ಗೋಣಿಕೊಪ್ಪಲು. ಏ. ೧೨: ದಕ್ಷಿಣ ಕೊಡಗಿನ ಹುದಿಕೇರಿಯ ಅಂಜಿಗೇರಿ ನಾಡ್ ಕೂಟ ವತಿಯಿಂದ ಹುದಿಕೇರಿ ಶಾಲಾ ಮೈದಾನದಲ್ಲಿ ೧೫ ದಿನಗಳ ಕಾಲ ನಡೆದ ಉಚಿತ ಹಾಕಿ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಶಿಬಿರದ ಪ್ರಯೋಜನ ಪಡೆದರು. ಮಕ್ಕಳಲ್ಲಿ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಪ್ರತಿಷ್ಠಿತ ಅಂಜಿಗೇರಿ ನಾಡ್ ಕೂಟದ ವತಿಯಿಂದ ಮಾರ್ಚ್ ೨೫ ರಿಂದ ಉಚಿತ ಹಾಕಿ ಶಿಬಿರವನ್ನು ೧೫ ದಿನಗಳ ಕಾಲ ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರ ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತುನೀಡುವ ಸಲುವಾಗಿ ಅಂಜಿಗೇರಿ ನಾಡ್ ಕೂಟ ಯುವಕರು ಉಚಿತವಾಗಿ ಹಾಕಿ ಶಿಬಿರವನ್ನು ಆಯೋಜಿಸಿ ಆ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇವರ ಮುಂದಿನ ಭವಿಷ್ಯಕ್ಕೆ ಹಾಕಿ ಕ್ರೀಡೆಯು ಸಹಕಾರಿಯಾಗುವಂತಾಗಲಿ ಎಂದರು. ಸ್ಥಳೀಯ ದಾನಿಗಳಾದ ಬಲ್ಯಮಾಡ ತ್ರಸನ್ ಅವರ ತಂದೆಯಾದ ಬಲ್ಯಮಾಡ ಬಬ್ಬು ಸ್ಮರಣಾರ್ಥ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಅಂಜಿಗೇರಿ ನಾಡ್ ಕೂಟದ ಅಧ್ಯP್ಷÀ ಚಂಗುಲAಡ ಅಯ್ಯಪ್ಪ, ಕಾರ್ಯದರ್ಶಿ ಬಯವಂಡ ಪ್ರತು ಪೂವಣ್ಣ, ತರಬೇತುದಾರ ಚೆಕ್ಕೆರ ಆದರ್ಶ್ ಹಾಗೂ ಚಂದ್ರ ಪ್ರಕಾಶ್, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಂಜಿಗೇರಿ ನಾಡ್ಕೂಟದ ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.