ಸಿದ್ದಾಪುರ, ಏ. ೧೨: ಅರಣ್ಯ ಪ್ರದೇಶದಲ್ಲಿ ಗುಂಡಿಕ್ಕಿ ಕಾಣುಕೋಣವನ್ನು ಹತ್ಯೆಗೈದು ಮಾಂಸ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ನಾಪೋಕ್ಲು ಕುಂಜಿಲ ಗ್ರಾಮದವರಾದ ಮಹಮ್ಮದ್ ಜಾಬೀರ್ (೨೯) ಮತ್ತು ನೌಫಲ್ (೨೪) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬAಧಿಸಿದ ಉಳಿದ ೬ ಆರೋಪಿಗಳು ತಲೆಮರೆಸಿಕೊಂಡಿದ್ದು. ಅವರ ಬಂಧನಕ್ಕೆ ಇಲಾಖೆ ಬಲೆ ಬೀಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರು, ೨ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ
ಇತ್ತೀಚೆಗೆ ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಪಾರದಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ರಸ್ತೆಯ ಮೈಸೂರು-ಕೊಡಗು ಚೈನ್ಗೇಟ್ ಅರಣ್ಯ ಪ್ರದೇಶದಲ್ಲಿ ಕಾಣುಕೋಣದ ಹತ್ಯೆ ನಡೆದಿತ್ತು. ಇದೇ ಭಾಗದಲ್ಲಿ ಮತ್ತೊಂದು ಕಾಡ ಕೋಣವನ್ನು ಹತ್ಯೆ ಮಾಡಿ ಮಾಂಸ ಮಾಡಿ ಆರೋಪಿಗಳು ಪರಾರಿ ಯಾಗಿದ್ದರು. ಆನೆಚೌಕೂರು ವನ್ಯಜೀವಿ ವಿಭಾಗದಲ್ಲೂ ಈ ಸಂಬAಧ ಪ್ರಕರಣ ದಾಖಲಾಗಿತ್ತು ಇದು
(ಮೊದಲ ಪುಟದಿಂದ) ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾಗಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿತ್ತು.
ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಆರೋಪಿಗಳ ಖಚಿತ ಮಾಹಿತಿ ಮೇರೆಗೆ ಬಂದಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
-ಮುಬಾರಕ್