ಮಡಿಕೇರಿ,ಏ.೧೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಬ್ಬಿಧಾರೆ ಎಂಬಲ್ಲಿ ಹರಿಯುತ್ತಿರುವ ನದಿ ದಂಡೆಯಲ್ಲಿ ಪ್ರವಾಸಿಗರಿಂದಾಗಿ ಕಸದ ರಾಶಿ ಕಂಡುಬರುತ್ತಿದೆ.
ಎಲ್ಲೆಲ್ಲೂ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಪ್ರವಾಸಿಗರು ಹೆಚ್ಚಾಗಿ ತಂಪಾದ, ನೀರು ಇರುವ ಸ್ಥಳಗಳನ್ನು ಹುಡುಕಿಕೊಂಡು ಹೋಗುವದು ಸಾಮಾನ್ಯವಾಗಿದೆ. ಹಾಗೆಯೇ ಅಬ್ಬಿಧಾರೆ ಬಳಿ ಹರಿಯುತ್ತಿರುವ ನದಿ ದಂಡೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವದು ಕಂಡುಬರುತ್ತಿದೆ. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮೋಜು-ಮಸ್ತಿಗಾಗಿ ಬರುವ ಯುವಕರ ಗುಂಪು ಮದ್ಯ ಸೇವನೆ ಮಾಡಿ, ಅಲ್ಲಿಯೇ ಮಾಂಸ ಇತ್ಯಾದಿ ಸೇವನೆ ಮಾಡಿ ಬಾಟಲಿ ಹಾಗೂ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಮಲೀನ ಮಾಡುತ್ತಿರುವದು ಕಂಡು ಬರುತ್ತಿದೆ.
ದೇವರ ಬನ
ಪ್ರವಾಸಿಗರು ಮೋಜು ಮಾಡುವ ಸ್ಥಳದ ಸನಿಹದಲ್ಲೇ ಗ್ರಾಮದ ಶ್ರೀ ಚಾಮುಂಡಿ ದೇವಿಯ ಬನ ಇದೆ. ಅಲ್ಲಿಯೇ ನದಿಯಲ್ಲಿ ದೇವರ ಗುಂಡಿ ಕೂಡ ಇದ್ದು, ಈ ಪರಿಸರದಲ್ಲಿ ಮೋಜು, ಮಸ್ತಿ ಮಾಡುವದು ಸರಿಯಲ್ಲ. ಈ ಬಗ್ಗೆ ಗ್ರಾಮ ಪಂಚಾಯ್ತಿ ಗಮನ ಹರಿಸಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.