ಸೋಮವಾರಪೇಟೆ: ಪಂಚಾAಗದ ಪ್ರಕಾರ ಹೊಸ ವರ್ಷವೆಂದು ಪರಿಗಣಿಸಿರುವ ಯುಗಾದಿ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮ-ಸಡಗರದಿAದ ಆಚರಿಸಲಾಯಿತು. ಮನೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳನ್ನು ಏರ್ಪಡಿಸಿ, ಬೇವು ಬೆಲ್ಲ ಸವಿದು, ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು, ನೆಂಟರಿಷ್ಟರೊAದಿಗೆ ಹಬ್ಬದ ಊಟ ಮಾಡಿ ಸಂಭ್ರಮಿಸಿದರು. ಯುಗಾದಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪಟ್ಟಣದ ಶ್ರೀವಿದ್ಯಾಗಣಪತಿ ದೇವಾಲಯ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ರಾಮಮಂದಿರ, ಯಡೂರು ಸೋಮೇಶ್ವರ ದೇವಾಲಯ, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ, ಹಾನಗಲ್ಲು ಗಣಪತಿ ದೇವಾಲಯ, ಆರ್ಎಂಸಿ ಮುಂಭಾಗದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಗಣಪತಿ ದೇವಾಲಯ, ಆಂಜನೇಯ ದೇವಾಲಯ, ಶ್ರೀಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಯುಗಾದಿ ಹಬ್ಬವನ್ನು ಗ್ರಾಮಸ್ಥರು ಸಾಮೂಹಿಕವಾಗಿ ಆಚರಿಸಿದರು. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್ನಾಥ್ ಜೀ ಅವರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಯುಗಾದಿ ವಿಶೇಷ ಪೂಜೆಗಳು ನಡೆದವು. ಪಂಚಾAಗ ಶ್ರವಣ, ಬೇವು ಬೆಲ್ಲ ವಿತರಣೆ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆ ಯಿತು. ಗ್ರಾಮಸ್ಥರು ಗ್ರಾಮದ ಸಮೃದ್ಧಿ ಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಅಮ್ಮತ್ತಿ: ವಿಶ್ವ ಹಿಂದೂ ಪರಿಷತ್ ಅಮ್ಮತ್ತಿ ಘಟಕದ ವತಿಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯಿತು.
ಯುಗಾದಿ ಹಬ್ಬದ ಪ್ರಯುಕ್ತ ನಡೆದ ಸತ್ಯ ನಾರಾಯಣ ಪೂಜೆಯಲ್ಲಿ ಸುತ್ತಮುತ್ತಲಿನಿಂದ ಆಗಮಿಸಿದ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ವೆಂಕಟರಾಮ ಮಾತನಾಡಿ, ಹಿಂದೂ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಎಲ್ಲರನ್ನೂ ಒಗ್ಗೂಡಿಸಿ ಸಾಮೂಹಿಕವಾಗಿ ಸತ್ಯ ನಾರಾಯಣ ಪೂಜೆ ಮಾಡುತಿದ್ದೇವೆ. ಹಿಂದೂ ಸಮಾಜದ ಮತ್ತು ಹಿಂದೂ ಸಂಸ್ಕೃತಿಗಳ ಉಳಿವಿಗೆ ಎಲ್ಲರೂ ಕಟಿಬದ್ದರಾಗಿರಬೇಕೆಂದು ಕರೆ ನೀಡಿದರು. ಧರ್ಮ ಎಂದರೆ ಕರ್ತವ್ಯ, ಹಾಗಾಗಿ ಎಲ್ಲರೂ ಅವರವರ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕು. ಸಮಾಜ ಕ್ರಿಯಾಶೀಲತೆಯಿಂದಿರುವಾಗ ಮಾತ್ರ ದೇಶ ಶಕ್ತಿಶಾಲಿಯಾಗಿರುತ್ತೆ ಇದಕ್ಕೆ ಉತ್ತಮ ಉದಾಹರಣೆ ಜಪಾನ್ ಹಾಗೂ ಇಸ್ರೇಲ್ ದೇಶಗಳಾಗಿವೆ ಹಾಗಾಗಿ ಭಾರತ ದೇಶದ ಉಳಿವಿಗಾಗಿ ನಾವೆಲ್ಲಾ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕೆಂದರು. ಮಹಾಮಂಗಳಾರತಿಯ ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಪೂಜೆಯ ಅಂಗವಾಗಿ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭ ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಪ್ರಥಮ್ ಕರುಂಬಯ್ಯ, ಪ್ರಿನ್ಸ್ ಗಣಪತಿ, ಮೀರನ್ ಕಾವೇರಪ್ಪ, ಮಧು, ಪ್ರಸನ್ನ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು ಇದ್ದರು.ಕೂಡಿಗೆ: ಪ್ರಾಚೀನ ಹಿಂದೂ ಸಂಸ್ಕೃತಿಯ ಪ್ರತೀಕ ಹೊನ್ನಾರು ಉತ್ಸವವಾಗಿದೆ. ಎಲ್ಲಾ ಗ್ರಾಮೀಣ ಸೊಗಡುಗಳನ್ನು ಯುವಕರು ಮರೆಯುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳನ್ನು ತಿಳಿಸುವ ಕರ್ತವ್ಯ ನಮ್ಮದಾಗಿರುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಪ್ರದಾಯದAತೆ ಯುಗಾದಿ ಪ್ರಯುಕ್ತ ಬಸವೇಶ್ವರ ದೇವಾಲಯದಲ್ಲಿ ಜೋಡಿ ಎತ್ತುಗಳಿಗೆ ಹಾಗೂ ಉಳುಮೆಯ ಪರಿಕರಗಳಿಗೆ ಪೂಜೆ ಸಲ್ಲಿಸಿ ಹೊನ್ನಾರು ಉತ್ಸವಕ್ಕೆ ಅವರು ಚಾಲನೆ ನೀಡಿದರು. ಗ್ರಾಮದ ೨೦ಕ್ಕೂ ಹೆಚ್ಚು ಜೋಡೆತ್ತುಗಳು, ಕರುಗಳು ಸೇರಿದಂತೆ ಹಸುಗಳನ್ನು ಸಹ ಹೊನ್ನಾರು ಉತ್ಸವದಲ್ಲಿ ರೈತರು ಸಿಂಗಾರಗೊಳಿಸಿಕೊAಡು ಭಾಗವಹಿಸಿದರು. ಉತ್ಸವ ಕಾರ್ಯ ಕ್ರಮದಲ್ಲಿ ಗ್ರಾಮ ದೇವತಾ ಸಮಿತಿ ಮತ್ತು ಗ್ರಾಮದ ಹಿರಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿದರು. ಈ ಸಂದರ್ಭ ದೇವತಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗಣೇಶ್, ಕಟ್ಟಡ ಸಮಿತಿಯ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಬಸವಣ್ಣಯ್ಯ, ಗೌರವ ಅಧ್ಯಕ್ಷ ಕಾಳಿಂಗಪ್ಪ ಹಾಗೂ ಇತರರು ಇದ್ದರು.
ಕೂಡಿಗೆ: ಕೂಡಿಗೆ ಸೇರಿದಂತೆ ಸುತ್ತಮುತ್ತಲಿನ ೨೦ಕ್ಕೂ ಹೆಚ್ಚು ಗ್ರಾಮಗಳ ದೇವಾಲಯ ಸಮಿತಿಯವರಿಗೆ ಯುಗಾದಿ ಹಬ್ಬದ ದಿನದಂದು ಹೊಸ ಪಂಚಾAಗ ನೋಡುವುದು ಸಂಪ್ರದಾಯವಾಗಿರುತ್ತದೆ. ಅದರಂತೆಯೇ ಕಣಿವೆಯ ಅಣ್ಣನವರು ಎಂಬ ೮೫ ವರ್ಷದ ವಯೊವೃದ್ಧರು ಯುಗಾದಿ ಹಬ್ಬದ ದಿನ ಹೊಸ ಪಂಚಾAಗವನ್ನು ನೋಡಿ ಗ್ರಾಮದ ಮಳೆ, ಬೆಳೆ, ಗ್ರಾಮದ ಅಭಿವೃದ್ಧಿಗೆ ಸಂಬAಧಿಸಿದAತೆ ಮಾಹಿತಿ ನೀಡಿದರು.
ಕೂಡಿಗೆ ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಪಂಚಾAಗದ ರಾಶಿ ಭವಿಷ್ಯ ನೋಡುವ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ದೇವಾಲಯ ಸಮಿತಿಯ ವತಿಯಿಂದ ಕಾವೇರಿ ನದಿಯಲ್ಲಿ ಬಸವೇಶ್ವರ ಮತ್ತು ಮುತ್ತರಾಯ ದೇವರ ಗಂಗಾಪೂಜೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಮಂಜುನಾಥ (ಸೋಮಶೇಖರ್) ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷರು ಸೇರಿದಂತೆ ಸಮಿತಿಯ ನಿರ್ದೇಶಕರು, ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.ಪೊನ್ನಂಪೇಟೆ: ಯುಗಾದಿ ಹಬ್ಬದ ಪ್ರಯುಕ್ತ ಪೊನ್ನಂಪೇಟೆ ೪ನೇ ವಿಭಾಗದ ತೊರೆಬೀದಿಯಲ್ಲಿ ಕಲ್ಲಿನಿಂದ ತೆಂಗಿನ ಕಾಯಿ ಹೊಡೆಯುವ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಲಾಗಿತ್ತು.
ಬಡಾವಣೆಯ ಹಿರಿಯರು, ಯುವಕರು ಹಾಗೂ ಮಕ್ಕಳು ಈ ಸಾಂಪ್ರದಾಯಿಕ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗ್ರಾ.ಪಂ. ಅಧ್ಯಕ್ಷ ಅಣ್ಣೀರ ಹರೀಶ್ ನೇತೃತ್ವದಲ್ಲಿ, ಮನು ಧರ್ಮಜ ಕ್ರೀಡೆಯನ್ನು ಆಯೋಜಿಸಿದ್ದರು.
ಈ ಸಂದರ್ಭ ಪೊನ್ನಂಪೇಟೆ ನಾಗರಿಕ ವೇದಿಕೆ ಮಾಜಿ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಮಾಜಿ ಸೈನಿಕ ಮನು, ಗ್ರಾಮಸ್ಥರಾದ ಸುಜಿತ್, ಸತೀಶ್, ವಿಜಯ್, ನವೀನ ಇನ್ನಿತರರು ಇದ್ದರು.