲ್ಲಿ ಕೀಟಗಳು ಹಾರುವ ಕಾಲಕ್ಕೆ ಮೊದಲೇ ಶೇ. ೧೦ರಷ್ಟು ಸುಣ್ಣವನ್ನು (೨೦೦ ಲೀಟರ್ ನೀರಿನಲ್ಲಿ ೨೦ ಕಿ.ಗ್ರಾಂ ಸಿಂಪಡಣಾ ಸುಣ್ಣವನ್ನು ೨೦೦ ಮಿಲಿ. ಫೆರಿಕಾಲ್ ಡಿಡಿಎಲ್ ಬೆರೆಸಿ) ಪ್ರಧಾನಕಾಂಡ ಹಾಗೂ ದಪ್ಪ ರೆಂಬೆಗಳ ಮೇಲೆ ಏಪ್ರಿಲ್ ತಿಂಗಳಲ್ಲಿ ಹಾಗೂ ನವಂಬರ್ ತಿಂಗಳಲ್ಲಿ ಸಿಂಪಡಿಸುವುದರಿAದ ಬೋರರ್ ಹಾವಳಿಗೆ ಉತ್ತಮ ರಕ್ಷಣೆ ಕೊಡುವಲ್ಲಿ ಸಹಕಾರಿಯಾಗಿದೆ. ಮುಂದಿನ ಚಳಿಗಾಲದಲ್ಲಿ ಈ ಕೀಟಹಾರುವ ಕಾಲವಾದ್ದರಿಂದ ಫೆಂಡಾಲ್ ೫೦ ಈಟಿಯನ್ನು ೨೦೦ ಲೀಟರ್ ನೀರಿನಲ್ಲಿ ೪೦೦ ಮಿಲೀ.ನಂತೆ ಕೀಟ ಹಾರುವ ಕಾಲದೊಳಗೆ ಸಿಂಪಡಿಸಬೇಕು.

ಫೆರಮೋಹನ್ ಟ್ರಾಫ್ ಲಭ್ಯತೆ

ಕೀಟಗಳು ಹಾರುವ ಕಾಲದಲ್ಲಿ ಕಾಫಿ ತೋಟಗಳಲ್ಲಿ ನೂತನ ವಿಧಾನವಾದ ಮೋಹಕ ಲಿಂಕಾರ್ಷಕ (ಫೆರಮೋಹನ್ ಟ್ರಾಫ್) ಬಲೆಗಳನ್ನು ಬಳಸುವುದರ ಮೂಲಕ ನಿಯಂತ್ರಿಸಬಹುದಾಗಿದೆ. ಈ ಟ್ರಾö್ಯಪರ್‌ಗಳು ಮುಂದಿನ ದಿನಗಳಲ್ಲಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಪ್ರತಿ ಟ್ರಾö್ಯಪರ್‌ಗೆ ರೂ. ೧೫೫ರಂತೆ ದೊರೆಯಲಿದ್ದು, ಪ್ರತೀ ಎಕರೆಗೆÉ ೧೦ ಟ್ರಾö್ಯಪರ್‌ಗಳನ್ನು ವಿವಿಧೆಡೆ ತೂಗುಹಾಕಬೇಕಾಗುತ್ತದೆ.

ಕಾಫಿ ಬೆಳೆಯಲ್ಲಿ ಅರೇಬಿಕಾಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ ನಿರ್ವಹಣೆಯ ಖರ್ಚು ಹೆಚ್ಚಾಗುವುದು. ಹವಾಮಾನ ವೈಪರೀತ್ಯದ ಪರಿಣಾಮ ಕಾಂಡಕೊರಕ, ಕೀಟಬಾಧೆಗಳು, ನುರಿತ ಕಾರ್ಮಿಕರ ಕೊರತೆ ಅಕಾಲಿಕವಾಗಿ ಹೂವಾಗಿ ಹಣ್ಣಾಗುವ ವ್ಯತಿರಿಕ್ತ ಪರಿಣಾಮ ಅರೇಬಿಕಾ ಬೆಳೆ ನಿರ್ವಹಣೆಗೆ ತೊಂದರೆಯಾಗುವುದರಿAದ ಕಾಫಿ ಬೆಳೆಗಾರರು ಅರೇಬಿಕಾ ಬೆಳೆಯಲು ಹರಸಾಹಸಪಡುವಂತಾಗಿದೆ.