ನಾಪೋಕ್ಲು, ಏ. ೧೩: ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದಲ್ಲಿ ಶ್ರೀ ಪನ್ನಂಗಾಲ ತಮ್ಮೆ ಸಣ್ಣ ಕೊಡೆ ಉತ್ಸವ ಶುಕ್ರವಾರ ಶ್ರೀ ಪನ್ನಂಗಾಲ ಸನ್ನಿಧಿಯಲ್ಲಿ ಜರುಗಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಇಲ್ಲಿ ಎರಡು ವರ್ಷಕ್ಕೆ ಒಂದು ಸಾರಿ ದೊಡ್ಡ ಕೊಡೆ ಉತ್ಸವ ಜರುಗುತ್ತದೆ. ಇದೀಗ ಸಣ್ಣ ಹಬ್ಬ ನಡೆಯುತ್ತಿದೆ. ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಅಂಜಪರವAಡ ಮನೆಯಿಂದ ಭಂಡಾರ ತರಲಾಯಿತು. ೧೧ ಗಂಟೆಗೆ ತಡಂಬು ತೊಳೆಯುವುದು, ಮಧ್ಯಾಹ್ನ ೧ ಗಂಟೆಗೆ ನಾಡು ಹತ್ತಿಸುವುದು ಮತ್ತು ಹರಕೆ ಒಪ್ಪಿಸಿ ರಾತ್ರಿ ಕರಿ ಚಾಮುಂಡಿ ಭಾರಣಿ ಜರುಗಿತು.