ಸೋಮವಾರಪೇಟೆ, ಏ.೧೨ : ಸೋಮವಾರಪೇಟೆ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಯಲ್ಲಿ ತಾ. ೧೩ರಂದು (ಇಂದು) ಮತ್ತು ತಾ. ೧೪ರಂದು (ನಾಳೆ) ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿಕುಮಾರ್ ತಿಳಿಸಿದ್ದಾರೆ. ಸೋಮವಾರಪೇಟೆಯ ೩೩/೧೧ ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿರುವ ಪರಿವರ್ತಕದಲ್ಲಿ ತಾಂತ್ರಿಕ ದೋಷ ಉಂಟಾಗಿರುವುದರಿAದ ಹಾಗೂ ಬೇರೆ ಪರಿವರ್ತಕಕ್ಕೆ ಹೆಚ್ಚುವರಿ ಭಾರ ಉಂಟಾಗುವ ಸಾಧ್ಯತೆ ಇರುವುದರಿಂದ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡಬೇಕಾಗಿರುತ್ತದೆ.
ಆದ್ದರಿಂದ ತಾ. ೧೩ ಮತ್ತು ೧೪ ರಂದು ಪರಿವರ್ತಕದ ತಾಂತ್ರಿಕ ದೋಷ ಸರಿಪಡಿಸುವ ಸಲುವಾಗಿ ಅನಿಯಮಿತವಾಗಿ ಸೋಮವಾರಪೇಟೆ ಉಪ ವಿಭಾಗ ವ್ಯಾಪ್ತಿಯ ಸೋಮವಾರಪೇಟೆ ಶಾಖೆ ಮತ್ತು ಶಾಂತಳ್ಳಿ ಶಾಖೆ ವ್ಯಾಪ್ತಿಗೆ ಒಳಪಡುವ ಸೋಮವಾರಪೇಟೆ ಪಟ್ಟಣ, ಐಗೂರು, ಯಡವಾರೆ, ಅಬ್ಬೂರುಕಟ್ಟೆ, ಯಲಕನೂರು, ಹೊಸಳ್ಳಿ, ಕರ್ಕಳ್ಳಿ, ನಗರಳ್ಳಿ, ಶಾಂತಳ್ಳಿ, ತಾಕೇರಿ, ದೊಡ್ಡಮಳ್ತೆ, ಕಾಗಡಿಕಟ್ಟೆ, ಮಸಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ಗ್ರಾಹಕರು ಸಹಕರಿಸಬೇಕೆಂದು ಎಇಇ ಮನವಿ ಮಾಡಿದ್ದಾರೆ.