ಪೊನ್ನಂಪೇಟೆ, ಏ. ೧೩ : ಗೋಣಿಕೊಪ್ಪಲು ಕಾವೇರಿ ಕಾಲೇಜು ಕಾಮರ್ಸ್ ವಿಭಾಗ ಹಾಗೂ ಐಕ್ಯೂಎಸಿ ಸೆಲ್ ಸಂಯುಕ್ತ ಆಶ್ರಯದಲ್ಲಿ ಕಾಮರ್ಸ್ ವಿದ್ಯಾರ್ಥಿ ಗಳಿಗಾಗಿ ರಾಷ್ಟçಮಟ್ಟದ ಕಾಮರ್ಸ್ ಫೆಸ್ಟ್, ಉತ್ತಮ್ -೨ ಆಯೋಜಿಸ ಲಾಗಿತ್ತು. ಫೆಸ್ಟ್ನ ಎಲ್ಲಾ ವಿಭಾಗದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮೈಸೂರಿನ ಸೇಪಿಯಂಟ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೈಸೂರಿನ ಶೇಷಾದ್ರಿಪುರಂ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮೈಸೂರು ಸೇಪಿಯಂಟ್ ಕಾಲೇಜು ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ, ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ, ಬೆಸ್ಟ್ ಮ್ಯಾನೇಜರ್ ಸ್ಪರ್ಧೆಯಲ್ಲಿ ಮೈಸೂರು ಸೇಪಿಯಂಟ್ ಕಾಲೇಜು ಪ್ರಥಮ, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ನಲ್ಲಿ ಮೈಸೂರು ಮಹಾಜನ ಕಾಲೇಜು ಪ್ರಥಮ, ಮೈಸೂರು ಶೇಷಾದ್ರಿಪುರಂ ಕಾಲೇಜು ದ್ವಿತೀಯ, ಮಾರ್ಕೆಟಿಂಗ್ ವಿಭಾಗದಲ್ಲಿ ಮೈಸೂರು ಶೇಷಾದ್ರಿಪುರಂ ಕಾಲೇಜು ಪ್ರಥಮ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ದ್ವಿತೀಯ, ವಾಣಿಜ್ಯೋದ್ಯಮ ವಿಭಾಗ ಸ್ಪರ್ಧೆಯಲ್ಲಿ ಮೈಸೂರು ಸೇಪಿಯಂಟ್ ಕಾಲೇಜು ಪ್ರಥಮ, ಮೈಸೂರು ಮಹಾಜನ ಕಾಲೇಜು ದ್ವಿತೀಯ, ಹಣಕಾಸು ವಿಭಾಗ ಸ್ಪರ್ಧೆಯಲ್ಲಿ ಮೈಸೂರು ಶೇಷಾದ್ರಿಪುರಂ ಕಾಲೇಜು ಪ್ರಥಮ, ಮೈಸೂರು ಸೇಪಿಯಂಟ್ ಕಾಲೇಜು ದ್ವಿತೀಯ, ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ಮೈಸೂರು ಶೇಷಾದ್ರಿಪುರಂ ಕಾಲೇಜು ಪ್ರಥಮ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈಸೂರು ಹಿಂದೂಸ್ತಾನ್ ಕಾಲೇಜು ಪ್ರಥಮ, ಮೈಸೂರು ಸೇಪಿಯಂಟ್ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಏಲಿಯನ್ಸ್ ಯೂನಿವರ್ಸಿಟಿ ಸಹಾಯಕ ನಿರ್ದೇಶಕ ಡಾ. ಅಭಿಷೇಕ್ ವೆಂಕಟೇಶ್ವರ, ಡಾ. ಅಚ್ಚುತ ರಾವ್, ಗೋಣಿಕೊಪ್ಪಲು ಗ್ರಾ. ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಐ ಕ್ಯೂ ಎ ಸಿ ಸಂಚಾಲಕಿ ಡಾ. ನಯನ ತಮ್ಮಯ್ಯ ಭಾಗವಹಿಸಿದ್ದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟಿರ ಕೆ. ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಚಿತ್ರನಟಿ ಶುಭ್ರ ಅಯ್ಯಪ್ಪ, ಚಿತ್ರನಟ ಶಿಶಿರ್ ಬೈಕಾಡಿ, ಉದ್ಯಮಿ ವಿಶಾಲ್ ಸಿವಪ್ಪ, ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ವಾಣಿಜ್ಯ ಶಾಸ್ತç ವಿಭಾಗ ಮುಖ್ಯಸ್ಥೆ ಡಾ. ನಯನ ತಮ್ಮಯ್ಯ, ಕಾರ್ಯಕ್ರಮ ಸಂಚಾಲಕರಾದ ಕೆ. ಎಸ್. ಪೂಜ, ಪಿ. ಆರ್. ನಿತ್ಯ, ವಿದ್ಯಾರ್ಥಿ ಸಂಚಾಲಕರಾದ ಎಸ್. ಕೆ. ದರ್ಶನ್, ಎ. ಸಿ.ಅಭಿಷೇಕ್, ಆರ್. ಅಶ್ವಿನಿ, ಕೆ. ಯಶಸ್ವಿನಿ, ವಾಣಿಜ್ಯ ಶಾಸ್ತç ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.