ಮಡಿಕೇರಿ, ಏ. ೧೨: ಬಿಸಿಲಿನ ಪ್ರತಾಪಕ್ಕೆ ಕೊಡಗು ಜಿಲ್ಲೆಯಾದ್ಯಂತ ಜನರು ಪರಿ ತಪಿಸುತ್ತಿದ್ದಾರೆ. ಈ ಬಾರಿ ಬೇಸಿಗೆ ಸಂದರ್ಭದ ಅಡ್ಡ ಮಳೆ ತೀರ ವಿಳಂಬವಾಗಿದ್ದು ದಿನೇ ದಿನೇ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಲೆ ಇದೆ. ಈ ಸನ್ನಿವೇಶದ ನಡುವೆ ಜಿಲ್ಲೆಯ ಕೆಲವೆಡೆಗಳಲ್ಲಿ ವರುಣನ ದರ್ಶನವಾಗಿದ್ದು ಒಂದಷ್ಟು ತಂಪೆರದAತಾಗಿದೆ.

ಈಗಿನ ಅಗತ್ಯತೆಗೆ ತಕ್ಕಷ್ಟು ಪ್ರಮಾಣದಲ್ಲಿ ಮಳೆ ಆಗದಿದ್ದರೂ ಅಲ್ಲಲ್ಲಿ ಮಳೆಯಾಗುತ್ತಿರುವದು ಜನತೆಯಲ್ಲಿ ಒಂದಷ್ಟು ಆಶಾಭಾವನೆ ಮೂಡಿಸುತ್ತಿದೆ. ಮಳೆಗಾಗಿ ಪ್ರಾರ್ಥಿಸಿ ತಲಕಾವೇರಿ, ಭಾಗಮಂಡಲ , ಶ್ರೀ ಇಗ್ಗುತಪ್ಪ ದೇವಾಲಯ ಸೇರಿದಂತೆ ಹಲವೆಡೆಗಳಲ್ಲಿ ಪೂಜೆ ಪುನಸ್ಕಾರಗಳು ನಡೆದಿವೆ. ಗೋಣಿಕೊಪ್ಪಲುವಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಇಂದು ಕೂಡ ಪ್ರಾರ್ಥನೆ ನೆರವೇರಿಸಲಾಗಿದೆ.

ಜನತೆ ಒಂದಷ್ಟು ಮಳೆಗಾಗಿ ದಿನಂಪ್ರತಿ ಆಗಸವನ್ನು ದಿಟ್ಟಿಸುತ್ತಿದ್ದಾರೆ. ನಿನ್ನೆ ಕೆಲ ವ್ಯಾಪ್ತಿಯಲ್ಲಿ ಗಾಳಿ ಸಹಿತ ಒಂದಷ್ಟು

ಚೆಯ್ಯಂಡಾಣೆ: ನಾಪೋಕ್ಲು ವಿಭಾಗದ ಕೆಲವು ಪ್ರದೇಶಗಳಿಗೆ ಶುಕ್ರವಾರ ಮಳೆಯಾಗಿದ್ದು ಬಿಸಿಲ ಬೇಗೆಯಲ್ಲಿ ಕಾದ ಭೂಮಿಗೆ ತಂಪೆರಗಿದAತಾಗಿದೆ.

ಶುಕ್ರವಾರ ನಾಪೋಕ್ಲು ಪಟ್ಟಣದ ಸುತ್ತಮುತ್ತಲಿನ ಕಕ್ಕಬೆ, ಯವಕಪಾಡಿ. ನಾಲಡಿ, ಬೇತು,ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಚೆಯ್ಯಂಡಾಣೆ, ಕರಡ, ಅರಪ್ಪಟ್ಟು ಸೇರಿದಂತೆ ವಿವಿಧ ಭಾಗದ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.

ಪಾರಾಣೆ, ಕೈಕಾಡು ಹೊದ್ದೂರು, ಮೂರ್ನಾಡು ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು ವಿಭಾಗದ ಜನರಲ್ಲಿ ಸಂತಸ ಮೂಡಿಸಿದೆ. ಹೊದ್ದೂರು ಗ್ರಾಮದ ಭಗವತಿ ಕಾಲೋನಿಯ ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವ ನಡೆಯುವ ಸಂದರ್ಭ ಗ್ರಾಮಕ್ಕೆ ವರ್ಷದ ಮೊದಲ ಮಳೆಯಾಗಿದ್ದು ಭಕ್ತಾದಿಗಳು ಮಳೆಯಲ್ಲೇ ಕುಣಿದು ಸಂಭ್ರಮಿಸಿದ್ದು, ವಿಶೇಷವೆನಿಸಿತ್ತು.(ಮೊದಲ ಪುಟದಿಂದ) ಮಳೆಯಾಗಿದೆ. ಶುಕ್ರವಾರ ಅಪರಾಹ್ನವೂ ಕೆಲವೆಡೆ ಮಳೆ ಸುರಿದಿದೆ. ನೆಲಜಿ ವಿಭಾಗದಲ್ಲಿ ಒಂದಷ್ಟು ಹೆಚ್ಚು ಮಳೆಯಾಗಿರುವ ಕುರಿತು ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ಅಪರಾಹ್ನ ಮೋಡದ ವಾತಾವರಣ ಆವರಿಸಿತ್ತಾದರೂ ಒಂದೆರಡು ಹನಿಗಳ ಸಿಂಚನ ವಾಗಿ ಮತ್ತೆ ಬಿಸಿಲಿನ ವಾತಾವರಣ ಎದುರಾಗಿತ್ತು. ಯವಕಪಾಡಿ, ಮೂರ್ನಾಡು, ವಾಟೆಕಾಡು, ಬಿಟ್ಟಂಗಾಲ, ಹಾಕತ್ತೂರು, ಬಿಳಿಗೇರಿ, ಪಾರಾಣೆ, ಕಾಕೋಟುಪರಂಬು, ನಾಂಗಾಲ ಕಡೆಯಲ್ಲಿ ೧೫ ಸೆಂಟ್ ನಿಂದ ೩೦ ಸೆಂಟುಗಳಷ್ಟು ಮಳೆಯಾಗಿರುವದಾಗಿ ತಿಳಿದು ಬಂದಿದೆ.

ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಹಲವೆಡೆಗಳಲ್ಲಿ ವರುಣನ ದರುಶನವಾಗುತ್ತಿರುವದರಿಂದ ಎಲ್ಲೆಡೆಯಲ್ಲೂ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.