ಪಾಲಿಬೆಟ್ಟ, ಏ. ೧೨: ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾಟವು ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ನಡೆಯಿತು. ಸುಮಾರು ಹನ್ನೊಂದು ತಂಡಗಳು ಭಾಗವಹಿಸಿ ಕ್ರೀಡಾ ಪ್ರೇಮಿಗಳಿಗೆ ಉತ್ತಮ ಪ್ರದರ್ಶನ ನೀಡಿದವು.

ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಇಲವೆನ್ ಮಾಲ್ದಾರೆ, ೪ನೇ ಬಾರಿ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ನೀಲಿಯಟ್ ಕೋಕೇರಿ ದ್ವಿತೀಯ ಹಾಗೂ ಬ್ಲಾö್ಯಕ್ ಪಾಂರ‍್ಸ್ ತೃತೀಯ ಬಹುಮಾನವನ್ನು ಪಡೆದುಕೊಂಡವು. ಶಿಸ್ತಿನ ತಂಡ ಎಂದು ಗುಡ್ಲೂರು ವಾರಿರ‍್ಸ್ಗೆ ಪ್ರಶಸ್ತಿ ದೊರಕಿತು. ಆಲ್‌ರೌಂಡರ್ ಆಟಗಾರ್ತಿ ಪ್ರಮೀಳ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರು ಮಾತನಾಡಿ, ಮಹಿಳೆಯರು ಕೂಡ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಯಾರಿಗೂ ಕಮ್ಮಿ ಇಲ್ಲ ಎಂಬುದಕ್ಕೆ ಈ ಮಹಿಳಾ ತಂಡಗಳೇ ಸಾಕ್ಷಿ ಎಂದರು.

ಈ ಸಂದರ್ಭ ಸೈನಿಕ ಕುಮಾರ, ಚೆನ್ನಯ್ಯನಕೋಟೆ ಉಪಠಾಣಾಧಿಕಾರಿ ಪ್ರಕಾಶ್, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಭಾಸ್ಕರ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಪ್ರಮುಖರಾದ ವಿಜು ವರ್ಗೀಸ್, ಹರೀಶ್ ಕಾರ್ಯಪ್ಪ, ರವೀಂದ್ರ ಬಾವೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೀಂ ಇಲವೆನ್ ಅಧ್ಯಕ್ಷೆ ಸುಜಿತಾ ವಹಿಸಿದ್ದರು.