ಸಿದ್ದಾಪುರ, ಏ. ೧೪: ಸಿದ್ದಾಪುರದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೨೧ ರಿಂದ ೨೩ರವರೆಗೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ತಾ. ೨೧ ರಂದು ಬಿಳಿಗೇರಿಯ ಶ್ರೀ ಉದಯಕುಮಾರ್ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ನಿತ್ಯಪೂಜೆಯ ನಂತರ ಸಂಜೆ ಗೋಪೂಜೆ, ರಾತ್ರಿ ೭.೩೦ ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು. ತಾ. ೨೨ ರಂದು ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹೋಮ, ೧೦ಕ್ಕೆ ಕಲಶ ಪೂಜೆ ೧೧ ಕ್ಕೆ ಗಂಗಾಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಅಪರಾಹ್ನ ೩.೩೦ಕ್ಕೆ ದೇವರ ಮನೆ ಮೆರವಣಿಗೆ ನಂತರ ಸಂಜೆ ೭ ಗಂಟೆಯಿAದ ಕೊಂಡ ಪೂಜೆ ನಡೆಯಲಿದೆ. ತಾ. ೨೩ ರಂದು ಬೆಳಿಗ್ಗೆ ೮ ಗಂಟೆಗೆ ರುದ್ರಪಾರಾಯಣ, ಬೆಳಿಗ್ಗೆ ೧೦ಕ್ಕೆ ದೇವತಾ ಪ್ರಾರ್ಥನೆ, ಗಂಗಾಪೂಜೆ, ಗಂಗಾಸ್ನಾನ ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿತರಣೆ ನಂತರ ಮಂತ್ರಾಕ್ಷತೆ ನಡೆಯಲಿದೆ.