ಮಡಿಕೇರಿ, ಏ. ೧೧: ಜಿಲ್ಲೆಯಲ್ಲಿ ಗುರುವಾರವೂ ರಂಜಾನ್ ಆಚರಣೆ ಸಂಭ್ರಮದಿAದ ನಡೆಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಮುಸ್ಲಿಂ ಸಮುದಾಯದವರು ಜಾಮಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ನಮಾಜ್ ನೆರವೇರಿಸಿದರು.
ಕುಶಾಲನಗರ: ಕುಶಾಲನಗರ ಜಾಮಿಯಾ ಮಸೀದಿ, ದಂಡಿನಪೇಟೆ ಮಸೀದಿಯಲ್ಲಿ ಪೂಜೆ ಸಲ್ಲಿಸಿದ ಮುಸ್ಲಿಂ ಸಮುದಾಯದವರು ಗಂಧದಕೋಟೆ ಬಳಿ ತೆರಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ನೆರವೇರಿಸಿದರು. ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು ಹಾಗೂ ಸಮೃದ್ಧಿ ಉಂಟಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.೩ಏಳನೇ ಪುಟಕ್ಕೆ (ಮೊದಲ ಪುಟದಿಂದ) ಶನಿವಾರಸಂತೆ ಜಾಮೀಯಾ ಮಸೀದಿಯಲ್ಲಿ ರಂಜಾನ್ ಪ್ರಯುಕ್ತ ನಮಾಜ್ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿಯೂ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಜಾಮೀಯಾ ಮಸೀದಿ ಧರ್ಮಗುರು ಮಹಮ್ಮದ್ ಸಾದಿಕ್ ಧಾರ್ಮಿಕ ಪ್ರವಚನ ನೀಡಿದರು. ಮಸೀದಿ ಅಧ್ಯಕ್ಷ ರಿಸಾಲತ್, ಪದಾಧಿಕಾರಿಗಳು, ಗುರು ಝೆಹುರಲ್ ರೆಹಮಾನ್, ಜಾಫÀರ್ ಹುಸೇನ್ ಮತ್ತಿತರರು ಹಾಜರಿದ್ದರು