ಕೂಡಿಗೆ, ಏ. ೧೨ : ಇಲ್ಲಿಗೆ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ತಾ೧೭ ರಂದು ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ಜರುಗಲಿದೆ. ರಥೋತ್ಸವದ ಅಂಗವಾಗಿ ತಾ. ೧೫ ರಂದು ದೇವಾನಂದಿ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಧಾಪನೆ, ಜಪ. ಅಭಿಷೇಕ್, ಗಣಪತಿ ಹೋಮ ನಡೆಯಲಿದೆ,

ತಾ. ೧೬ ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ,ಮೃತ್ಯುಂಜಯ ಹೋಮ, ಸೇರಿದಂತೆ ವಿವಿಧ ಹೋಮ ಹವನ ಮಹಾಪೂಜೆ, ಸಂಜೆ ೬ ಗಂಟೆಗೆ ಕೂಡಿಗೆ ಮತ್ತು ಶಿರಂಗಾಲ ಗ್ರಾಮಸ್ಥರಿಂದ ಸಂಧ್ಯಾಪೂಜೆ ಕಾರ್ಯಕ್ರಮ, ೭ ಗಂಟೆಗೆ ಸೀತಾ ಕಲ್ಯಾಣೋತ್ಸವ ನಡೆಯಲಿದೆ.

ತಾ. ೧೭ರಂದು ರಥೋತ್ಸವದ ಅಂಗವಾಗಿ ಪವಿತ್ರ ಗಂಗೋದಕದಿAದ ಶ್ರೀ ಸ್ವಾಮಿಗೆ ರುದ್ರಾಭೀಷೇಕ, ಪಂಚಾಮೃತ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಅಭಿಜಿನ್ ಮುಹೂರ್ತ ದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥಾರೋಹಣ, ನಂತರ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.ರಥೋತ್ಸವದ ಜಾತ್ರೋತ್ಸದ ಅಂಗವಾಗಿ ನಾಲ್ಕು ದಿನಗಳವರೆಗೆ ವೀರಾಜಪೇಟೆ ನಾಟ್ಯಾಂಜಲಿ ನೃತ್ಯಾಲಯ ತಂಡದವರಿAದ ನೃತ್ಯ ವೈವಿಧ್ಯ, ಬೆಂಗಳೂರಿನ ತಾಂಡವA ನೃತ್ಯ ಅಕಾಡೆಮಿ ತಂಡ, ಮತ್ತು ಕುಮಾರ ಪ್ರಗತಿ ಕೇಡನ ತಂಡದವರಿAದ ನೃತ್ಯ ವೈವಿಧ್ಯ, ಎ .ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ವೈವಿಧ್ಯ ಮತ್ತು ಹಾಸನ ಮೋಹನ್ ಮೇಲೋಡಿಸ್ ತಂಡದವರಿAದ ಆಕೇಸ್ಟಾç ಕಾರ್ಯಕ್ರಮಗಳು ನಡೆಯಲಿವೆ. ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.