ನಾಪೋಕ್ಲು, ಏ. ೧೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೩ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಕೂತಂಡ ಸೇರಿದಂತೆ ಮೇರಿಯಂಡ, ನಂಬುಡುಮಾಡ, ಮನೆಯಪಂಡ, ಬೊಪ್ಪಂಡ ಬಲ್ಲಚಂಡ, ಕಳ್ಳಿಚಂಡ, ಚೀಯಕಪೂವಂಡ, ಚೆರುಮಂದAಡ, ಪಟ್ಟಡ ಬೇಪುಡಿಯಂಡ, ಚಿಂಡಮಾಡ, ಮಾಪಣಮಾಡ, ಮೂಕೊಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ನಡೆದ ಮೇರಿಯಂಡ ಮತ್ತು ಅಜ್ಜಿನಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮೇರಿಯಂಡ ತಂಡವು ಅಜ್ಜಿನಂಡ ತಂಡವನ್ನು ೩-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಮೇರಿಯಂಡ ತಂಡದ ಪರ ರಾಯಲ್ ಅಯ್ಯಣ್ಣ ೨, ಸಚಿನ್ ಸೋಮಣ್ಣ ಒಂದು ಗೋಲು ದಾಖಲಿಸಿದರು. ಮೇಚಂಡ ಮತ್ತು ನಂಬುಡುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡುಮಾಡ ತಂಡವು ಮೇಚಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ನಂಬುಡುಮಾಡ ತಂಡದ ಪರ ಅಶ್ವನ್ ಎರಡು ಗೋಲುಗಳಿಸಿದರೆ, ಮೇಚಂಡ ಕಬೀರ್ ಒಂದು ಗೋಲು ದಾಖಲಿಸಿದರು.

ಮಾಣಿಪಂಡ ಮತ್ತು ಮನೆಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮನೆಯಪಂಡ ತಂಡವು ೧-೦ ಗೋಲುಗಳಿಂದ ಮಾಣಿಪಂಡ ತಂಡವನ್ನು ಸೋಲಿಸಿತು. ಮನೆಯಪಂಡ ತಂಡದ ಅರ್ವಿನ್ ಮಾಚಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಬೊಪ್ಪಂಡ ಮತ್ತು ಕೋಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಪ್ಪಂಡ ತಂಡವು ಕೋಡಿರ ತಂಡವನ್ನು ಟೈಬ್ರೇಕರ್‌ನಲ್ಲಿ ೫-೪ ಗೋಲುಗಳ ಅಂತರದಿAದ ಸೋಲಿಸಿತು.

ಮೈದಾನ ೨ರಲ್ಲಿ ನಡೆದ ಕರವಂಡ ಮತ್ತು ಬಲ್ಲಚಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬಲ್ಲಚಂಡ ತಂಡವು ಕರವಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಬಲ್ಲಚಂಡ ತಂಡದ ಪರ ಚಂಗಪ್ಪ, ಸಜನ್ ಗಣಪತಿ ತಲಾ ಒಂದೊAದು ಗೋಲು ದಾಖಲಿಸಿದರು. ಬಾಚಿನಾಡಂಡ ಮತ್ತು ಕಳ್ಳಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಬಾಚಿನಾಡಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಕಳ್ಳಿಚಂಡ ತಂಡದ ಪರ ಕಾವೇರಪ್ಪ ಮೂರು, ಸಾವನ್ ಒಂದು ಗೋಲು ದಾಖಲಿಸಿದರು.

ಜಮ್ಮಡ ಮತ್ತು ಚೀಯಕಪೂವಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೀಯಕಪೂವಂಡ ತಂಡವು ಜಮ್ಮಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಚೀಯಕಪೂವಂಡ ತಂಡದ ಪರ ರೋಹನ್, ರಿತೇಶ್ ತಮ್ಮಯ್ಯ ತಲಾ ಒಂದು ಗೋಲು ದಾಖಲಿಸಿದರು. ಜಮ್ಮಡ ತಂಡದ ಪರ ರಿಕ್ಕಿ ಚಿಣ್ಣಪ್ಪ ಏಕೈಕ ಗೋಲು ದಾಖಲಿಸಿದರು. ಮುಕ್ಕಾಟಿರ (ಕಡಗದಾಳು) ಮತ್ತು ಚೆರುಮಂದAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರುಮಂದAಡ ತಂಡವು ಮುಕ್ಕಾಟಿರ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ಚೆರುಮಂದAಡ ತಂಡದ ಪರ ಕವನ್ ಕಾರ್ಯಪ್ಪ, ಪ್ರತೀಕ್ ಪೂವಯ್ಯ ತಲಾ ಒಂದು ಗೋಲು ದಾಖಲಿಸಿದರು. ಪಟ್ಟಡ ಮತ್ತು ಪಟ್ಟಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಟ್ಟಡ ತಂಡವು ಪಟ್ಟಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ ೩-೦ ಗೋಲುಗಳ ಅಂತರದಲ್ಲಿ ಸೋಲಿಸಿತು.

ಮೈದಾನ ೩ರಲ್ಲಿ ನಡೆದ ಮಾಜಿ ಚಾಂಪಿಯನ್ ಕೂತಂಡ ಮತ್ತು ಮೀದೇರಿರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕೂತಂಡ ತಂಡವು ಮೀದೇರಿರ ತಂಡವನ್ನು ೪-೦ ಗೋಲಿನ ಅಂತರದಿAದ ಸೋಲಿಸಿತು. ಕೂತಂಡ ತಂಡದ ಪರ ಸಂತೋಷ್, ಬೋಪಣ್ಣ ತಲಾ ಎರಡು ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು. ಬೇಪುಡಿಯಂಡ ಮತ್ತು ಅಲ್ಲಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೇಪುಡಿಯಂಡ ತಂಡವು ಅಲ್ಲಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಿAದ ಸೋಲಿಸಿತು. ಮುಂಡAಡ ಮತ್ತು ಚಿಂಡಮಾಡ ತಂಡಗಳ ನಡುವಿನ ಸೆಣಸಾಟದಲ್ಲಿ ಚಿಂಡಮಾಡ ತಂಡವು ಮುಂಡAಡ ತಂಡವನ್ನು ೪-೧ ಗೋಲುಗಳ ಅಂತರದಿAದ ಮಣಿಸಿತು.

ಚಿಂಡಮಾಡ ತಂಡದ ಪರ ತೀರ್ಥನ್ ಮೂರು ಮತ್ತು ಕಿರಣ್ ಗೋಲು ದಾಖಲಿಸಿದರೆ, ಮುಂಡAಡ ತಂಡದ ಪರ ದೀಕ್ಷೀತ್ ದೇವಯ್ಯ ಒಂದು ಗೋಲು ದಾಖಲಿಸಿದರು. ಮಾಪಣಮಾಡ ಮತ್ತು ಮಾಳೇಟಿರ(ಕುಂದ) ತಂಡಗಳ ನಡುವಿನ ಪಂದ್ಯದಲ್ಲಿ ಮಾಪಣಮಾಡ ತಂಡವು ಮಾಳೇಟಿರ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು. ಮಾಪಣಮಾಡ ತಂಡದ ಪರ ಬೋಪಣ್ಣ, ಕವನ್ ಕಾವೇರಪ್ಪ, ಕಾರ್ಯಪ್ಪ, ಬೋಪಣ್ಣ ತಲಾ ಒಂದು ಗೋಲು ದಾಖಲಿಸಿದರು. ಕುಪ್ಪಂಡ (ನಾಂಗಾಲ) ಮತ್ತು ಮೂಕೊಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡವು ಕುಪ್ಪಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೫-೩ ಗೋಲುಗಳಿಂದ ಮಣಿಸಿತು. -ಪಿ.ವಿ.ಪ್ರಭಾಕರ್