ಪವಿತ್ರ ಈದ್ ಉಲ್ ಫಿತ್È

ಇಂದು ಪವಿತ್ರ ಈದ್ ಉಲ್ ಫಿತ್È. ಇದು ಹಲವು ದಿನಗಳ ತ್ಯಾಗ, ದಾನ, ಉಪವಾಸ, ಧ್ಯಾನಗಳ ಅಂತ್ಯದಲ್ಲಿ ಬರುವ ಸಂತಸದ ಹಬ್ಬ. ಹಬ್ಬ ಇಲ್ಲಿಗೆ ಕೊನೆಯಾಗಬಾರದು. ಇಷ್ಟು ದಿನ ನಮ್ಮಲ್ಲಿದ್ದ ಪ್ರೀತಿ, ಒಗ್ಗಟ್ಟು, ಧ್ಯೇಯ, ಭಕ್ತಿ ಮುಂದುವರೆಯಬೇಕು. ಆತ್ಮಾವಲೋಕನ ಮಾಡಿಕೊಳ್ಳಲು - ಕೃತಜ್ಞತೆ ಸಲ್ಲಿಸಲು ಸಿಗುವ ಸುಂದರ ಸಂದರ್ಭ ಇದು.

ದೇವರ ವಾಕ್ಯ ಹೀಗೆ ಹೇಳುತ್ತದೆ. ‘‘ಭಕ್ತನೆ, ಉಪವಾಸವು ಹಿಂದಿನಿAದಲೂ ಹೇಳಲಾಗಿದೆ. ಇದರಿಂದ ನೀನು ಸ್ವಯಂ ನಿಯಂತ್ರಣ ಮಾಡಿಕೊಳ್ಳಲು ಕಲಿಯಬಹುದು.’’ ಈ ಉಪವಾಸ ಕ್ರಮವು ನಮಗಿಂತಲೂ ಮುಂಚೆಯೇ ಎಲ್ಲಾ ಧರ್ಮಗಳಿಗೂ ಬೋಧಿಸಲಾಗಿದೆ ಎಂದು ಗ್ರಹಿಸಬಹುದು.

ಶ್ರದ್ಧೆಯಿಂದ ರಂಜಾನ್ ಆಚರಿಸಿದರೆ, ನಮ್ಮ ಎದುರೇ ಆಹಾರ ಪದಾರ್ಥಗಳು ಇದ್ದರೂ, ದೇವರ ವಾಕ್ಯ ಪಾಲಿಸಲು ನಮ್ಮ ಆಕಾಂಕ್ಷೆಗಳನ್ನು ದೂರ ಇರಿಸಲು ಅಭ್ಯಸಿಸುತ್ತೇವೆ. ತಾನೇ ಆಹಾರ ಬಯಸದಿದ್ದಾಗ, ಸಹಜವಾಗಿ ನಾವು ಇತರರ ಆಹಾರ, ಆಸ್ತಿಯನ್ನು ಬಯಸುವುದಿಲ್ಲ. ಆ ಬಗ್ಗೆ ಕೆಟ್ಟ ದೃಷ್ಟಿಹರಿಸುವುದಿಲ್ಲ.

ದೇವರು ಮತ್ತೆ ಹೇಳುತ್ತಾರೆ, ‘‘ಶಿಶುವೆ, ಕೇವಲ ಉಪವಾಸ ಮಾಡುವುದು ಮಾತ್ರ ರಂಜಾನಿನ ಗುರಿ ಅಲ್ಲ. ನೀನು ಉತ್ತಮನಾಗಿ ಬದಲಾಗಬೇಕು. ಮಾತಿನಲ್ಲಿ, ಚಿಂತನೆಯಲ್ಲಿ ಬದಲಾವಣೆ ಬರಬೇಕು. ಈ ಅಭ್ಯಾಸ ಜೀವನ ಪರ್ಯಂತ ಮುಂದುವರೆಯಬೇಕು. ಸಮಯ ಸಿಕ್ಕಾಗಲೆಲ್ಲ ಕುರಾನ್ ಪಠಿಸು. ಪ್ರತಿ ಮುಸಲ್ಮಾನರು ಕುರಾನನ್ನು ಓದಿ, ಅರ್ಥಮಾಡಿಕೊಳ್ಳುವುದು ಕರ್ತವ್ಯವಾಗಿದೆ. ಓದಿ, ಅರ್ಥೈಸಿಕೊಳ್ಳಿ, ಆಚರಣೆಗೆ ತನ್ನಿ. ಪವಿತ್ರ ಗ್ರಂಥದ ಓದುವಿಕೆ ಇಸ್ಲಾಮಿಗೆ ಮಾತ್ರ ಅನ್ವಯವಾಗದು. ವ್ಯಾಸರಚಿತ ವೇದವಾಗಲಿ, ಮೋಸಸ್‌ಗೆ ಕೇಳಿದ ದೈವವಾಣಿ ಜೋರಾಗಲಿ, ದಾವುದ್‌ಗೆ ಹೇಳಿದ ಜಬೂರ್ ಆಗಲಿ, ಈಶ ಅಥವಾ ಕ್ರೆöÊಸ್ತ ಆಲಿಸಿದ ಇನ್ಜಾಲ್/ ಬೈಬಲ್ ಇರಲಿ, ಪ್ರಾಫೆಟ್ ಮೊಹಮ್ಮದರೆದುರು ಅನಾವರಣಗೊಂಡ ಕುರಾನ್ ಆಗಲಿ ಕೇವಲ ನಾಲಿಗೆ - ತುಟಿ ಅಲುಗಿಸಿ - ಸ್ವರ ಹೊರಡಿಸಿ ಮೇಳುವುದಲ್ಲ. ಅದು ಆಂತರ್ಯ ಹೊಕ್ಕು ಬೆಳಕು ಚೆಲ್ಲಬೇಕು. ಈ ರೀತಿಯ ಸಾಧನೆಯಿಂದ ಹೃದಯಕ್ಕೆ ದಿವ್ಯ ಸಂದೇಶಗಳು ತಲಪುತ್ತವೆ. ಉತ್ತುಂಗ ಭಾವನೆ, ಅನುಭವಗಳ ಚಿಲುಮೆ ಪುಟಿಯುತ್ತದೆ.

ಈ ೨೧ನೇ ಶತಮಾನದಲ್ಲಿ ಜನರು ಧರ್ಮ, ಆಧ್ಯಾತ್ಮ, ಶಾಂತಿ ಸದ್ಭಾವನೆ ಕುರಿತು ಮಾತನಾಡುವುದು ‘‘ಹಳೆಯ ಫ್ಯಾಶನ್’’ ಎಂದುಕೊAಡಾರು. ಇದರಿಂದ ವಿಶ್ವದಲ್ಲಿ ವಿಭಜನ ಇತ್ಯಾದಿಗಳು ಹೆಚ್ಚುತ್ತವೆ. ನಂಬಬೇಕಾದುದನ್ನು ನಂಬಿ - ಒಪ್ಪಿಕೊಳ್ಳಿ. ಶ್ರದ್ಧಾಪೂರ್ಣವಾಗಿ ಒಪ್ಪಿಕೊಳ್ಳಿ - ಅದರಂತೆ ಹೆಜ್ಜೆಯಿರಿಸಿ.

ವಿದೇಶಗಳ ವಿಜ್ಞಾನದ ಆವಿಷ್ಕಾರಗಳು, ಬೆಳವಣಿಗೆ, ಜ್ಞಾನ ಇವುಗಳನ್ನು ಗೌರವಿಸಬೇಕು. ಆದರೆ, ಧರ್ಮ, ಆಧ್ಯಾತ್ಮ, ಸಮಾಜದ ಬಗೆಗಿನ ಅವರ ದೃಷ್ಟಿಕೋನ ಒಪ್ಪುವಂತದ್ದಲ್ಲ. ಪೂರ್ವ ಪ್ರಾಂತ್ಯದ ದಿವ್ಯ ಪರಂಪರೆ ಮರೆಯಾಗಲು ಬಿಡಬಾರದು. ಇದು ಮರೆಯಾಗುವುದು ಮಾನವ ಕುಲಕ್ಕೇ ಆಗುವ ಬಲುದೊಡ್ಡ ನಷ್ಟ. ಕುರಾನಿನ ಕೆಲವು ‘‘ಆಯತ್’’ಗಳನ್ನಾದರೂ ನಿತ್ಯ ಪಠಿಸಿ. ಅದÀರ ಭವ್ಯ, ದಿವ್ಯ ಸಂದೇಶಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದರ ಸುಂದರ ತಿರುಳನ್ನು ಬಾಳಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ ಮತ್ತು ಇಂದಿನ ಅವಶ್ಯಕತೆ ಕೂಡ.

ಕುರಾನ್ ಹೇಳುತ್ತದೆ ಅಲ್ಲಾಹು ಸೇವೆಯಲ್ಲಿ ತೊಡಗಿ ಒಳ್ಳೆಯದನ್ನೇ ಮಾಡಿ. ಪೋಷಕರು, ನೆಂಟರು, ಸಂಬAಧಿಗಳು, ಜೊತೆಯವರು, ನೆರೆಕರೆಯವರು, ಅನಾಥರು, ದಾರಿಹೋಕರು ಎಲ್ಲರಿಗೂ ಒಳ್ಳೆಯದನ್ನೇ ಬಯಸಿ. ಅಲ್ಲಾಹು ವೈಭವದಲ್ಲಿ ಮುಳುಗುವವರನ್ನು, ಅಹಂಕಾರಿಗಳನ್ನು ಮೆಚ್ಚುವುದಿಲ್ಲ.

‘‘ಅಲ್ಲಾ ಹಫೀಜ್’’

- ಅಬ್ದುಲ್ ರೆಹಮಾನ್, ತೆರಿಗೆ ಮಾರ್ಗದರ್ಶಕರು

ಅವಿಸ್ಮರಣೀಯ ಅನುಭವ

ರಂಜಾನ್ ಎಂಬುದು ಇಸ್ಲಾಮಿಕ್ ದಿನಚರಿಯ ೯ನೇ ತಿಂಗಳ ಹೆಸರು. ಈ ತಿಂಗಳಿನಲ್ಲಿ ೩೦ ದಿನಗಳ ಕಾಲ ಹಗಲು ವೇಳೆಯಲ್ಲಿ ಅನ್ನ ಪಾನೀಯಗಳನ್ನು ತೊರೆದು ವ್ರತ ಕೈಗೊಳ್ಳುವ ಮೂಲಕ ಅಲ್ಲಾಹನ ಅನುಗ್ರಹವನ್ನು ಪಡೆಯಿರಿ ಎಂದು ಧರ್ಮವು ತಿಳಿಸಿದ್ದು ,ಯಾವುದೇ ಸಣ್ಣ ಸತ್ಕರ್ಮಕ್ಕೂ, ಅಪಾರ ಪ್ರತಿಫಲ ದೊರಕಲಿದೆ ಎಂದು ಹೇಳಿದೆ. ಮಾತ್ರವಲ್ಲ ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ರಂಜಾನ್ ತಿಂಗಳಿನಲ್ಲಿ ಅವತೀರ್ಣಗೊಂಡಿರುವ ಕಾರಣ ಇದು ಉಳಿದ ೧೧ ತಿಂಗಳಿಗಿAತ ಅತ್ಯಂತ ಮಹತ್ವಪೂರ್ಣ ಹಾಗೂ ಪಾವನ ಮಾಸ ಎಂದೂ ಕರೆಯಲ್ಪಟ್ಟಿದೆ.

ಇಸ್ಲಾಂನ ನಂಬಿಕೆಯAತೆ ರಂಜಾನ್‌ನಲ್ಲಿ ಒಳಿತಿನ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಇಹಪರ ವಿಜಯವಿದೆ .ಆದುದರಿಂದಲೇ ಜಗತ್ತಿನಾದ್ಯಂತ ಮುಸ್ಲಿಮರು ಈ ತಿಂಗಳಿಗೆ ಅತ್ಯಂತ ಗೌರವ ನೀಡುವ ಮೂಲಕ ಪುರಾತನ ಕಾಲದಿಂದಲೂ ವ್ರತ ಆಚರಿಸುತ್ತಾ ಬರುತ್ತಿದ್ದಾರೆ. ಮಾನವರು ಅರಿತೋ ಅರಿಯದೆಯೋ ಮಾಡಿದ ಪಾಪಗಳಿಗೆ ರಂಜಾನ್ ತಿಂಗಳಿನಲ್ಲಿ ಕ್ಷಮೆ ಯಾಚಿಸಿದಲ್ಲಿ ಜಗದೊಡೆಯನ ಅನುಗ್ರಹ ದೊರಕಲಿರುವುದರಿಂದಲೂ, ದಾನ ಧರ್ಮಗಳಿಗೆ ಅಪಾರ ಪುಣ್ಯಲಭ್ಯವಾಗುವುದರಿಂದಲೂ ಈ ತಿಂಗಳನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗುತ್ತಾರೆ. ವರ್ಷ ಕಳೆದಂತೆ ಬೇರೆಬೇರೆ ಋತುಗಳಲ್ಲಿ ವ್ರತ ಕಾಲ ಆಗಮಿಸುತ್ತಿದೆ.

ಈ ಹಿಂದೆ ಮೈ ಕೊರೆಯುವ ಚಳಿ ಹಾಗೂ ತಂಪೆರೆಯುವ ಮಳೆಯ ಅನುಭವವನ್ನೂ ನೀಡುತ್ತಾ ಬಂದಿದ್ದ ರಂಜಾನ್, ಈ ಬಾರಿ ಸುಡು ಬಿಸಿಲಿನ ಬೇಸಿಗೆಯಲ್ಲಿ ಬಂದಿದ್ದು ,ಮುಂಜಾನೆಯಿAದ ಮುಸ್ಸಂಜೆಯ ತನಕ ೧೪ ಗಂಟೆಗಳ ಕಾಲ ವ್ರತ ಕೈಗೊಂಡ ಸತ್ಯ ವಿಶ್ವಾಸಿಗಳ ಪಾಲಿಗೆ ಸತ್ವ ಪರೀಕ್ಷೆಯಂತಿತ್ತು. ವ್ರತ ಕೈಗೊಂಡು ಅನೇಕ ಮಂದಿ ಹೊಟ್ಟೆಪಾಡಿಗಾಗಿ ದುಡಿಯುವವರಿದ್ದಾರೆ.

"ನಾವು ಮೂರು ಹೊತ್ತು ತಿಂದು ಕುಡಿದು ಕೂಡ ಈ ಬಿಸಿಲನ್ನು ಸಹಿಸಲಿಕ್ಕಾಗುವುದಿಲ್ಲ, ಹೀಗಿರುವಾಗ ನೀವು ಹೊಟ್ಟೆ ಹಸಿದು, ಬಾಯಾರಿ ಬಳಲಿ ಅದು ಹೇಗೆ ಈ ಬಿಸಿಲಿನ ತಾಪವನ್ನು ಸಹಿಸಿಕೊಳ್ಳುತ್ತೀರಿ"

ಎಂದು ಕೇಳಿದ ಅನೇಕ ಮಿತ್ರರಿದ್ದಾರೆ. ಇದು ನಿಜಕ್ಕೂ ದೇವರ ಸಹಾಯ ವೆಂದೇ ಹೇಳಬಹುದಷ್ಟೆ.

ಎಲ್ಲ ಆಯಾಸಗಳ ನಡುವೆ ಸಂಜೆ ೬:೪೦ರ ವೇಳೆಗೆ ವ್ರತದಿಂದ ನಿರ್ಗಮಿಸುವ ಸಂದರ್ಭ ಆಗುವ ಆನಂದವೇ ಬೇರೆ. ಉದರವನ್ನು ತಂಪಾಗಿಸುವ ವಿವಿಧ ಬಗೆಯ ಪಾನೀಯಗಳು ಮನೆ ಮಂದಿಯ ಅಭಿರುಚಿಯ ಆಹಾರಗಳು. ನೆರೆಯ ಹಿಂದೂ ಬಾಂಧವರು ರಂಜಾನ್ ವ್ರತವನ್ನು ಗೌರವದಿಂದ ಕಂಡು ತಂದು ಕೊಡುವ ಹಣ್ಣು - ಹಂಪಲುಗಳು. ಪರಸ್ಪರ ಹಂಚಿ ತಿನ್ನುವುದರಲ್ಲಿ ದೊರಕುವ ಸಂತೃಪ್ತಿ, ಸಾಮರಸ್ಯ, ಸಹೋದರತ್ವ ನಿಜಕ್ಕೂ ಅವಿಸ್ಮರಣೀಯವಾದುದು.

ಎಂ.ಇ. ಮಹಮದ್, ಮೊ. ೯೯೬೪೦೭೬೬೯೮

ಆತ್ಮೀಯತೆ, ಸ್ನೇಹಿತರ ಬಳಗ ಹೆಚ್ಚಿಸಿದೆ

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಭತ್ತನೇ ತಿಂಗಳಾದ ರಮಝಾನ್ ತಿಂಗಳು ಮುಸ್ಲಿಮರ ಪಾಲಿಗೆ ಬಹಳ ಪವಿತ್ರವಾದ ತಿಂಗಳಾಗಿದೆ. ಆ ತಿಂಗಳಲ್ಲಿ ಮಾಡುವ ಪ್ರತಿಯೊಂದು ಸತ್ಕರ್ಮಗಳಿಗೂ ಹಲವು ಪಟ್ಟು ಪ್ರತಿಫಲ ನೀಡಲಾಗುತ್ತದೆ. ಅದು ಸಂಪೂರ್ಣವಾಗಿ ಆತ್ಮ ಸಂಸ್ಕರಣೆಗಾಗಿ ಮೀಸಲಿಟ್ಟ ತಿಂಗಳಾಗಿದೆ. ಅದಕ್ಕಾಗಿ ಮುಂಜಾವಿನಿAದ ಹಿಡಿದು ಮುಸ್ಸಂಜೆಯ ತನಕ ಅನ್ನಪಾನೀಯ, ಮದ-ಮತ್ಸರ- ಕಾಮ - ಕ್ರೋಧಗಳಿಂದ ದೂರವಿರಬೇಕು. ಆ ಮುಖಾಂತರ ಮನುಷ್ಯನ ಚಿತ್ರಕ್ಕೆ ಪ್ರತಿಕೂಲವಾದ ನಿಲುವು ತಾಳುವ ತರಬೇತಿಯನ್ನು ಒದಗಿಸಲಾಗುತ್ತದೆ. ರಮಝಾನಿನ ಮೊದಲ ತಿಂಗಳಾದ ಶಾಬಾನ್ ತಿಂಗಳ ಅಂತ್ಯದಲ್ಲಿ ರಮಝಾನಿನ ಆಗಮನಕ್ಕಾಗಿ ಕೆಲವು ತಯಾರಿಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ತಮ್ಮಲ್ಲಿ ಇರುವ ಸಂಪತ್ತಿನ ಶೇ ೨.೫% ಕಡ್ಡಾಯ ದಾನದ ಬಗ್ಗೆ ಲೆಕ್ಕಾಚಾರ ಮಾಡಿ ಇಟ್ಟುಕೊಳ್ಳಲಾಗುತ್ತದೆ. ರಮಝಾನ್ ತಿಂಗಳು ಪ್ರಾರಂಭವಾದ ಕೂಡಲೇ ಪ್ರತಿ ದಿನ ಎರಡು ಹೊತ್ತಿನ ಆಹಾರದೊಂದಿಗೆ ಉಪವಾಸ ವ್ರತ ಆಚರಿಸಲಾಗುತ್ತದೆ.

ಬೆಳಿಗ್ಗೆ ಐದು ಗಂಟೆಯಿAದ ಸಂಜೆ ಸೂರ್ಯ ಮುಳುಗುವರೆಗೆ ಯಾವುದೇ ಅನ್ನಪಾನೀಯ ಹಾಗೂ ಸುಳ್ಳು, ವಂಚನೆ, ಹಿಂಸೆ, ಮೈಥುನ ಎಲ್ಲವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಇದರಿಂದ ನಮಗೆ ಒಬ್ಬ ವ್ಯಕ್ತಿಗೆ ಯಾವ ರೀತಿ ಹಸಿವಿನ ಅನುಭವವಾಗುತ್ತದೆ ಎನ್ನುವುದು ಅರಿಯುತ್ತದೆ.

ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ನ್ಯೂನತೆಗಳಿರುತ್ತವೆ. ಅದರಲ್ಲಿ ನಾನೂ ಒಬ್ಬ. ಉಪವಾಸ ವ್ರತವು ನನ್ನಲ್ಲಿ ಸಹನೆ, ಆತ್ಮ ನಿಯಂತ್ರಣ, ಒಳಿತಿನ ಕಾರ್ಯದಲ್ಲಿ ಎಲ್ಲರೊಂದಿಗೆ ಸಹಕರಿಸುವಂತಹ ವ್ಯಕ್ತಿತ್ವವನ್ನು ನನಗೆ ನೀಡಿದೆ. ಎಲ್ಲರನ್ನು ತನ್ನ ಸಹೋದರಂತೆ ಕಾಣಲು ಕಲಿಸಿದೆ.

ರಮಝಾನಿನ ರಾತ್ರಿಯಲ್ಲಿ ಸಕಲ ಲೋಕಗಳ ಸೃಷ್ಟಿಕರ್ತನ ಆರಾಧನೆ ನೂರ ತೊಂಭತ್ತು ಕೋಟಿ ಮುಸಲ್ಮಾನರು ಮಾಡುತ್ತಾರೆ. ಹಗಲು ಹೊತ್ತು ಕಷ್ಟದಲ್ಲಿರುವವರ ಮನೆಗೆ ಭೇಟಿ ಕೊಡುವುದು. ಸಂಬAಧಿಕರನ್ನು, ಕುಟುಂಬಸ್ಥರ ಮನೆಗೆ ಭೇಟಿ ಮಾಡುವುದು ಅಲ್ಲದೆ ತಮ್ಮ ಕೈಲಾದ ಸಹಾಯ ಮಾಡುವುದು ಪ್ರತಿಯೊಬ್ಬ ಉಪವಾಸಿಗನ ಕರ್ತವ್ಯವಾಗಿದೆ. ಅದನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದ್ದರಿಂದ ಉಪವಾಸವ್ರತ ನನಗೆ ಸಂಬAಧಿಕರೊAದಿಗೆ ಆತ್ಮೀಯತೆ ಹಾಗೂ ಸ್ನೇಹಿತರ ಬಳಗವನ್ನು ಹೆಚ್ಚಿಸಿದೆ.

- ಎಂ.ಯು. ಹನೀಫ್, ತೆರಿಗೆ ಮಾರ್ಗದರ್ಶಕರು

ಉಪವಾಸ ಆಚರಣೆಯ ರಂಜಾನ್ ತಿಂಗಳು ಮುಸ್ಲಿಮರಿಗೆ ಅತ್ಯಂತ ಪವಿತ್ರವಾದದು. ಹಿಜರಿ ವರ್ಷದ ಒಂಭತ್ತನೆಯ ತಿಂಗಳಾದ ರಂಜಾನ್ ಮಾಸದಲ್ಲಿಯೇ ಮುಸ್ಲಿಮರ ಧಾರ್ಮಿಕ ಗ್ರಂಥ ಖುರ್ ಆನ್ ಜಗತ್ತಿಗೆ ಪ್ರಕಟವಾದದ್ದು ಎಂಬುದು ಗಮನಾರ್ಹ.

ರಂಜಾನ್ ತಿಂಗಳು ಹಸಿವು ಬಾಯಾರಿಕೆಗಳ ಮಹತ್ವನ್ನು ಎತ್ತಿ ತೋರಿಸುವ ತಿಂಗಳಾಗಿದೆ. ಮೂವತ್ತು ದಿನಗಳ ಕಾಲ ಸುಮಾರು ೧೪ ಗಂಟೆಗಳ ಉಪವಾಸವನ್ನು ಆಚರಿಸುವದರ ಉದ್ದೇಶ ಸಿರಿವಂತರಿಗೆ ಬಡವಡ ಕಷ್ಟಗಳನ್ನು ಅರ್ಥೈಸಿಕೊಡುವುದು. ಶ್ರೀಮಂತ ವರ್ಗಕ್ಕೆ ಹಸಿವಿನ ಅನುಭವ ಇರುವುದಿಲ್ಲ; ಬಡವಡ ಹಸಿವಿನ ಸಂಕಷ್ಟದ ಅರಿವು ಉಳ್ಳವರಿಗೂ ಆಗಬೇಕು, ಇಲ್ಲದವರ ಕುರಿತು ಅವರು ಸಹಾನುಭೂತಿ ತೋರಬೇಕು, ಅವರಿಗೆ ನೆರವನ್ನು ನೀಡಬೇಕು ಎಂಬುದು ಈ ಆಚರಣೆಯ ಮುಖ್ಯ ಆಶಯ.

ಎಷ್ಟೇ ಹಸಿವಾದರೂ, ಬಾಯಾರಿಕೆಯಾದರೂ ಅದನ್ನು ತಡೆಹಿಡಿಯಲೇಬೇಕಾದ ಕಾರಣ ಈ ರಂಜಾನ್ ತಿಂಗಳು ಮನುಷ್ಯನಿಗೆ ಸಹನೆ ಮತ್ತು ಶಿಸ್ತಿನ ಪಾಠ ಕಲಿಸಿಕೊಡುತ್ತದೆ. ಆಹಾರ, ನಿದ್ರೆ, ದಿನಚರಿ, ಪ್ರಾರ್ಥನೆ ಎಲ್ಲವೂ ಶಿಸ್ತು ಬದ್ಧವಾಗಿರುತ್ತದೆ. ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಗಳು, ಭಾವನೆಗಳು ಮೂಡದಂತೆ ನಿಗ್ರಹಗೊಳ್ಳುತ್ತವೆ. ಮನುಷ್ಯರೆಲ್ಲರೂ ಒಂದೇ, ಎಲ್ಲರ ಅಂತಃಕರಣದಲ್ಲೂ ಭಾವನೆಗಳು ಮಿಡಿಯುತ್ತಿರುತ್ತವೆ ಎಂಬ ಸತ್ಯವನ್ನು ಈ ತಿಂಗಳು ಮನಗಾಣಿಸಿಕೊಡುತ್ತದೆ.ಬಾಣಂತಿಯರು, ಮುಟ್ಟಾದ ಮಹಿಳೆಯರು, ಮಕ್ಕಳು, ರೋಗಿಗಳಿಗೆ ಹಾಗೂ ದೂರ ಪ್ರಯಾಣ ಮಾಡುವವರಿಗೆ ಉಪವಾಸದಿಂದ ವಿನಾಯಿತಿ ಇದೆ.

ಜಕಾತ್ ಕೊಡಬೇಕಾದುದು ಇದೇ ರಂಜಾನ್ ತಿಂಗಳಲ್ಲಿ. ಜಕಾತ್ ಎಂಬದೆ ಭಿಕ್ಷೆ ಅಲ್ಲ. ಬಡವಡ ಮನೆಗೇ ಹೋಗಿ ಜಕಾತ್ ನೀಡಬೇಕು. ತನ್ನ ಸಂಪಾದನೆಯ ಶೇ. ಎರಡೂವರೆ ಭಾಗದಷ್ಟನ್ನು ಜಕಾನ್ ನೀಡಬೇಕಾದುದು ಕಡ್ಡಾಯ.

ತಿಂಗಳ ಕೊನೆಯಲ್ಲಿ ಬರುವ ರಂಜಾನ್ ಹಬ್ಬ ಕಷ್ಟಗಳೆಲ್ಲವೂ ಕಳೆದು ಸಂತೋಷವನ್ನು ಅನುಭವಿಸುವ ಹಾಗೂ ಹಂಚಿಕೊಳ್ಳುವ ದಿನ. ಅಂದು ನೆರೆಹೊರೆಯವರು ಅಥವಾ ಗೊತ್ತಿರುವವರು ಯಾರೂ ಕೂಡ ಹಸಿದುಕೊಂಡು ಇರದಂತೆ ನೋಡಿಕೊಳ್ಳಬೇಕಾದುದು ಕೂಡ ಮುಖ್ಯವೆಂದು ಇಸ್ಲಾಮ್ ಪ್ರತಿಪಾದಿಸುತ್ತದೆ.

ಧಾರ್ಮಿಕ ವಿಧಿಗಳ ಉದ್ದೇಶಗಳು ಆಧ್ಯಾತ್ಮಿಕವಾಗಿದ್ದರೂ ಅದರ ಕೌಟುಂಬಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಾದರೆ ಇಸ್ಲಾಮಿನ ಉಪವಾಸ ವ್ರತಾಚರಣೆ ಎಲ್ಲಾ ರೀತಿಯಲ್ಲೂ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ಕೊಡುತ್ತದೆ ಎಂಬುದು ಗಮನಾರ್ಹ. - ಬಿ.ಎ. ಷಂಶುದ್ದೀನ್, ಮಂಗಳೂರು

ಸಹೋದರತೆ - ಮಾನವೀಯತೆಯ ಸಾಕ್ಷಾತ್ಕಾರ

ರಮಝಾನ್, ಹಿಜ್ರಾ ಕ್ಯಾಲೆಂಡರಿನ ಪೈಕಿ ಅತ್ಯಂತ ಮಹತ್ವದ ತಿಂಗಳಾಗಿದೆ. ಜಾಗತಿಕ ಮುಸ್ಲಿಮ್ ಸಮುದಾಯವು ದಿನವಿಡೀ ಉಪವಾಸ ಆಚರಿಸಿಕೊಂಡು ಈ ತಿಂಗಳನ್ನು ಶ್ರದ್ಧಾಪೂರ್ವಕವಾಗಿ ಆಚರಿಸುತ್ತದೆ. ಈ ತಿಂಗಳಲ್ಲಿ ಭಯಭಕ್ತಿಯೊಂದಿಗೆ ಆರಾಧನಾ ಕರ್ಮಗಳಲ್ಲಿ ತೊಡಗಿಕೊಳ್ಳುವ ಮುಸ್ಲಿಮರು ದಾನ ಧರ್ಮಗಳನ್ನೂ ಯಥೇಚ್ಛವಾಗಿ ನೀಡುತ್ತಾರೆ. ಹಸಿವು, ದಾಹಕ್ಕಿಂತಲೂ ಮಿಗಿಲಾಗಿ, ಓರ್ವ ಮನುಷ್ಯನಿಗೆ ತನ್ನ ಸಹಜೀವಿಗಳೊಂದಿಗಿರುವ ಬಾಧ್ಯತೆ ಮತ್ತು ಅದನ್ನು ಆತ ನಿರ್ವಹಿಸಬೇಕಾದ ಬಗೆಗಿನ ತರಬೇತಿಯನ್ನೂ ರಮಝಾನ್ ನೀಡುತ್ತದೆ.

ಹಸಿವು, ಬಡತನ ತಾಂಡವವಾಡುತ್ತಿರುವ ಈ ಜಗತ್ತಿನಲ್ಲಿ ತನ್ನ

ದೇಹ ಉಲ್ಲಾಸಭರಿತವಾಗುತ್ತದೆ

ಸದಾ ತಂಪು ವಾತಾವರಣವಿರುತ್ತಿದ್ದ ಕೊಡಗಿನಲ್ಲಿ ಈ ಬಾರಿಯ ರಮಝಾನ್ ತಿಂಗಳ ಉಪವಾಸ ವ್ರತಾಚರಣೆಯು ಬಿಸಿಲ ಬೇಗೆಯಿಂದಾಗಿ ತುಸು ತ್ರಾಸದಾಯಕವಾಗಿ ಕಂಡಿದೆ. ಒಂದು ತಿಂಗಳು ಪೂರ್ತಿ ನಸುಕಿನ ಜಾವದಿಂದ ಆರಂಭಗೊAಡು ಮುಸ್ಸಂಜೆಯವರೆಗೂ ಯಾವುದೇ ಆಹಾರ ಸೇರಿದಂತೆ ಅನ್ನಪಾನೀಯಗಳಿಗೆ ಸಂಪೂರ್ಣ ವಿರಾಮ ಹಾಕಬೇಕು.ಅದರೊಂದಿಗೆ ಈ ಬಾರಿಯ ಉಪವಾಸ ವ್ರತವನ್ನು ಮತ್ತಷ್ಟು ಕಠಿಣಗೊಳಿಸಿದ್ದು ಮಳೆ ಮರೀಚಿಕೆಯಾಗಿ ಒಂದೇ ಸಮನೆ ಏರುತ್ತಿರುವ ಬಿರು ಬಿಸಿಲಿನ ಝಳ. ಅಷ್ಟೇ ಅಲ್ಲ ರಮಝಾನ್ ತಿಂಗಳಿನಲ್ಲಿ ಅಧಿಕವಾಗಿ ಸೇವಿಸಲ್ಪಡುವ ಹಣ್ಣು-ಹಂಪಲುಗಳ ಬೆಲೆ ಏರಿಕೆಯ ಬಿಸಿಯೂ ಉಪವಾಸಿಗರನ್ನು ತಟ್ಟದೆ ಬಿಟ್ಟಿಲ್ಲ.

ರಮಝಾನ್ ಮಾಸವು ದಾನಧರ್ಮಗಳಿಗೆ ವಿಶೇಷ ಮಹತ್ವವನ್ನು ನೀಡಿರುವ ತಿಂಗಳು. ದಾನಧರ್ಮವು ಸರ್ವಕಾಲಕ್ಕೂ ನಿರ್ಬಂಧವಾಗಿರುವ ಆರಾಧನಾ ಕರ್ಮವಾಗಿದ್ದರೂ ರಮಝಾನ್ ತಿಂಗಳಲ್ಲಿ ಅದರ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚು."ದಾನಧರ್ಮ ಎನ್ನುವುದು ಶ್ರೀಮಂತರ ಔದಾರ್ಯವಲ್ಲ, ಅದು ನಿರ್ಗತಿಕರ ಅವಕಾಶ"ಎಂದು ಇಸ್ಲಾಂ ಧರ್ಮವು ಪ್ರತಿಪಾದಿಸಿದೆ.ಹಾಗಾಗಿ ಹಸಿವು, ಬಾಯಾರಿಕೆ ಎಂದರೆ ಅದೆಷ್ಟು ಕಠಿಣ ಎನ್ನುವುದನ್ನು ಸ್ವತಃ ಅನುಭವಿಸಿ ಆ ಮೂಲಕ ಆರ್ಥಿಕವಾಗಿ ಅನುಕೂಲ ಇರುವವರು ಬಡವರಿಗೆ ತಮ್ಮಿಂದ ಸಾಧ್ಯವಿರುವಷ್ಟು ದಾನ ನೀಡಬೇಕು ಎನ್ನುವುದು ಉಪವಾಸ ವ್ರತಾಚರಣೆಯ ಪ್ರಮುಖ ಉದ್ದೇಶ."ದಾನ ನೀಡುವಷ್ಟು ಸಾಂಪತ್ತಿಕವಾಗಿ ಶಕ್ತಿ ಇಲ್ಲದಿದ್ದರೂ ಕನಿಷ್ಟ ಒಳ್ಳೆಯ ಮಾತುಗಳನ್ನಾಡಬೇಕು" ಎನ್ನುವುದು ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ) ಅವರ ಉಪದೇಶವಾಗಿದೆ.ಉಪವಾಸ ಮಾಡಿ ಸುಳ್ಳು ಮತ್ತು ಕೆಟ್ಟ ನಡವಳಿಕೆಗಳನ್ನು ತ್ಯಜಿಸದೆ ಕೇವಲ ಹಸಿವು ಮತ್ತು ಬಾಯಾರಿಕೆಯನ್ನು ತ್ಯಜಿಸಿದ ಮಾತ್ರಕ್ಕೆ ಏನೂ ಪ್ರಯೋಜನವಿಲ್ಲ. ಆದ್ದರಿಂದ ಎಲ್ಲ ರೀತಿಯ ಕೆಡುಕುಗಳನ್ನು ವರ್ಜಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲು ರಮಝಾನ್ ತಿಂಗಳ ಉಪವಾಸ ನಮಗೆ ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ.ಅದರಂತೆ ವರ್ಷದ ಉಳಿದ ತಿಂಗಳುಗಳಲ್ಲೂ ಸದಾಚಾರದಿಂದ ಇರಲು ಉಪವಾಸ ವ್ರತಾನುಷ್ಠಾನವು ಅತ್ಯುತ್ತಮ ಮಾದರಿಯಾಗಿದೆ. ವ್ರತಾಚರಣೆಯಿಂದ ಆರೋಗ್ಯ ಲಾಭವೂ ಪ್ರಾಪ್ತಿಯಾಗುತ್ತದೆ. ನಮ್ಮ ಜಠರಕ್ಕೆ ವಿಶ್ರಾಂತಿ, ಮೆದುಳಿಗೆ ನವಚೈತನ್ಯ ಉಂಟಾಗಿ ದೇಹವು ಉಲ್ಲಾಸಭರಿತವಾಗುತ್ತದೆ. ಜೊತೆಗೆ ಶಾರೀರಿಕ, ನೈತಿಕ ಮತ್ತು ಆಧ್ಯಾತ್ಮಿಕವಾಗಿ ಸಕಲ ದುರಾಚಾರಗಳಿಂದ ನಮ್ಮನ್ನು ಮುಕ್ತರನ್ನಾಗಿಸುತ್ತದೆ. ಹೀಗೆ ನಮ್ಮ ನಡೆ-ನುಡಿಗಳು ಪರಿಪೂರ್ಣಗೊಂಡಾಗ ಮಾತ್ರ ರಮಝಾನ್ ತಿಂಗಳ ವ್ರತಾಚರಣೆ ಅರ್ಥಪೂರ್ಣವಾದೀತು ಎನ್ನಬಹುದು.

"ಸರ್ವೇ ಜನಾಃ ಸುಖಿನೋಭವಂತು", ಪ್ರತಿಯೊಂದು ಧರ್ಮಗಳೂ ಒಳ್ಳೆಯದನ್ನೇ ಬೋಧಿಸುತ್ತವೆ. ಎಲ್ಲರನ್ನೂ ಗೌರವಿಸಿದಾಗ ಮಾತ್ರ ನಾವೂ ಗೌರವಕ್ಕೆ ಪಾತ್ರರಾಗುತ್ತೇವೆ. ಜಗತ್ತಿನ ಎಲ್ಲ ಜನರೂ ಸುಖಕರವಾಗಿರಲಿ, ನೆಮ್ಮದಿಯ ಸಮಾಜ ನಮ್ಮದಾಗಲಿ.-ಬಿ.ಎಸ್.ರಫೀಕ್ ಅಹ್ಮದ್, ಮಡಿಕೇರಿ

ಸಂಘರ್ಷಗಳನ್ನು ತಗ್ಗಿಸುವ ತರಬೇತಿ

ಮೂವತ್ತು ದಿನಗಳ ಹಿಂದೆ ರಮಝಾನ್ ತಿಂಗಳ ಚಂದ್ರ ದರ್ಶನವಾದ ಮರುದಿನವೇ ನಾವು ಮನೆಯವರೆಲ್ಲರೂ ಸೇರಿ ಉಪವಾಸ ಆರಂಭಿಸಿದೆವು. ನಮ್ಮ ಮೇಲೆ ಒಂದು ರೀತಿಯ ನಿರ್ಬಂಧ ಹೇರಲಾಯ್ತು ಎಂದು ಎನಿಸಿದರೂ ನಮಗೆ ಸಂಭ್ರಮ-ಸAತೋಷದ ಅನುಭವ. ಕಳೆದ ೧೧ ತಿಂಗಳಿAದ ರೂಡಿಸಿಕೊಂಡು ಬಂದಿದ್ದ ದಿನನಿತ್ಯದ ಕೆಲಸಗಳಿಗೆಲ್ಲ ತುಸು ಬದಲಾವಣೆ. ಒಂದು ತಿಂಗಳ ಮಟ್ಟಿಗೆ ಹೊಸ ವೇಳಾಪಟ್ಟಿ. ೧೧ ತಿಂಗಳು ನಾವು ಮಾಡುತಿದ್ದ ದಿನ ನಿತ್ಯದ ನಮಾಝಿನಂತಹ ಆರಾಧನೆಗಳಿಗೆ ಹೊರತಾಗಿಯೂ ಐಚ್ಚಿಕ ಆರಾಧನೆಗಳಿಗೆ ಹೆಚ್ಚಿಗೆ ಸಮಯ ಮೀಸಲಿರಿಸಲಿಕ್ಕೆ ಸಾಧ್ಯವಾಗುತ್ತಿತ್ತು. ಅದಕ್ಕಿಂತಲೂ ಮಿಗಿಲಾಗಿ ಪವಿತ್ರ ಕುರ್‌ಆನಿನ ಪಾರಾಯಣ ಮತ್ತು ಅಧ್ಯಯನದ ಅನುಭವ ಹೇಳತೀರದು. ಕುರ್‌ಆನ್ ಅಧ್ಯಯನ ಮಾಡುತ್ತಿದ್ದಂತೆಯೇ ನಾವು ಹೊಸತೊಂದು ಜಗತ್ತಿಗೆ ಪ್ರವೇಶಿಸುತ್ತಿದ್ದ ಅನುಭವ ಉಂಟಾಗುತ್ತಿತ್ತು.

ರಾತ್ರಿ ಕಾಲದ ನಮಾಝ್‌ಗೆ ಪುರುಷರಂತೆಯೇ ಮಹಿಳೆಯರಾದ ನಮಗೂ ಮಸೀದಿಯವರು ಅವಕಾಶ ಕಲ್ಪಿಸಿದ್ದರು. ಇದರಿಂದಾಗಿ ಸಂಜೆಯ ತಿಂಡಿ ಮುಗಿಸಿದನಂತರ ನಾವು ನಮ್ಮ ವಠಾರದಲ್ಲಿರುವ ಮಹಿಳೆಯರೆಲ್ಲರೂ ತರಾವೀಹ್ ನಮಾಝ್‌ಗೆ ಹತ್ತಿರದ ಹವಾ ನಿಯಂತ್ರಿತ ಮಸೀದಿಯಲ್ಲಿ ಸಾಮೂಹಿಕ ನಮಾಝ್‌ಗಾಗಿ ಸೇರುತ್ತಿದ್ದುದು ಮರೆಯಲಾರದ ಅನುಭವ. ಹೆಣ್ಣು ಮಕ್ಕಳು, ತಾಯಂದಿರೊAದಿಗೆ ಬರುವÀ ಪುಟ್ಟಮಕ್ಕಳ ಕಲರವ ತುಸು ಮುಜುಗುರ ಆಗುತ್ತಿದ್ದರೂ ಒಳಗೊಳಗೆ ಸಂತಸ ತರುತ್ತಿತ್ತು. ಶವ್ವಾಲ್ ತಿಂಗಳ ಚಂದ್ರದರ್ಶನ ಹಬ್ಬದ ಸಡಗರ-ಸಂಭ್ರಮಕ್ಕೆ ನಾಂದಿ ಹಾಡುವುದಾದರೂ ಮೇಲಿನ ಒಟ್ಟು ಸೇರುವಿಕೆ ಇನ್ನು ಮುಂದಿನ ೧೧ ತಿಂಗಳು ಇಲ್ಲವಲ್ಲಾ ಎಂಬ ಬೇಸರವೂ ತರುತ್ತಿತ್ತು.

ಮುಂಜಾನೆಯ ಸಹರಿ ಊಟದ ನಂತರ ಸುಡು ಬಿಸಿಲಿನ ಬೇಸಿಗೆಯ ಸುದೀರ್ಘ ೧೪ ಗಂಟೆ ಉಪವಾಸವಿರುವುದು ಸುಲಭದ ಮಾತಲ್ಲ. ಆದರೂ ಜನರ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನು ಪವಿತ್ರ ಕುರ್‌ಆನ್ ಅವತೀರ್ಣಗೊಳಿಸಿದುದಕ್ಕಾಗಿ ಕೃತಜ್ಞತೆ ತೋರಲು ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ಸಂತಸವಾಗುತ್ತಿತ್ತು. ಸಂಜೆ ವೇಳೆ ಉಪವಾಸ ಬಿಡುಗಡೆ(ಇಫ್ತಾರ್)ಯ ಸಮಯಕ್ಕೆ ಮನೆಯವರಿಗೆಲ್ಲಾ ಆಹಾರ, ಉಪಹಾರದ ವ್ಯವಸ್ಥೆ ಮಾಡುವುದು ನಮಗಳ ದೊಡ್ಡ ಹೊಣೆಗಹಾರಿಕೆಯಾಗಿದ್ದರೂ ಪವಿತ್ರ ರಮಝಾನಿನ ಪ್ರತಿಫಲದ ಮುಂದೆ ಅದೊಂದು ಹೊರೆಯೆಂದು ಭಾಸವಾಗುತ್ತಿರಲಿಲ್ಲ. ರಮಝಾನಿನ ವೇಳೆಯಲ್ಲಿ ನಾವು ಉಪವಾಸವಿರುವಾಗ ನಮ್ಮ ಸುತ್ತಮುತ್ತಲಿನಲ್ಲಿ ದಿನನಿತ್ಯದ ಆಹಾರಕ್ಕೂ ಗತಿಯಿಲ್ಲದವರ ಸಂಕಷ್ಟದ ಅರಿವು ನಮ್ಮನ್ನು ಕಾಡುತ್ತಿತ್ತು. ವೈಯಕ್ತಿಕ ಬದುಕಿನಲ್ಲಿ ಧಾರ್ಮಿಕ ವ್ಯಕ್ತಿತ್ವ ಬೆಳೆದು ಬರಬೇಕು ಎಂಬುದು ನಾನು ರಮಝಾನಿನಿಂದ ಕಲಿತ ಪಾಠ. ಜೀವನದಲ್ಲಿ ಸಾಮಾನ್ಯವಾಗಿ ಎದುರಾಗುವ ಅನಿಶ್ಚಿತತೆ ಮತ್ತು ಸಂಘರ್ಷಗಳನ್ನು ತಗ್ಗಿಸುವ ತರಬೇತಿ ರಮಝಾನಿನಿಂದ ನನಗೆ ಲಭಿಸಿತು.

-ಝೈನಬಾ ರೆಹೆಮಾನ್ ಪಿ.ಎ., ವೀರಾಜಪೇಟೆ

ಜೀವನ ಮುಂದುವರೆಯಲು ಪ್ರಯೋಜನ

ಈ ವರ್ಷದ ಪವಿತ್ರ ರಂಜಾನ್ ಉಪವಾಸ ವ್ರತದ ವಿಶೇಷ ಅನುಭವದ ಬಗ್ಗೆ ಹೇಳಬೇಕೆಂದರೆ..

ಬಿಸಿಲಿನ ತಾಪಮಾನ ಏರಿಕೆಯಿಂದ ಸ್ವಲ್ಪ ಸುಸ್ತು ಆಯಾಸವಿದ್ದಿದು ನಿಜ. ರಾತ್ರಿ ಮಲಗುವಾಗ ಅಲಾರಂ ಇಟ್ಟು ಮಲಗುವೆ. ಸೆಖೆಗೆ ತಡರಾತ್ರಿಯಾದರೂ ಕಣ್ಣಿಗೆ ನಿದ್ದೆ ಬರುತ್ತಿರಲಿಲ್ಲ ಆದರೆ ಬೆಳಗ್ಗಿನ ಜಾವ ಮೂರೂವರೆ ನಾಲ್ಕು ಗಂಟೆಗೆ ಅಲರಾಂ ಬಡಕೊಳ್ಳುತ್ತೆ, ಕಣ್ಣೇ ಬಿಡಕ್ಕಾಗಲ್ಲ ಅಷ್ಟರಮಟ್ಟಿಗೆ ನಿದ್ದೆಮಂ�