ಐಗೂರು, ಏ. ೧೩: ಐಗೂರು ವ್ಯಾಪ್ತಿಯ ಡಿಬಿಡಿಯಲ್ಲಿ ಚಾರಿತ್ರಿಕ ಹಿನ್ನೆಲೆಯುಳ್ಳ ಕರಿಮಾರಿಯಮ್ಮ ದೇವರ ಉತ್ಸವ ವಿಜೃಂಭಣೆಯಿAದ ನಡೆಯಿತು. ೨೦೨೧ ರಲ್ಲಿ ಟಾಟಾ ಕಾಫಿಯ ದಾಸ್ತಾನು ಮಳಿಗೆಯನ್ನು ಶುಚಿತ್ವ ಗೊಳಿಸುವ ಸಂದರ್ಭದಲ್ಲಿ ಸುಮಾರು ೪೦ ವರ್ಷ ಹಳೆಯ ಕರಿಮಾರಿಯಮ್ಮ ವಿಗ್ರಹವೊಂದು ಕಾರ್ಮಿಕರಿಗೆ ದೊರೆತಿದ್ದು, ಇದರ ಬಗ್ಗೆ ಕಾರ್ಮಿಕರು ಮತ್ತು ಆಡಳಿತ ಮಂಡಳಿಯವರು ಕೂಲಂಕಷವಾಗಿ ತನಿಖೆ ಮಾಡಿದಾಗ ೪೦ ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಲು ತಂದಿದ್ದ ವಿಗ್ರಹವನ್ನು ಯಾವುದೋ ಕಾರಣಕ್ಕೆ ದಾಸ್ತಾನು ಮಳಿಗೆಯಲ್ಲಿ ಇಟ್ಟಿದ್ದು ಎಂದು ತಿಳಿದು ಬಂದಿತ್ತು.
ನಂತರ ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯವರು ಸೇರಿ ವಿಗ್ರಹ ಪ್ರತಿಷ್ಠಾಪನೆಯನ್ನು ಮಾಡಿದ್ದರು. ಇದರ ವಾರ್ಷಿಕ ಪೂಜೆಯ ಅಂಗವಾಗಿ ವಾದ್ಯಗೋಷ್ಠಿಗಳಿಂದ ಆಡುಗಳ ಬಲಿ ಪೂಜೆಯನ್ನು ನೆರವೇರಿಸಿ, ರಾತ್ರಿ ವೇಳೆಯಲ್ಲಿ ಕರಗ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನು ಭಕ್ತರಿಗೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ದೇವಾಲಯದ ಆಡಳಿತ ಮಂಡಳಿಯವರಾದ ಪಾಪಣ್ಣ, ಎನ್. ಗಣೇಶ, ಪನ್ನೀರು, ಬಸವರಾಜು, ದಿನೇಶ್ ಶೆಟ್ಟಿ, ರಾಮಕೃಷ್ಣ, ಸುಬ್ರಮಣಿ, ಬೋಜ, ಗೋವಿಂದ, ಆರ್. ಗಣೇಶ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.