ಮಡಿಕೇರಿ, ಏ. ೧೧: ಕಾರುಗುಂದ ಗ್ರಾಮದ ಶ್ರೀ ಪಟ್ಟಿ ಶಾಸ್ತಾವು, ಭಗವತಿ, ಅಯ್ಯಪ್ಪ ದೇವರ ವರ್ಷಾವಧಿ ತೆರೆ ಹಬ್ಬ ತಾ. ೧೩ ರಂದು (ನಾಳೆ) ಅಂಬಲದಲ್ಲಿ ನಡೆಯಲಿದೆ. ಬೆಳಿಗ್ಗೆ ೧೦.೩೦ ಗಂಟೆಗೆ ಅಜ್ಜೆಟ್ಟಿರ ಕುಟುಂಬದಿAದ ಭಂಡಾರ ತರುವುದು ಮತ್ತು ಪಟ್ಟು ಹರಕೆ ಒಪ್ಪಿಸುವುದು, ಸಂಜೆ ೪.೩೦ ಗಂಟೆಗೆ ತೆರೆ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.