ಇಸ್ಲಾಂ ಧರ್ಮದ ೪ನೇ ಕಡ್ಡಾಯ ಕರ್ಮವಾಗಿರುವ ಪವಿತ್ರ ರಂಜಾನ್ ತಿಂಗಳ ವ್ರತಾಚರಣೆ ತೀರಾ ಮಹತ್ವವಾದದ್ದು. ಮನುಷ್ಯನಲ್ಲಿರುವ ಸಹಜವಾದ ದೌರ್ಬಲ್ಯಗಳನ್ನು ಮುಕ್ತಿಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಈ ಪೂರ್ಣ ಒಂದು ತಿಂಗಳ ರಂಜಾನ್ ವ್ರತಾಚರಣೆಯ ಆಶಯವಾಗಿದೆ. ಈ ಒಂದು ತಿಂಗಳಿನಲ್ಲಿ ನಮಗೆ ಅರಿವಿಲ್ಲದಂತೆಯೇ ಎಲ್ಲ ಬಯಕೆಗಳ ಮೇಲೆ ಸ್ವಯಂ ನಿಯಂತ್ರಣ ಹೇರಲ್ಪಡುತ್ತದೆ. ಆಹಾರ, ಪಾನೀಯ ಮತ್ತು ಇತರ ಬಯಕೆಗಳಿಂದ ಸ್ವಇಚ್ಛೆಯಿಂದ ದೂರ ಉಳಿಯುವ ಮೂಲಕ ತೀವ್ರ ವಿಧೇಯತೆಯನ್ನು ಹೆಚ್ಚಿಸುತ್ತದೆ.
ಮೊದಲಿನಿಂದಲೂ ಆಹಾರಪ್ರಿಯನಾಗಿರುವ ನಾನು ಹೊಟ್ಟೆಗೆ 'ಅನ್ಯಾಯ' ಮಾಡುವವನಲ್ಲ. ಬೇಕಾದ ಆಹಾರವನ್ನು ಇಷ್ಟಪಟ್ಟು ತಿನ್ನುವ ನಾನು ರಂಜಾನ್ ವ್ರತಾಚರಣೆ ಸಂದರ್ಭದಲ್ಲಿ ಮಾತ್ರ ಇದರ ಮಹತ್ವವನ್ನು ಕಾಪಾಡುವುದಕ್ಕೆ ಮೊದಲ ಆದ್ಯತೆಯನ್ನು ಹಿಂದಿನಿAದಲೂ ನೀಡುತ್ತಾ ಬಂದಿರುವುದು ವಾಡಿಕೆಯಾಗಿದೆ. ನನಗೆ ರಂಜಾನ್ ತಿಂಗಳಲ್ಲದ ಸಮಯದಲ್ಲಿ ಮಧ್ಯಾಹ್ನ ೨ ಗಂಟೆಯೊಳಗೆ ಊಟ ಮಾಡದಿದ್ದಲ್ಲಿ ಹೊಟ್ಟೆ ಹಸಿದು ಲವಲವಿಕೆ ಕುಸಿಯುತ್ತಾ ಹೋಗುತ್ತದೆ. ಆದರೆ ವ್ರತಾಚರಣೆ ಸಂದರ್ಭದಲ್ಲಿ ಮಾತ್ರ ಹಗಲಿನ ಹಸಿವಿನ ಪರಿವೇ ಇರುವುದಿಲ್ಲ. ಆರಂಭದ ಎರಡು ದಿನದ ವ್ರತಾಚರಣೆ ಸವಾಲೊಡ್ಡಿದರೂ, ನಂತರದ ದಿನಗಳಲ್ಲಿ ಅದಕ್ಕೆ ಪ್ರತಿ ಸವಾಲೊಡ್ಡಲು ದೇಹ ಸಜ್ಜಾಗಿಬಿಡುತ್ತದೆ.
ರಂಜಾನ್ನ ಉಪವಾಸವು ನಮ್ರತೆಯ ಪಾಠವಾಗಿದೆ. ಈ ವ್ರತ ಮಾಸಾಚರಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ದಿನದ ಕನಿಷ್ಟ ೧೪ ತಾಸುಗಳ ಹಸಿವಿನ ಬೆಲೆಯನ್ನು ನಿಖರವಾಗಿ ಕಲಿಸುತ್ತದೆ. ಅಲ್ಲದೆ, ಇದು ನಮ್ಮ ತಾಳ್ಮೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಹೀಗಾಗಿ ಧಾರ್ಮಿಕ ನಂಬಿಕೆಯಲ್ಲಿರುವ ನಮ್ಮ ಬದ್ಧತೆಯನ್ನು ಮತ್ತಷ್ಟು ವೃದ್ಧಿಸಿದಂತಾಗುತ್ತದೆ. ಪ್ರತಿವರ್ಷ ೨೯ ಅಥವಾ ೩೦ ದಿನಗಳ ಕಾಲ ರಂಜಾನ್ ವ್ರತಾಚರಣೆ ಅಭ್ಯಾಸ ಮಾಡುವುದರಿಂದ ವರ್ಷದ ಉಳಿದ ಅವಧಿಯ ನೀತಿ ಸಂಹಿತೆಯೇ ಬದಲಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಇದು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಉಪವಾಸವು ಸ್ವಯಂ-ಶಿಸ್ತು ಮತ್ತು ಸ್ವಯಂ ನಿಯಂತ್ರಣವನ್ನು ಬೆಳೆಸಲು ಹೆಚ್ಚು ಸಹಾಯ ಮಾಡುತ್ತದೆ.
ಉಪವಾಸದ ಸಮಯದಲ್ಲಿ ನಮ್ಮ ದೇಹವು ನಿರ್ವಿಶೀಕರಣದ ಪ್ರಕ್ರಿಯೆಗೆ ಒಳಗಾಗುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನಾಶಪಡಿಸುತ್ತದೆ. ಈ ಪ್ರಕ್ರಿಯೆಯು ದೇಹದಿಂದ ವಿಷ ಮತ್ತು ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಉಪವಾಸ ಮಾಸಾಚರಣೆ ನಮ್ಮ ದೈಹಿಕ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಉಂಟುಮಾಡುತ್ತದೆ. ಈ ಕುರಿತು ಸಾಕಷ್ಟು ವೈದ್ಯಕೀಯ ಅಧ್ಯಯನಗಳು ನಡೆದಿದ್ದು, ಉಪವಾಸದಿಂದಾಗಿ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದೆಂಬ ರಂಜಾನ್ ಆಚರಣೆಯ ಆಶಯವನ್ನು ಎತ್ತಿ ಹಿಡಿದಿದೆ.
ರಂಜಾನ್ ಉಪವಾಸ ಆಚರಣೆ ನೈತಿಕ ಪ್ರಜ್ಞೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಹಾದಿಯನ್ನು ಪುನರ್ ನಿರ್ದೇಶಿಸುತ್ತದೆ. ವಿಶೇಷವಾಗಿ ‘ತಕ್ವಾ'(ನಿಷ್ಠೆ)ವನ್ನು ಸಾಧಿಸಲು ಪ್ರೇರೇಪಿಸುತ್ತಲೇ ಇರುತ್ತದೆ.
-ರಫೀಕ್ ತೂಚಮಕೇರಿ
ಆರೋಗ್ಯಕರ ಜೀವನಕ್ಕೆ ಮುನ್ನುಡಿ
ರಂಜಾನ್ ಉಪವಾಸವನ್ನು ಇಸ್ಲಾಂ ಧರ್ಮದ ೫ ಸ್ತಂಭಗಳಲ್ಲಿ ಒಂದೆAದು ಪರಿಗಣಿಸಲಾಗಿದೆ. ಧಾರ್ಮಿಕ ಆಚರಣೆಯ ಭಾಗವಾಗಿ ಉಪವಾಸ ಒಂದು ಕಡೆಯಾದರೆ ಆರೋಗ್ಯ ವಿಷಯದಲ್ಲೂ ರಂಜಾನ್ ಸಮಯದಲ್ಲಿ ಮರುಕಳಿಸುವ ಉಪವಾಸವು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ.
ರAಜಾನ್ ಉಪವಾಸದಿಂದ ದೇಹದ ಕೆಟ್ಟಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ಹಾನಿಕಾರಕ ಜೀವಾಣುಗಳಿಂದ ನಿಮ್ಮ ದೇಹವನ್ನು ಶುದ್ಧೀಕರಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿದೂಗಿಸಿ ಆರೋಗ್ಯಕರ ಜೀವನ ಶೈಲಿಯನ್ನೂ ಮುಂದುವರಿಸಲು ಅವಕಾಶ ನೀಡುತ್ತದೆ.
ಆಹಾರ ನೀರು ಇಲ್ಲದೆ ೧೨-೧೪ ಗಂಟೆಗಳ ಕಾಲ ಮಾಡುವ ಉಪವಾಸವು ಮನುಷ್ಯನ ಮನೋಸ್ಥಿತಿ ಸಾಮರ್ಥ್ಯ ಹೆಚ್ಚಿಸಿ ದೃಢಮನೋಭಾವ ಬೆಳೆಸುತ್ತದೆ. ಈ ವರ್ಷದ ಉಪವಾಸ ಬೇಸಿಗೆ ಕಾಲದಲ್ಲಿ ಬಂದಿರುವುದು ನೋಡುಗರಿಗೆ ತಿಳಿದವರಿಗೆ ತುಸು ಕಷ್ಟ ಎನಿಸಬಹುದು. ಆದರೆ, ಅನನ್ಯ ಭಕ್ತಿ ನಿರಾಕಾರ ದೇವರ ಮೇಲೆ ಇಡುವ ಏಕಾಗ್ರತೆಯಿಂದ ಕಷ್ಟವೆನಿಸುವುದಿಲ್ಲ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳು ವೈಜ್ಞಾನಿಕವಾಗಿ ದೃಢವೆನಿಸಿ ದೀರ್ಘಾಯುಷ್ಯದ ಆರೋಗ್ಯಕರ ಜೀವನಕ್ಕೆ ಮುನ್ನುಡಿಯಾಗುತ್ತದೆ.
ಮನುಷ್ಯನ ಮನೋಸ್ಥಿತಿ ಸಾಮರ್ಥ್ಯ ಹೆಚ್ಚಿಸಿ ದೃಢಮನೋಭಾವ ಬೆಳೆಸುತ್ತದೆ. ಈ ವರ್ಷದ ಉಪವಾಸ ಬೇಸಿಗೆ ಕಾಲದಲ್ಲಿ ಬಂದಿರುವುದು ನೋಡುಗರಿಗೆ ತಿಳಿದವರಿಗೆ ತುಸು ಕಷ್ಟ ಎನಿಸಬಹುದು. ಆದರೆ, ಅನನ್ಯ ಭಕ್ತಿ ನಿರಾಕಾರ ದೇವರ ಮೇಲೆ ಇಡುವ ಏಕಾಗ್ರತೆಯಿಂದ ಕಷ್ಟವೆನಿಸುವುದಿಲ್ಲ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳು ವೈಜ್ಞಾನಿಕವಾಗಿ ದೃಢವೆನಿಸಿ ದೀರ್ಘಾಯುಷ್ಯದ ಆರೋಗ್ಯಕರ ಜೀವನಕ್ಕೆ ಮುನ್ನುಡಿಯಾಗುತ್ತದೆ.
-ಎಂ.ಎ. ಮನ್ಸೂರ್ ಆಲಿ, ನಾಪೋಕ್ಲು ಮನುಷ್ಯನ ಮನೋಸ್ಥಿತಿ ಸಾಮರ್ಥ್ಯ ಹೆಚ್ಚಿಸಿ ದೃಢಮನೋಭಾವ ಬೆಳೆಸುತ್ತದೆ. ಈ ವರ್ಷದ ಉಪವಾಸ ಬೇಸಿಗೆ ಕಾಲದಲ್ಲಿ ಬಂದಿರುವುದು ನೋಡುಗರಿಗೆ ತಿಳಿದವರಿಗೆ ತುಸು ಕಷ್ಟ ಎನಿಸಬಹುದು. ಆದರೆ, ಅನನ್ಯ ಭಕ್ತಿ ನಿರಾಕಾರ ದೇವರ ಮೇಲೆ ಇಡುವ ಏಕಾಗ್ರತೆಯಿಂದ ಕಷ್ಟವೆನಿಸುವುದಿಲ್ಲ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳು ವೈಜ್ಞಾನಿಕವಾಗಿ ದೃಢವೆನಿಸಿ ದೀರ್ಘಾಯುಷ್ಯದ ಆರೋಗ್ಯಕರ ಜೀವನಕ್ಕೆ ಮುನ್ನುಡಿಯಾಗುತ್ತದೆ.
-ಎಂ.ಎ. ಮನ್ಸೂರ್ ಆಲಿ, ನಾಪೋಕ್ಲು
ಆಧ್ಯಾತ್ಮಿಕತೆಗೆ ಮೆರಗು ನೀಡಿದ ರಂಝಾನ್
ಇಸ್ಲಾA ಧರ್ಮದ ಪಂಚ ಸ್ಥಂಭಗಳಲ್ಲಿ ಒಂದೆನಿಸಿದ ಪವಿತ್ರ ರಂಝಾನ್ ತಿಂಗಳ ಉಪವಾಸ ಸಮಾಪ್ತಿಗೊಂಡಿದೆ. ೧೪ ಕ್ಕೂ ಹೆಚ್ಚು ಘಂಟೆಗಳ ಕಾಲ ಹಗಲು ಹೊತ್ತಿನಲ್ಲಿ ಅನ್ನ, ಪಾನಿಯ ಸಂಪೂರ್ಣವಾಗಿ ತೊರೆದು ಶರೀರವನ್ನು ಅಲ್ಲಾಹನ ಆದೇಶಕ್ಕೆ ಸಂಪೂರ್ಣವಾಗಿ ಬದ್ದರಾಗಿಸಬೇಕಾದುದು ವ್ರತದ ಪ್ರಮುಖ ಆಕರ್ಷಣೆಯಾಗಿದೆ.
ಇಸ್ಲಾಮಿಕ್ ವ್ರತ ಜಗತ್ತಿನಲ್ಲಿ ಮತ್ತಿತ್ತರ ಧರ್ಮೀಯರ ವ್ರತಕ್ಕಿಂತಲೂ ತ್ರಾಸದಾಯಕವಾಗಿದೆ. ಉಪವಾಸ ಮನುಜನ ಆಂತರಿಕ ಶುದ್ಧಿ ಮಾಡುತ್ತದೆ. ದೈನಂದಿನ ಜೀವನದಲ್ಲಿ ನಾವು ಮಾಡುವ ಯಡವಟ್ಟು ವ್ರತದ ಪೂರ್ಣಪ್ರಮಾಣದ ಪ್ರತಿಫಲದ ಲಭ್ಯತೆಗೆ ತ್ರಾಸದಾಯಕವಾಗಿದೆ. ಇಸ್ಲಾಂ ಧರ್ಮದಲ್ಲಿ ರಂಝಾನ್ ತಿಂಗಳಲ್ಲಿ ತರಾವೀಹ್ ನಮಾಜ್, ಪವಿತ್ರ ಖುರಾನ್ ಪಠಣದೊಂದಿಗೆ, ದಾನ ದರ್ಮಗಳ ಮೂಲಕ ಭಕ್ತಾದಿಗಳು ಧನ್ಯಗೊಳಿಸುತ್ತಾರೆ. ರಂಝಾನ್ ಸಮಯದಲ್ಲಿ ಎರಡು ಬಾರಿ ಆಹಾರ ಸೇವಿಸುತ್ತೇವೆ ಸೂರ್ಯೋದಯಕ್ಕೆ ಮೊದಲು ಸೇವಿಸುವುದಕ್ಕೆ ಸಹರಿ (ಅತ್ತಾಯ) ಹಾಗೂ ಸೂರ್ಯ ಮುಳುಗುವ ಸಮಯಕ್ಕೆ (ಮಗ್ರಿಬ್) ಸೇವಿಸುವುದಕ್ಕೆ ಇಫ್ತಾರ್ ಎಂದು ಕರೆಯುತ್ತಾರೆ.ಇಫ್ತಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿ ಅಥವಾ ಮನೆಗಳಲ್ಲಿ ಖರ್ಜುರ, ಹಣ್ಣು ಹಂಪಲು, ತಿಂಡಿ ತಿನಿಸುಗಳನ್ನು ತಂದು ಬಡವ, ಶ್ರೀಮಂತ, ಉನ್ನತ, ಕನಿಷ್ಟ ಕರಿಯ, ಬಿಳಿಯ ಎನ್ನುವ ಭೇದ ಬಾವ ಇಲ್ಲದೆ ಮಾನವೀಯತೆ ಮೆರೆಯುವ ಮೂಲಕ ಸಾಮೂಹಿಕವಾಗಿ ಉಪವಾಸ ವೃತ ಮುಗಿಸುತ್ತಾರೆ. ರಂಝಾನ್ ತಿಂಗಳಲ್ಲಿ ಪುರುಷರು ಮಸೀದಿಯಲ್ಲಿ ಎಲ್ಲಾ ಪ್ರಾರ್ಥನೆಗಳಿಗೆ ಹಾಜರಾಗುತ್ತಾರೆ.
ಪವಿತ್ರ ರಂಝಾನ್ ತಿಂಗಳಿನಲ್ಲಿ ನಾವು ಮೈಗೂಡಿಸಿಕೊಂಡು ಬೆಳೆದ ಸತ್ಕಾರ್ಯಕ್ಕೆ ಕಡಿವಾಣ ಹಾಕದೆ ಮುಂದುವರಿಸಲು ಶ್ರಮಯಿರಲೆಂದು ಆಶಿಸುತ್ತೇನೆ. ಕೌಟುಂಬಿಕ ಸಂಬAಧಗಳು ಬೆಸೆಯುವ ಈ ದಿನಗಳಲ್ಲಿ ಯಾವುದೇ ಅಭಿಪ್ರಾಯ ಭಿನ್ನತೆಯ ನೆಪದಲ್ಲಿ ಕುಟುಂಬ ಸಂಪರ್ಕ ಬೆಸೆಯಲು ಯಾರೂ ಮರೆಯಿದಿರಿ ಎಂಬ ಕೋರಿಕೆಯೊಂದಿಗೆ ನಾಡಿನ ಸಮಸ್ತ ಜನತೆಗೆ ನ್ಯಾಯ ಬದ್ಧತೆಯ ಸಂಕೇತವಾಗಿರುವ ಪವಿತ್ರ ರಂಝಾನ್ ಹಬ್ಬದ ಶುಭಾಶಯಗಳು.
-ಅಶ್ರಫ್ ಚೆಯ್ಯಂಡಾಣೆ.