ಐಗೂರು, ಏ. ೧೪: ಟಾಟಾ ಕಾಜೂರು ಶಾಲೆಯಲ್ಲಿ ಸ್ವಚ್ಛತೆ, ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ, ಮತ್ತು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಕಾಜೂರ್ ಶಾಲೆ ಮುಖ್ಯ ಶಿಕ್ಷಕಿ ಸರಳಕುಮಾರಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶಾಲಾ ಮಕ್ಕಳಿಗೆ ಟಾಟಾ ಕಾಫಿ ಸಂಸ್ಥೆಯಿAದ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಶಾಲೆಗೆ ನೀರಿನ ಶೇಖರಣೆಯ ವ್ಯವಸ್ಥೆಗೆ ಟಾಟಾ ಸಂಸ್ಥೆಯವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಟಾಟಾ ಸಂಸ್ಥೆಯ ಕಿರಣ್ ರವರು ಮಾತನಾಡಿ ಈ ಶಾಲೆ ಅಭ್ಯುದಯ ಸಂಸ್ಥೆಯ ವತಿಯಿಂದ ಕಲಿಕೆಯಲ್ಲಿ ಮುಂದಿದ್ದು, ಶಾಲೆಯ ಶಿಕ್ಷಕ ವೃಂದದವರ ಶ್ರಮ ಅಪಾರವಾಗಿದ್ದು ಎಲ್‌ಕೆಜಿ ಶಿಕ್ಷಣ ಪ್ರಾರಂಭವಾಗುತ್ತಿರುವುದು ಸಂತೋಷದ ವಿಷಯ ಎಂದರು.

ಆರೋಗ್ಯ ಶುಶ್ರೂಷಕಿ ಸರಸ್ವತಿ ಮಾತನಾಡಿ ಈ ಶಾಲೆಯಲ್ಲಿ ಚಿತ್ರಕಲೆಯಲ್ಲಿ ಉತ್ತಮ ಪ್ರತಿಭೆಗಳಿವೆ ಎಂದರು. ಶಾಲಾ ಅಧ್ಯಾಪಕ ವೃಂದದವರಿAದ ಟಾಟಾ ಸಂಸ್ಥೆಯ ಕಿರಣ್ ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯ ಕಿರಣ್, ಸರಸ್ವತಿ, ಮಂಜು, ಮುಖ್ಯ ಶಿಕ್ಷಕಿ ಸರಳಕುಮಾರಿ ಶಿಕ್ಷಕಿಯರಾದ ಭಾರತಿ, ಇಂದಿರಾ, ವೇದಾವತಿ ಭಾಗವಹಿಸಿದ್ದರು.